Advertisement
ನಗರದ ಗಲ್ಪೇಟೆ ಠಾಣೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಲವೇ ಕೆಲ ಠಾಣೆಗಳಲ್ಲಿ ಮಾತ್ರ ಅಪರಾಧಗಳ ಪತ್ತೆ ಕಾರ್ಯ ನಡೆಯುತ್ತಿದೆ. ಎಲ್ಲ ಠಾಣೆಗಳ ಕ್ರೈವಿಭಾಗದ ಪೊಲೀಸ್ ಸಿಬ್ಬಂದಿ ಕೈ ಜೋಡಿಸಿದರೆ ಕೋಲಾರ, ಚಿಕ್ಕಬಳ್ಳಾಪುರ, ಕೆಜಿಎಫ್ ಭಾಗದಲ್ಲಿ ನಡೆದಿರುವ ಪ್ರಕರಣವೂ ಪತ್ತೆಯಾಗುತ್ತದೆ. ಈ ಬಗ್ಗೆ ಎಸ್ಪಿಗೆ ಸೂಚಿಸುವುದಾಗಿ ತಿಳಿಸಿದರು.
Related Articles
Advertisement
ಜಿಲ್ಲೆಯ ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ಕಾನೂನು ಅರಿವು ಮೂಡಿಸುವ ಕೆಲಸವನ್ನು ನಗರದಲ್ಲಿ ಸ್ಥಾಪಿಸಿರುವ ಕೋಲಾರಮ್ಮ ಪಡೆ ನಿರ್ವಹಿಸಲಿದೆ ಎಂದು ಪೊಲೀಸ್ ಮಹಾನಿರೀಕ್ಷಕ ಶರತ್‌ಚಂದ್ರ ತಿಳಿಸಿದರು.
ನಗರದ ಗಲ್ಪೇಟೆ ಠಾಣೆ ಆವರಣದಲ್ಲಿ ಪೊಲೀಸ್ ಫಾರ್ಮ ಹಾಗೂ ಕೋಲಾರಮ್ಮ ಪಡೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆ ಮತ್ತು ಮಕ್ಕಳ ರಕ್ಷಣೆ ವಿಚಾರದಲ್ಲಿ ಆದ್ಯತೆ ನೀಡುತ್ತಾ ಬರುತ್ತಿದೆ. ಈ ದಿಸೆಯಲ್ಲಿ ಪೊಲೀಸ್ ಇಲಾಖೆ ಮಹಿಳಾ ಸಿಬ್ಬಂದಿಗಳನ್ನೇ ಒಳಗೊಂಡ ಪಡೆ ರಚಿಸುವ ಮೂಲಕ ಮಹಿಳಾ ರಕ್ಷಣೆ ಪ್ರಯತ್ನದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ ಎಂದರು.
ಜಿಲ್ಲೆಯ ಮೀಸಲು ಸಶಸ್ತ್ರಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 46 ಮಹಿಳಾ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ದ್ವಿಚಕ್ರ ವಾಹನ ಚಾಲನೆ, ಕರಾಟೆ, ದೈಹಿಕ ಸದೃಢತೆ ಕಾಪಾಡುವುದು, ಮಹಿಳೆ ಮತ್ತು ಮಕ್ಕಳ ಸುರಕ್ಷತೆ ಕ್ರಮಗಳು, ಸೈಬರ್ ಅಪರಾಧ ಕಾನೂನುಗಳ ಕುರಿತು ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಈ ಪಡೆ ಶಾಲಾ ಕಾಲೇಜು ಬಿಡುವ ಸಮಯದಲ್ಲಿ, ಬಸ್ ನಿಲ್ದಾಣ, ಜನಸಂದಣಿ ಪ್ರದೇಶದಲ್ಲಿ ಗಸ್ತು ತಿರುಗಿ ಪುಂಡಪೋಕರಿಗಳು ಚಲನವಲನಗಳ ಬಗ್ಗೆ ನಿಗಾ ಇಡುವುದು, ಮಹಿಳಾ ಮತ್ತು ಮಕ್ಕಳ ಸುರಕ್ಷತೆಗಾಗಿ ಕರ್ತವ್ಯ ನಿರ್ವಹಿಸಲಿದೆ ಎಂದು ನುಡಿದರು.
