Advertisement

ಕೊಲ್ಹಾಪುರಿ ಚಪ್ಪಲ್‌ ಕಾರುಬಾರ್‌

11:20 PM Jan 23, 2020 | Sriram |

ಹುಡುಗರಿಗೆ ಬಹಳ ಇಷ್ಟವಾಗುವ ಕೊಲ್ಹಾಪುರಿ ಚಪ್ಪಲಿಗಳ ಬಗ್ಗೆ ಬರೆದಿದ್ದಾರೆ ಸುಶ್ಮಿತಾ ಜೈನ್‌. ಅವರು ಹೇಳುವಂತೆ ಕೊಲ್ಹಾಪುರಿ ಚಪ್ಪಲಿಗಳ ಹುಟ್ಟು ನಮ್ಮ ಕರ್ನಾಟಕದಲ್ಲೇ. ಜನಪ್ರಿಯವಾಗಿರುವುದು ಕೊಲ್ಹಾಪುರದಲ್ಲಿ. ಅದಕ್ಕಿಂತಲೂ ಹೆಚ್ಚಾಗಿ ಬಹಳ ನಾವೀನ್ಯ ವಿನ್ಯಾಸದ ದಿರಿಸುಗಳನ್ನು ಇಷ್ಟ ಪಡುವ ಇಂದಿನ ಹುಡುಗರಿಗೂ ಹೊಂದುವಂಥ ಸಾಂಪ್ರದಾಯಿಕ ಪಾದರಕ್ಷೆಗಳೆಂದರೆ ಇವೇ ಎನ್ನುವುದು ಅವರ ಅಭಿಪ್ರಾಯ.

Advertisement

ಹುಡುಗಿಯರು ಅಲಂಕಾರ ಪ್ರಿಯರು, ಫ್ಯಾಷನ್‌ ಲೋಕದಲ್ಲಿ ಅವರು ಬಳಸುವ ವಸ್ತುಗಳಿಗೆ ಮಾತ್ರ ಅಸ್ಪದ ಎನ್ನುವ ಕಾಲ ಹೋಯಿತು. ಚೆಂದದ ಬೆಡಗಿಯರ ಮುಂದೆ ಯುವರಾಜರಂತೆ ಮಿಂಚಬೇಕು ಎನ್ನುವುದು ಈಗಿನ ಹುಡುಗರ ಮನದಾಸೆ. ಫ್ಯಾಷನ್‌ ಲೋಕದಲ್ಲಿ ಟ್ರೆಂಡ್‌ ಆಗಿರುವ ದೇಸಿ ಉಡುಪುಗಳು ಇಂಥವರ ಮೊದಲ ಆಯ್ಕೆ. ಪಾಶ್ಚಾತ್ಯ ಉಡುಗೆಗಳಿಗೆ ದೇಸಿ ಮೆರುಗು ನೀಡಿರುವ ವಿಭಿನ್ನ ಶೈಲಿಯ ಹುಡುಗರ ದಿರಿಸುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಜತೆಗೆ ಅವರ ಕೋಮಲವಾದ ಕಾಲುಗಳ ಅಂದವನ್ನು ಮತ್ತಷ್ಟು ಹೆಚ್ಚಿಸುವ ಕೊಲ್ಹಾಪುರಿ ಚಪ್ಪಲಿಗಳು, ಶೂಗಳು ಕಾರುಬಾರು ಜೋರಾಗಿ ನಡೆಯುತ್ತಿದ್ದು, ಫಾರ್ಮಲ್‌ ದಿರಿಸುಗಳಿಂದ ಹಿಡಿದು ಮದುವೆ ಮನೆಗಳಲ್ಲಿ ವೈಟ್‌ ಆ್ಯಂಡ್‌ ವೈಟ್‌ ಪಂಚೆ ತೊಟ್ಟು ಜಬರ್‌ದಸ್ತ್ ಆಗಿ ಓಡಾಡುವವರಿಗೂ, ಪೈಜಾಮ ತೊಡುವ ಚಾಕಲೇಟ್‌ ಬಾಯ್ಸಗೂ ಈ ಕೊಲ್ಹಾಪುರಿ ಶೈಲಿ ಚಪ್ಪಲಿಗಳು ರಾಜ ಗಾಂಭೀರ್ಯವನ್ನು ತಂದುಕೊಡುತ್ತವೆ.

