Advertisement
ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ಫೋಟೋ ಹಾಗೂ ಆಡಿಯೋವುಳ್ಳ ವಾಟ್ಸ್‌ಆ್ಯಪ್ ಸ್ಟೇಟಸ್ ವಿರುದ್ಧ ಬುಧವಾರ ಹಿಂದೂ ಸಂಘಟನೆಗಳು ಕರೆ ನೀಡಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ಹಿನ್ನೆಲೆಯಲ್ಲಿ ಕೊಲ್ಹಾಪುರದಲ್ಲಿ ಕರ್ಫ್ಯೂ ವಿಧಿಸಲಾಗಿತ್ತು.
ಮಹಾರಾಷ್ಟ್ರ ಶಾಲಾ ಶಿಕ್ಷಣ ಮತ್ತು ಮರಾಠಿ ಭಾಷೆ ಸಚಿವ ದೀಪಕ್ ಕೇಸರ್ಕರ್ ಅವರು ಗುರುವಾರ ಕೊಲ್ಹಾಪುರದ ವಿವಿಧ ಸಾಮಾಜಿಕ ಸಂಸ್ಥೆಗಳೊಂದಿಗೆ ಸಭೆ ನಡೆಸಿದ್ದಾರೆ. ನಾಗರಿಕ ಸಮಾಜದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇದರಲ್ಲಿ ಭಾಗಿಯಾಗಿದ್ದರು. ಶಾಂತಿ ಕಾಪಾಡಲು ಸಹಕರಿಸುವಂತೆ ಸಚಿವರು ಎಲ್ಲರಿಗೂ ಮನವಿ ಮಾಡಿªದಾರೆ.
Related Articles
ಪೋಸ್ಟರ್‌ಗಳು, ಸ್ಟೇಟಸ್‌ಗಳ ವಿಚಾರದಲ್ಲಿ ನಡೆದ ಹಿಂಸಾಚಾರವು ಮಹಾರಾಷ್ಟ್ರದ ಸಂಸ್ಕೃತಿಗೆ ತಕ್ಕುದಲ್ಲ. ಮಹಾರಾಷ್ಟ್ರವು ಶಾಂತಿ ಬಯಸುವ ರಾಜ್ಯವಾಗಿದೆ. ಮುಂದೆಂದೂ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಿ ಎಂದು ರಾಜ್ಯದ ಜನರಿಗೆ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಮನವಿ ಮಾಡಿದ್ದಾರೆ.
Advertisement