Advertisement

ಕೊಳವೆಬಾವಿ: ಪುತ್ತೂರಿಗಿಲ್ಲ ಅವಕಾಶ!

03:35 AM Feb 16, 2017 | Team Udayavani |

ಪುತ್ತೂರು: ರಾಜ್ಯ ಅಂತರ್ಜಲ ನಿರ್ದೇಶನಾಲಯ ಅಂತರ್ಜಲ ಮಟ್ಟದ ಕುರಿತು 2013ರಲ್ಲಿ ನೀಡಿದ ಮಾಹಿತಿ ಆಧಾರದಲ್ಲಿ ರಾಜ್ಯ ಸರಕಾರವು 20 ಜಿಲ್ಲೆಗಳ 65 ತಾಲೂಕುಗಳಲ್ಲಿ ಖಾಸಗಿ ನೀರಾವರಿಗೆ ಕೊಳವೆ ಬಾವಿ ಕೊರೆಯಲು ಅಧಿಕೃತ ಒಪ್ಪಿಗೆ ನೀಡಿದೆ. ದ.ಕ. ಜಿಲ್ಲೆಯಲ್ಲಿ ಪುತ್ತೂರು ತಾಲೂಕನ್ನು ಮಾತ್ರ ಇದರಿಂದ ಹೊರತುಧಿಪಡಿಸಲಾಗಿದೆ. ಉಳಿದ ನಾಲ್ಕು ತಾಲೂಕುಗಳಲ್ಲಿ ಕೊಳವೆ ಬಾವಿಗೆ ಅವಕಾಶ ನೀಡಲಾಗಿದೆ.

Advertisement

ಅಂತರ್ಜಲ ಮಟ್ಟ ತೀವ್ರಧಿವಾಗಿ ಕುಸಿದಿರುವ ಕಾರಣಕ್ಕೆ 2016 ಡಿ. 20ರಿಂದ ಹೊಸ ಬೋರ್‌ವೆಲ್‌ ಕೊರೆಯುವುದನ್ನು ತಡೆಗಟ್ಟಿ ಸರಕಾರ ಆದೇಶ ನೀಡಿತ್ತು.

20 ಜಿಲ್ಲೆ, 65 ತಾಲೂಕು: ರಾಜ್ಯದ ಬೆಳಗಾವಿ, ಬಳ್ಳಾರಿ, ಬೀದರ್‌, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ಧಾರವಾಡ, ಗದಗ, ಕಲುಬುರಗಿ, ಹಾಸನ, ಹಾವೇರಿ, ಕೊಡಗು, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ, ಯಾದಗಿರಿ ಜಿಲ್ಲೆಯ 65 ತಾಲೂಕುಗಳು ಕೊಳವೆ ಬಾವಿ ಕೊರೆಯಲು ಅವಕಾಶ ಇರುವ ಪಟ್ಟಿಯಲ್ಲಿ ಸೇರಿವೆ.

ಕರಾವಳಿಯ ನೋಟ: ದ.ಕ. ಜಿಲ್ಲೆಯಲ್ಲಿ ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ಮತ್ತು ಸುಳ್ಯ, ಉಡುಪಿ ಜಿಲ್ಲೆಯಲ್ಲಿ ಕಾರ್ಕಳ, ಕುಂದಾಪುರ, ಉಡುಪಿ, ಹಾಸನ ಜಿಲ್ಲೆಯಲ್ಲಿ ಅಲೂರು, ಅರಕಲಗೋಡು, ಸಕಲೇಶಪುರ, ಕೊಡಗು ಜಿಲ್ಲೆಯಲ್ಲಿ ಮಡಿಕೇರಿ, ವಿರಾಜಪೇಟೆ, ಸೋಮವಾರಧಿಪೇಟೆ, ಉತ್ತರ ಕನ್ನಡದಲ್ಲಿ ಅಂಕೋಲಾ, ಭಟ್ಕಳ, ಹೊನ್ನಾಧಿವರ, ಕಾರವಾರ, ಕುಮಟಾ, ಮುಂಡಧಿಗೋಡು, ಸಿದ್ಧಾಪುರ, ಶಿರಸಿ, ಯಲ್ಲಾಪುರ, ಸೂಪ ತಾಲೂಕಿನಲ್ಲಿ ಕೊಳವೆ ಬಾವಿಗೆ ಅವಕಾಶ ಕಲ್ಪಿಸಲಾಗಿದೆ.

