Advertisement

ಕೋಲ್ಕತಾ:3ನೇ ಮಹಡಿಯಿಂದ ಬಿದ್ದು ಗಗನಸಖಿ ಸಾವು 

03:20 PM Aug 17, 2017 | |

ಕೋಲ್ಕತಾ : ಇಲ್ಲಿ  ಬುಧವಾರ ನಡೆದ ಆಘಾತಕಾರಿ ಘಟನೆಯೊಂದರಲ್ಲಿ  3ನೇ ಮಹಡಿಯಿಂದ ಆಯತಪ್ಪಿ ಬಿದ್ದು 23 ರ ಹರೆಯದ ಗಗನ ಸಖಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. 

Advertisement

ಖಾಸಗಿ ವಿಮಾನ ಸಂಸ್ಥೆಯಲ್ಲಿ ಗಗನ ಸಖಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಶಿಲ್ಲಾಂಗ್‌ ನಿವಾಸಿ  ಖೋಗ್‌ಸಿಟ್‌ ಕ್ಲಾರಾ ಬನ್‌ಶಾ ರೇ ಅವರು ಮೃತಪಟ್ಟ ದುರ್ದೈವಿ.

ಕೆಸ್ಟೋಪುರ್‌ ಎಂಬಲ್ಲಿ ಸ್ನೇಹಿತೆಯ ಮನೆಗೆ ಬರ್ತ್‌ ಡೇ ಪಾರ್ಟಿಗೆ ತೆರಳಿದ್ದ ವೇಳೆ ಅವಘಡ ನಡೆದಿದೆ ಎಂದು ವರದಿಯಾಗಿದೆ. 

ಫ್ಲ್ಯಾಟ್‌ನ ಕಿಟಕಿಯಿಂದ ಹೊರಗೆ ಬಿದ್ದಿದ್ದು,ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಇದು ಆತ್ಮಹತ್ಯೆಯೋ , ಅವಘಡವೋ ಎಂದು ಇನ್ನಷ್ಟೇ ತಿಳಿದು ಬರಬೇಕಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next