ಹೆಣ್ಣುಮಕ್ಕಳು, ಮಹಿಳೆಯರ ಮೇಲೆ ನಡೆಯುತಿರುವ ಲೈಂಗಿಕ ದೌರ್ಜನ್ಯಗಳು ಹತ್ತಿರದ ಸಂಬಂ—ಗಳು, ನೆಂಟರು, ಸ್ನೇಹಿತರಿಂದಲೇ ಹೆಚ್ಚು ನಡೆಯುತ್ತಿದೆ. 18 ವರ್ಷದೊಳಗಿನ ಹೆಣ್ಣುಮಕ್ಕಳು ಪ್ರೇಮಕ್ಕೆ ಸಿಲುಕಿ ತೊಂದರೆಗೆ ಒಳಗಾಗುತ್ತಾರೆ. ಪುಂಡಪೋಕರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ ಕಳುಹಿಸುವುದರಿಂದ ಆಗುವ ಸಮಸ್ಯೆ, ಸೈಬರ್ ಅಪರಾಧ ಇನ್ನಿತರೆ ಅಂಶಗಳ ಕುರಿತು ಕೋಲಾರಮ್ಮ ಪಡೆ ಪ್ರೌಢಶಾಲೆ, ಕಾಲೇಜು ಗಳಲ್ಲಿ ಅರಿವು ಮೂಡಿಸಲಿದ್ದಾರೆ ಎಂದರು.
ಹೆಣ್ಣು ಮಕ್ಕಳನ್ನು ಚುಡಾಯಿಸುವ, ಕುಡಿದು ಗಲಾಟೆ ಮಾಡುವ ಇನ್ನಿತರೆ ಅಪರಾಧ ಚಟುವಟಿಕೆಗಳ ಕುರಿತು ಸಾರ್ವಜನಿಕರು ಕೂಡ ಕೋಲಾರಮ್ಮ ಪಡೆಗೆ ಮಾಹಿತಿ ಅಥವಾ ಸಲಹೆಗಳನ್ನು ನೀಡಲು ಅನುಕೂಲವಾಗುವಂತೆ ಮುಂದಿನ ದಿನಗಳಲ್ಲಿ ಮೊಬೈಲ್ ಸಂಖ್ಯೆ ನೀಡಲಾಗುವುದು ಎಂದ ಅವರು, ಪೊಲೀಸ್ ಇಲಾಖೆ ದಿನದ 24 ಗಂಟೆಯೂ ಸೇವೆಗೆ ಸಿದ್ಧವಿದೆ ಎಂದರು. ಎಸ್ಪಿ ಕಾರ್ತಿಕ್‌ರೆಡ್ಡಿ ಮಾತನಾಡಿ, ಪೊಲೀಸರು ಒತ್ತಡದಿಂದ ಕಾರ್ಯ ನಿರ್ವಹಿಸುತ್ತಿರುತ್ತಾರೆ. ನಿವೃತ್ತರಾಗಿರುವ ಅನೇಕ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಮಧುಮೇಹ, ರಕ್ತದೊತ್ತಡ, ಇನ್ನಿತರೆ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇವರಿಗಾಗಿ ತೆರೆದಿರುವ ಪೊಲೀಸ್ ಔಷಧಾಲಯದಲ್ಲಿ ಸಾಮಾನ್ಯ ಔಷಧಗಳಿಗೆ ಶೇ.20 ಹಾಗೂ ಜನರಿಕ್ ಔಷಧಕ್ಕೆ ಶೇ.50 ರಿಯಾಯ್ತಿ ದರದಲ್ಲಿ ಔಷಧ ನೀಡಲಾ ಗುವುದು. ಇದನ್ನು ಸದ್ಬಳಸಿಕೊಳ್ಳಬೇಕೆಂದರು.
ಪೊಲೀಸರಿಗೆ ಸರ್ಕಾರದಿಂದ ಆರೋಗ್ಯ ಭಾಗ್ಯ ಯೋಜನೆ, ವಸತಿ ಸಹಿತ ನಿವೃತ್ತ ಪೊಲೀಸ್ ಸಿಬ್ಬಂದಿಗಳಿಗೆ 20/30 ನಿವೇಶನ, ಸೈನಿಕರ ಮಕ್ಕಳಿಗೆ ಸಿಗುವಂತೆ ಸೇವಾನಿರತ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ಮಕ್ಕಳಿಗೆ ಉನ್ನತ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವಂತೆ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೊಣ್ಣಪ್ಪ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಎಸ್ಪಿ ಎಸ್. ಜಾಹ್ನವಿ, ಡಿವೈಎಸ್ಪಿಗಳಾದ ಆರ್.ವಿ. ಚೌಡಪ್ಪ, ಉಮೇಶ್ ಸೇರಿದಂತೆ ವಿವಿಧ ಠಾಣೆಯ ಸಿಪಿಐ, ಪಿಎಸ್‌ಐಗಳು ಹಾಜರಿದ್ದರು.