ಸಾಂಪ್ರದಾಯಿಕ ಮೆರುಗು
ರಾಜ್ಯ ಗಡಿಯನ್ನಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಗಡಿಗಳನ್ನೂ ದಾಟಿ ಫ್ಯಾಷನ್‌ ಲೋಕದಲ್ಲಿ ಸದ್ದು ಮಾಡುತ್ತಿರುವ ಈ ಚಪ್ಪಲಿಗಳು ಮಹಾರಾಷ್ಟ್ರದ ಸಾಂಸ್ಕೃತಿಕ ದಿರಿಸುಗಳ ಪ್ರತೀಕ. ಅಲ್ಲಿನ ಸಾಂಪ್ರದಾಯಿಕ ಪಾದರಕ್ಷೆಯಾಗಿರುವ ಕೊಲ್ಹಾಪುರಿ ಚಪ್ಪಲಿಗಳು ಇಂದಿನ ಮೋಹನಾಂಗರರ ಕಾಲುಗಳಲ್ಲಿ ರಾರಾಜಿಸುತ್ತಿರುವುದು ವಿಶೇಷ. ಪಕ್ಕಾ ದೇಸಿ ಗಾಂಭೀರ್ಯವನ್ನು ನೀಡುತ್ತಿರುವುದು ಇನ್ನೂ ವಿಶೇಷ.

ಚೂಪು ಮೂತಿ ವಿನ್ಯಾಸ
ಕೊಲ್ಹಾಪುರಿ ಚಪ್ಪಲಿ ಕೂಡ ಇತ್ತೀಚಿನ ಫ್ಯಾಷನ್‌ಗೆ ತಕ್ಕಂತೆ ಬದಲಾಗುತ್ತಿದ್ದು, ಸುಂದರರ ಅಂದವನ್ನು ಹೆಚ್ಚಿಸುತ್ತಿದೆ. ದಿನನಿತ್ಯದ ಉಡುಗೆಗಳಿಗೂ ಹೊಂದಾಣಿಕೆಯಾಗುವ ಈ ಚಪ್ಪಲಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಚೂಪು ಮೂತಿ ಮಾದರಿಯಲ್ಲಿ ಇದನ್ನು ವಿನ್ಯಾಸ ಮಾಡಲಾಗಿದ್ದು, ಅದರ ಸರಳತೆಯಿಂದಲೇ ಹುಡುಗರ ಮನಸೆಳೆಯುತ್ತಿದೆ. ಇನ್ನು ಯುವಜನತೆಯಿಂದ ಹಿಡಿದು ಮಧ್ಯ ವಯಸ್ಕರು ಮತ್ತು ವೃದ್ಧರು ಈ ಚಪ್ಪಲಿಗೆ ಫಿದಾ ಆಗಿದ್ದು, ಎಲ್ಲರಿಗೂ ಇದು ಇಷ್ಟದ ಪಾದರಕ್ಷೆಯಾಗಿದೆ.