ತಾಲೂಕುವಾರು ಸಮೀಕ್ಷೆ: ಲಭ್ಯ ಮಾಹಿತಿ ಆಧಾರಧಿದಲ್ಲಿ ಅಂತರ್ಜಲ ನೀರಿನ ಮಟ್ಟ ಬಂಟ್ವಾಳ ತಾಲೂಕಿನಲ್ಲಿ 2000ನೇ ಇಸವಿಯಲ್ಲಿ 8.15 ಮೀ. ಇದ್ದರೆ 2014ರಲ್ಲಿ 12.18 ಮೀ., ಬೆಳ್ತಂಗಡಿ ತಾಲೂಕಿನಲ್ಲಿ 2004ರಲ್ಲಿ 8.40 ಮೀ., 2014ರಲ್ಲಿ 9.80 ಮೀ., ಮಂಗಳೂರು ತಾಲೂಕಿಧಿನಲ್ಲಿ 2004ರಲ್ಲಿ 9.78 ಮೀ. ಇದ್ದರೆ 2014ರಲ್ಲಿ 17.40 ಮೀ.ಗೆ  ಇಳಿದಿದೆ. ಪುತ್ತೂರು ತಾಲೂಕಿನಲ್ಲಿ  2004ರಲ್ಲಿ 7.44 ಮೀ. ಇದ್ದರೆ 2014ರಲ್ಲಿ 10.84 ಮೀ.ಗೆ ಇಳಿದಿದೆ. ಸುಳ್ಯ ತಾಲೂಕಿನಲ್ಲಿ 2004ರಲ್ಲಿ 9.12 ಮೀ. ಇದ್ದರೆ 2014ರಲ್ಲಿ 11.69 ಮೀ.ಗೆ ಇಳಿದಿದೆ.

Advertisement

ಪುತ್ತೂರಿಗೆ ಯಾಕಿಲ್ಲ?
ಪುತ್ತೂರು ತಾಲೂಕಿನಲ್ಲಿ ಕೊಳವೆ ಬಾವಿ ಕೊರೆಯಲು ಅವಕಾಶ ನೀಡಿಲ್ಲ. ಕಾರಣ ಇಲ್ಲಿನ ಅಂತರ್ಜಲ ಮಟ್ಟ ಸುರಕ್ಷಿತವಾಗಿಲ್ಲ ಎಂದು ರಾಜ್ಯ ಅಂತರ್ಜಲ ನಿರ್ದೇಶನಾಲಯ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಪುತ್ತೂರು ತಾಲೂಕಿನಲ್ಲಿ 2010ರಲ್ಲಿ 5.5 ಮೀ., 2011ರಲ್ಲಿ 5.01 ಮೀ., 2012ರಲ್ಲಿ 6.01 ಮೀ., 2013 ರಲ್ಲಿ 6.4 ಮೀ., 2014ರಲ್ಲಿ 6.2 ಮೀ., 2015ರಲ್ಲಿ 6.8 ಮೀ., 2016ರಲ್ಲಿ 7.1 ಮೀ.ನಷ್ಟು ಅಂತರ್‌ ಜಲದ ಮಟ್ಟ ಕುಸಿತ ಕಂಡಿದೆ ಎಂದು ಹಿರಿಯ ಭೂ ವಿಜ್ಞಾನಿಧಿಗಳು ಮಾಹಿತಿ ನೀಡಿದ್ದಾರೆ.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next