Advertisement

ಕೊರಟಗೆರೆ: ವಿಜೃಂಭಣೆಯಿಂದ ನಡೆದ ಕೋಲಾಟ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ

06:23 PM Dec 23, 2021 | Team Udayavani |

ಕೊರಟಗೆರೆ: ತಾಲೂಕಿನ ಕಸಬಾ ಹೋಬಳಿಯ ಹೂಲೀಕುಂಟೆ ಗ್ರಾಮದಲ್ಲಿ ಕೋಲಾಟ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ವಿಜೃಂಭಣೆಯಾಗಿ ನಡೆಯಿತು.

Advertisement

ಏಳು ವರ್ಷಕ್ಕೆ ಒಮ್ಮೆ ನಡೆಯುವ ಗ್ರಾಮದೇವತೆ ಕೋಲಾಟ ಮಾರಮ್ಮ ದೇವಿಗೆ ಜಾತಿ-ಭೇದವಿಲ್ಲದೇ ಎಲ್ಲಾ ಸಮುದಾಯದವರು ಗ್ರಾಮದಲ್ಲಿ ಆರತಿ ಮಾಡಿ ದೇವರಿಗೆ ವಿಶೇಷ ಪೂಜೆಯನ್ನು ಮಾಡಿದರು.

ಕೋಲಾಟ ಮಾರಮ್ಮ ಜಾತ್ರಾಮಹೋತ್ಸದ ಕಾರ್ಯರ್ಯಕ್ರಮದ ಅಂಗವಾಗಿ ದೇವರ ರಥೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತೀ ಮನೆಯಲ್ಲಿಯಲ್ಲಿಯೂ ವಿಶೇಷ ಖಾಧ್ಯಗಳನ್ನು ಮಾಡಲಾಗಿತ್ತು, ಗ್ರಾಮದಲ್ಲಿ ವಿಶೇಷ ಆರತಿಗಳ ಮೆರವಣಿಗೆಯನ್ನು ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ಉಪಾಧ್ಯಕ್ಷ ಜಿ.ಎಂ ಕಾಮರಾಜು, ಗ್ರಾ.ಪಂ ಅಧ್ಯಕ್ಷ ರಮೇಶ್ ಊರಿನ ಹಳ್ಳಿ ಪಟೇಲರಾದ ಕೃಷ್ಣಮೂರ್ತಿ, ಕಸಬಾ ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ರುದ್ರಪ್ರಸಾದ್, ವಿಎಸ್ಎಸ್ಎನ್ ಕಾರ್ಯದರ್ಶಿ ಸತೀಶ್,  ಡಿಸಿಪಿ ಹರೀಶ್ ಕುಮಾರ್, ಮುಖಂಡರಾದ ಲೊಕೇಶ್, ವೀರಭದ್ರಯ್ಯ, ಕಾಕಿ ಮಲ್ಲಯ್ಯ, ಮಲ್ಲೇಗೌಡ, ವಿಜಯ್ ಕುಮಾರ್, ಕೃಷ್ಣಪ್ಪ, ಶಿವಾನಂದ, ಮುದ್ದಪ್ಪ, ನರಸೀಯಪ್ಪ, ಪುಟ್ಟರಾಮಯ್ಯ ಸೇರಿದಂತೆ ಹಲವು ಸ್ಥಳೀಯ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next