Advertisement
ಮೈಸೂರಿನಲ್ಲಿಯೇ ಯೋಗ ಕಲಿತು ಅರಮನೆಯ ಯೋಗಾಚಾರ್ಯರಾಗಿ ರೂಪುಗೊಂಡು ಆನಂತರ ಯೋಗವನ್ನು ವಿಶ್ವದ ನೂರಕ್ಕೂ ಹೆಚ್ಚು ದೇಶಗಳಲ್ಲಿ ಪಸರಿಸಲು ಬಿ.ಕೆ.ಎಸ್.ಅಯ್ಯಂಗಾರ್ ಕಾರಣರಾದರು. ಸ್ತಬ್ಧಚಿತ್ರದ ಆಯ್ಕೆ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ಉಮಾಮಹದೇವನ್, ಜಿಪಂ ಸಿಇಒ ಯುಕೇಶ್‌ಕುಮಾರ್ ನೇತೃತ್ವದಲ್ಲಿ ಮೈಸೂರು ದಸರಾಗೆ ಕಳುಹಿಸಬೇಕಾಗಿರುವ ಸ್ತಬ್ಧಚಿತ್ರಗಳ ಕುರಿತಂತೆ ಸುದೀರ್ಘವಾಗಿ ಚರ್ಚಿಸಲಾಗಿತ್ತು. ಅಂತಿಮವಾಗಿ ಕೋಲಾರದ ಐತಿಹ್ಯ ಪುರಾಣ ಸ್ಥಳ ಮಹತ್ವದ ಮೂರು ಸ್ತಬ್ಧಚಿತ್ರಗಳ ವಿಷಯವನ್ನು ಮೈಸೂರು ದಸರಾ ಸಮಿತಿಗೆ ಕೋಲಾರದಿಂದ ತೆಗೆದುಕೊಂಡು ಹೋಗಲಾಗಿತ್ತು. ಮೈಸೂರು ದಸರಾ ಸಮಿತಿ ಮೂರರ ಪೈಕಿ ಈ ಶತಮಾನದಲ್ಲಿ ಯೋಗದ ಮಹತ್ವ ಸಾರಿದ ಬಿ. ಕೆ.ಎಸ್.ಅಯ್ಯಂಗಾರ್‌ರ ಸ್ತಬ್ಧಚಿತ್ರಕ್ಕೆ ಸಮ್ಮತಿ ನೀಡಿದೆ.
Related Articles
Advertisement
ಭಾರತ ಸರ್ಕಾರವು ಬಿ.ಕೆ.ಎಸ್.ಅಯ್ಯಂಗಾರ್‌ರಿಗೆ 1991 ರಲ್ಲಿ ಪದ್ಮಶ್ರೀ, 2002 ರಲ್ಲಿ ಪದ್ಮಭೂಷಣ ಹಾಗೂ 2014 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಬಿ.ಕೆ.ಎಸ್.ಅಯ್ಯಂಗಾರ್ 2014 ಆ. 20ರಂದು ತಮ್ಮ 95ನೇ ವಯಸ್ಸಿನಲ್ಲಿ ಪುಣೆಯ ಆಸ್ಪತ್ರೆಯಲ್ಲಿ ವಿಧಿವಶರಾದರು. ಇಂತ ಮಹನೀಯರ ಸಾಧನೆಯನ್ನು ಸಾರುವ ಸ್ತಬ್ಧಚಿತ್ರ ಕೋಲಾರ ಜಿಲ್ಲೆಯಿಂದ ಮೈಸೂರು ದಸರಾ ಉತ್ಸವದಲ್ಲಿ ಭಾಗವಹಿಸಲು ಆಯ್ಕೆಯಾಗಿರುವುದು ಜಿಲ್ಲೆಗೆ ಮಾತ್ರವಲ್ಲದೆ ಜಗತ್ತಿನಾದ್ಯಂತ ಇರುವ ಅವರ ಶಿಷ್ಯ ವೃಂದಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಸ್ತಬ್ಧಚಿತ್ರದ ರೂಪುರೇಶೆ : ಚಿತ್ರದ ಮುಂಭಾಗ ಮತ್ತು ಸುತ್ತಲೂ ಬಿ.ಕೆ.ಎಸ್.ಅಯ್ಯಂಗಾರ್ ರ ವಿವಿಧ ಯೋಗ ಭಂಗಿಗಳ ಚಿತ್ರಗಳು ಪ್ರದರ್ಶಿಸಲ್ಪಡಲಿದೆ. ಮಧ್ಯಭಾಗದಲ್ಲಿ ಕೋಲಾರದ ಅಂತರಗಂಗೆ ಬೆಟ್ಟದ ಹಿನ್ನೆಲೆಯನ್ನು ಬೆಟ್ಟದ ಮೇಲೆ ಯೋಗ ಪ್ರದರ್ಶಿಸುತ್ತಿರುವ ಚಿತ್ರಗಳನ್ನು ಅಳವಡಿಸಲಾಗುತ್ತಿದೆ. ಸ್ತಬ್ಧಚಿತ್ರದ ಮಧ್ಯಭಾಗದಲ್ಲಿ ಜನ ಯೋಗಾಭ್ಯಾಸ ಮಾಡುತ್ತಿರುವ ಚಿತ್ರಗಳಿರುತ್ತವೆ. ಹಿಂಭಾಗದಲ್ಲಿ ವಿಶ್ವದ ಬೃಹತ್ ಪ್ರತಿರೂಪದ ತುದಿಯಲ್ಲಿ ಅಯ್ಯಂಗಾರ್ ನಮಸ್ಕರಿಸುತ್ತಿರುವ ಪ್ರತಿಮೆಯಿದೆ.
ಯೋಗಾದಿನವನ್ನು ವಿಶ್ವಾದ್ಯಂತ ಆಚರಿಸುತ್ತಿರುವ ಕಾಲಘಟ್ಟದಲ್ಲಿ ಯೋಗವನ್ನು ಜಗತ್ತಿನಲ್ಲಿ ಜನಪ್ರಿಯವಾಗಲು ಕಾರಣರಾದ ಕೋಲಾರ ಜಿಲ್ಲೆಯ ಬಿ.ಕೆ. ಎಸ್.ಅಯ್ಯಂಗಾರ್‌ರ ಸ್ತಬ್ಧಚಿತ್ರವನ್ನು ಮೈಸೂರು ದಸರಾದಲ್ಲಿ ಕೋಲಾರ ಜಿಲ್ಲೆಯಿಂದ ಹೆಮ್ಮೆಯಿಂದ ಪ್ರದರ್ಶಿಸಿ ಯೋಗದ ಮಹತ್ವವನ್ನು ಸಾರಲು ಮುಂದಾಗಿದ್ದೇವೆ. -ಯುಕೇಶ್‌ಕುಮಾರ್, ಕೋಲಾರ ಜಿಪಂ ಸಿಇಒ
ಕೋಲಾರ ಜಿಲ್ಲೆಯಿಂದ ಈ ಬಾರಿ ಬಿ. ಕೆ.ಎಸ್.ಅಯ್ಯಂಗಾರ್‌ರ ಸ್ತಬ್ಧಚಿತ್ರ ಪಾಲ್ಗೊಳ್ಳಲಿದ್ದು, ಸ್ತಬ್ಧಚಿತ್ರವನ್ನು ಅತ್ಯುತ್ತಮವಾಗಿ ರೂಪಿಸಿ ಮೈಸೂರು ದಸರಾ ಉತ್ಸವದ ಆಕರ್ಷಣೀಯ ಕೇಂದ್ರಬಿಂದುವಾಗಿಸಲು ಶ್ರಮಿಸುತ್ತಿದ್ದೇವೆ. -ರವಿಚಂದ್ರ, ಉಪ ನಿರ್ದೇಶಕ, ಡಿಐಸಿ
-ಕೆ.ಎಸ್.ಗಣೇಶ್