ಸಾಂಪ್ರದಾಯಿಕ ದಿರಿಸಿಗೂ ಕೊಲ್ಹಾಪುರಿ ಶೂ ಸೂಕ್ತ
ಮಾರುಕಟ್ಟೆಯಲ್ಲಿ ಕೊಲ್ಹಾಪುರಿ ಶೂಗಳು ಲಭ್ಯವಾಗುತ್ತಿದ್ದು, ರಾಜ  ಯುವರಾಜರು ಧರಿಸುತ್ತಿದ್ದ ಪಾದರಕ್ಷೆ ವಿನ್ಯಾಸದ ಮಾದರಿ ಹೊಂದಿದೆ. ಸಾಂಪ್ರದಾಯಿಕ ದಿರಿಸುಗಳಾದ ರೇಷ್ಮೆ ಪಂಚೆ, ಧೋತಿ, ಶೆರ್ವಾನಿ, ಜುಬ್ಟಾ  ಪೈಜಾಮ, ಕೌಲ್‌ ಕುರ್ತಾ ಅಥವಾ ಡ್ರೇಪ್‌ ಕುರ್ತಾಗಳಿಂದ ಹಿಡಿದು ದಕ್ಷಿಣ ಭಾರತೀಯ ವರರ ದೇಸಿ ದಿರಿಸುಗಳಿಗೂ ಈ ಪಾದರಕ್ಷೆ ಅಥವಾ ಶೂಗಳು ಹೊಂದುತ್ತವೆ.

Advertisement

ಗುಣಮಟ್ಟದಲ್ಲಿ ರಾಜಿ ಇಲ್ಲ
ಈಗೀಗ ಪಾದರಕ್ಷೆ ಉದ್ಯಮದಲ್ಲಿ ಬಹುತೇಕ ಕುಶಲಕರ್ಮಿಗಳು ಯಂತ್ರದ ಮೂಲಕವೇ ಚಪ್ಪಲಿ ತಯಾರು ಮಾಡುತ್ತಿದ್ದಾರೆ. ಆದರೆ ಕೊಲ್ಹಾಪುರಿ ಚಪ್ಪಲಿ ತಯಾರಿಸುವ ಕುಶಲಕರ್ಮಿಗಳದ್ದು ಈಗಲೂ ಕೈ ಹೊಲಿಗೆಯೇ. ಹಾಗಾಗಿ ದಿನಕ್ಕೆ 2ರಿಂದ 3 ಜತೆ ಚಪ್ಪಲಿಯನ್ನಷ್ಟೇ ತಯಾರಿಸಬಹುದು. ಪ್ರತಿಯೊಂದನ್ನೂ ಕೈ ನಲ್ಲೇ ಮಾಡುವುದರಿಂದ ಕುಸುರಿಗಾರಿಕೆಯೂ ವಿಶಿಷ್ಟವಾಗಿರುತ್ತದೆ.

ಈ ಬಣ್ಣದಲ್ಲಿದ್ದರೆ ಸುಂದರ
ಬಿಳಿ, ಹಾಲ್ಗೆನ್ನೆಯ ಬಣ್ಣ, ತಿಳಿ ನೀಲಿ ಬಣ್ಣದ, ಪಾಚಿ ಹಸುರು, ಪಚ್ಚೆಕಲ್ಲನ್ನು ಹೋಲುವ ಮೋಸ್‌ಗ್ರೀನ್‌, ಕಾಫಿ ಪುಡಿ ಮತ್ತು ತಾಮ್ರದ ಬಣ್ಣವನ್ನು ಎರಕ ಹೊಯ್ದಂತಹ ಸೆಡಾರ್‌ ಬ್ರೌನ್‌, ರಾವೆನ್‌ ಬ್ಲ್ಯಾಕ್‌, ಗ್ರೀಸ್‌ ಬ್ಲ್ಯಾಕ್‌, ಕಂದು, ಲೋಹದ ಬಣ್ಣದ ಚಪ್ಪಲಿ ಅಥವಾ ಶೂಗಳು ಹುಡುಗರ ಕಾಲುಗಳ ಅಂದವನ್ನು ಹೆಚ್ಚಿಸುತ್ತದೆ.

ಸೆಲಬ್ರಿಟಿಗಳ ಕಾಲಲ್ಲಿ
ಫ್ಯಾಷನ್‌ ಶೋಗಳಲ್ಲಿ ನಡೆದಾಡುವ ಬೆಡಗ ಬೆಡಗಿಯರೂ ಕೊಲ್ಹಾಪುರಿ ಪಾದರಕ್ಷೆ ಧರಿಸಿ ಹೆಮ್ಮೆಯಿಂದ ಬೀಗಿದ್ದಾರೆ. ಸಚಿನ್‌ ತೆಂಡೂಲ್ಕರ್‌, ವಿರಾಟ್‌ ಕೊಹ್ಲಿ, ರಣವೀರ್‌ ಸಿಂಗ್‌, ಸೈಫ್ ಆಲಿ ಖಾನ್‌ ಸೇರಿದಂತೆ ಹಲವಾರು ಸೆಲೆಬ್ರಿಟಿಗಳೂ ಅನೇಕ ಸಂದರ್ಭಗಳಲ್ಲಿ ಕೊಲ್ಹಾಪುರಿ ಪಾದರಕ್ಷೆಗಳನ್ನು ತೊಟ್ಟವರೇ. ಬ್ರಾಂಡೆಡ್‌ ವ್ಯಕ್ತಿಗಳು ಕೊಲ್ಹಾಪುರಿ ಪಾದರಕ್ಷೆಗಳ ಮೊರೆ ಹೋಗುತ್ತಿದ್ದಾರೆ.

ಮಹಾರಾಷ್ಟ್ರದ ಕೊಲ್ಹಾಪುರ ಈ ಪಾದರಕ್ಷೆಗಳ ಜನ್ಮಸ್ಥಳವೆಂದು ಕೆಲವರು ಹೇಳಿದರೆ, ಕರ್ನಾಟಕ ಚರ್ಮೋದ್ಯೋಗ ಮಂಡಳಿ ಹೇಳುವಂತೆ ಕೊಲ್ಹಾಪುರಿ ಪಾದರಕ್ಷೆಗಳು ಜನ್ಮ ತಳೆದದ್ದು ಕರ್ನಾಟಕದ ಕಾಪ್ಸಿ ಎಂಬ ಹಳ್ಳಿಯಲ್ಲಿ. ಕಾಪ್ಸಿಯಲ್ಲಿ ಸಿದ್ಧವಾದ ಚಪ್ಪಲಿಗಳನ್ನು ಕೊಲ್ಹಾಪುರದ ಮಹಾಲಕ್ಷ್ಮೀ ದೇವಸ್ಥಾನದ ಬಳಿ ಮಾರಾಟ ಮಾಡುತ್ತಿದ್ದರಂತೆ. ಆಗಲೇ ಇದಕ್ಕೆ ಕೊಲ್ಹಾಪುರಿ ಚಪ್ಪಲಿ ಎಂಬ ಹೆಸರು ಬಂದಿದ್ದು ಎಂಬ ಮಾತೂ ಇದೆ. ಇಂದು ಕರ್ನಾಟಕದ ಅಥಣಿ, ನಿಪ್ಪಾಣಿ ಸುತ್ತಲಿನ ಹಳ್ಳಿಗಳಲ್ಲಿ ಮತ್ತು ಮಹಾರಾಷ್ಟ್ರದ ಸಾಂಗ್ಲಿ, ಮೀರಜಾ, ಕಾಪ್ಲಿ, ರಾಧಾನಗರಿ ಹಾಗೂ ಕಾಗಲ್ದಲ್ಲಿ ಬೃಹತ್‌ ಪ್ರಮಾಣದಲ್ಲಿ ಇದರ ತಯಾರಿಕೆ ನಡೆಯುತ್ತದೆ. ಇದೊಂದು ಗೃಹ ಉದ್ಯೋಗ. ಚರ್ಮ ಹಾಗೂ ಕಚ್ಚಾ ವಸ್ತುಗಳನ್ನು ಪಡೆದು ಕುಶಲಕರ್ಮಿಗಳು ಇಂದಿಗೂ ಮನೆಯÇÉೇ ಈ ಚಪ್ಪಲಿಯನ್ನು ತಯಾರಿ ಮಾಡುತ್ತಿರುವುದು ಹೆಗ್ಗಳಿಕೆ.

Advertisement

Udayavani is now on Telegram. Click here to join our channel and stay updated with the latest news.

Next