Advertisement

Kolara: ಹೈಕೋರ್ಟ್‌ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್‌ ಪಥಸಂಚಲನ

02:23 AM Jan 06, 2025 | Team Udayavani |

ಕೋಲಾರ/ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್‌)ಕ್ಕೆ ಶತಮಾನೋತ್ಸವ ಸಂದರ್ಭದಲ್ಲಿ 3 ಜಿಲ್ಲೆಗಳ ಬೃಹತ್‌ ಪಥಸಂಚಲನವು ಪೊಲೀಸರ ಬಿಗಿ ಭದ್ರತೆಯಲ್ಲಿ ಜಿಲ್ಲಾ ಕೇಂದ್ರದಿಂದ ಸುಮಾರು 15 ಕಿ.ಮೀ. ದೂರದ ವಕ್ಕಲೇರಿ ಗ್ರಾಮದಲ್ಲಿ ರವಿವಾರ ನಡೆಯಿತು.

Advertisement

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಸ್ವಯಂಸೇವಕರು ಸಮವಸ್ತ್ರದಲ್ಲಿ ಲಾಠಿ ಹಿಡಿದು ಪಥಸಂಚಲನದಲ್ಲಿ ಸಾಗಿ ಬಂದರು.

ಪಥಸಂಚಲನ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿಗಳು ಶನಿವಾರ ರಾತ್ರಿ ಪ್ರಕಟನೆ ಹೊರಡಿಸಿ ಗಡಿಯಾರಗೋಪುರ ವೃತ್ತದ ಹಾದಿಯಲ್ಲಿ ನಿಷೇಧಾಜ್ಞೆ ಹೊರಡಿಸಿ, ಅಲ್ಪಸಂಖ್ಯಾಕರು ಹೆಚ್ಚಾಗಿರುವ ರಸ್ತೆಗಳಲ್ಲಿ ನಿರ್ಬಂಧ ಹೇರಿದ್ದರು. ಆದರೆ ರವಿವಾರ ಸಂಜೆ ವೇಳೆಗೆ ಹೈಕೋರ್ಟ್‌ ನೀಡಿದ ಅನುಮತಿ ಮೇರೆಗೆ ಪೊಲೀಸರು ಅನಿವಾರ್ಯವಾಗಿ ಗಡಿಯಾರ ಗೋಪುರ ವೃತ್ತದ ಮೂಲಕವೇ ಪಥಸಂಚಲನ ಸಾಗಿ ಬರಲು ಅನಿವಾರ್ಯವಾಗಿ ಬಂದೋಬಸ್ತ್ ಕೈಗೊಳ್ಳಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next