Advertisement

ದ್ವಿಚಕ್ರ ವಾಹನಕ್ಕೆ ಬಟ್ಟೆಕಟ್ಟಿ ಪ್ರತಿಭಟನೆ

07:19 PM Jun 13, 2021 | Team Udayavani |

ಕೆಜಿಎಫ್: ಬಿಜೆಪಿ ನೇತೃತ್ವದ ರಾಜ್ಯ ಮತ್ತುಕೇಂದ್ರ ಸರ್ಕಾರ ಎಲ್ಲಾ ವಸ್ತುಗಳ ಬೆಲೆ ಏರಿಕೆಮಾಡಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಕೋವಿಡ್‌ ಸಮಯದಲ್ಲಿ ಅವರಿಗೆ ಅನ್ಯಾಯ ಮಾಡಿದೆ ಶಾಸಕಿ ಎಂ.ರೂಪಕಲಾಆರೋಪಿಸಿದರು.

Advertisement

ನಗರದಲ್ಲಿ ಕಾಂಗ್ರೆಸ್‌ ಪಕ್ಷವು ನೂರುನಾಟೌಟ್‌ ಎಂಬ ಘೋಷಣೆಯಡಿ ಪೆಟ್ರೋಲ್‌ಮತ್ತು ಡೀಸಲ್‌ ಬೆಲೆ ಏರಿಕೆ ವಿರುದ್ಧಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ರಾಜ್ಯ ಸರ್ಕಾರ ಕಾರ್ಮಿಕರಿಗೆ,ಆಟೋ ಚಾಲಕರಿಗೆ, ರೈತರ ಖಾತೆಗಳಿಗೆ ದುಡ್ಡುಹಾಕಲಿಲ್ಲ. ಕಳೆದ ಕೊರೊನಾ ಸಮಯದಲ್ಲಿಘೋಷಣೆ ಮಾಡಿದ್ದ ದುಡ್ಡೇ ಇನ್ನೂ ಬಂದಿಲ್ಲ.ಈ ಸರ್ಕಾರ ಜನರ ಪರವಾಗಿ ಇಲ್ಲ ಎಂದುಆಕ್ರೋಶ ವ್ಯಕ್ತಪಡಿಸಿದರು.ಆರೋಗ್ಯ ಕಾಪಾಡುವಲ್ಲಿ ವಿಫ‌ಲ: ಸರ್ಕಾರಕ್ಕೆಜನಸಾಮಾನ್ಯರ ಮೇಲೆ ಅನುಕಂಪ ಇಲ್ಲ.ಜನರನ್ನು ಬೀದಿಯಲ್ಲಿ ನಿಲ್ಲುವಂತೆ ಮಾಡಿದೆ.

ಕೋವಿಡ್‌ ಸಂಕಷ್ಟದ ಸಮಯದಲ್ಲಿ ರಸ್ತೆಯಲ್ಲಿಮಲಗುವಂತೆ ಮಾಡಿದೆ. ಜನ ಬೆಡ್‌, ಆಕ್ಸಿಜನ್‌ಸಿಗದೆ ಒದಾxಡಿದ್ದಾರೆ. ಕುಟುಂಬಗಳುಅನಾಥವಾಗಿವೆ. ಜನರ ಕಷ್ಟಕಾಲದಲ್ಲಿ ಅವರನ್ನುಕಾಪಾಡಬೇಕಾದ ಸರ್ಕಾರ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಲಿಲ್ಲ. ರೋಗಿಗಳಆರೋಗ್ಯ ಕಾಪಾಡುವಲ್ಲಿ ವಿಫ‌ಲವಾಯಿತುಎಂದು ದೂರಿದರು.ಈ ಸರ್ಕಾರಕ್ಕೆ ಜನಸಾಮಾನ್ಯರು ಬುದ್ಧಿಕಲಿಸಬೇಕು. ಎಲ್ಲಾ ವರ್ಗದವರಿಗೆ ಬೆಲೆ ಏರಿಕೆಬಿಸಿ ತಟ್ಟಿದೆ.

ಜನ ವಿರೋಧಿ ಸರ್ಕಾರ ಇದಾಗಿದೆಎಂದರು.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಇಂಧನ ಬೆಲೆ ಏರಿಕೆಯಾಗದೆ ಇದ್ದರೂ, ಕೇಂದ್ರಸರ್ಕಾರ ಯಾಕೆ ಪಾರದರ್ಶಕತೆಯನ್ನುಕಾಪಾಡುತ್ತಿಲ್ಲ. ಯಾರ ಉದ್ದಾರಕ್ಕೆ ಬೆಲೆ ಏರಿಕೆಒಂದೇ ಸಮನೆ ಮಾಡುತ್ತಿದೆ ಎಂದುಪ್ರಶ್ನಿಸಿದರು.ಈ ಮೊದಲು ನಗರಸಭೆ ಮೈದಾನದಿಂದಮೆರವಣಿಗೆಯಲ್ಲಿ ಬಂದ ಕಾಂಗ್ರೆಸ್‌ಕಾರ್ಯಕರ್ತರು ಎಂ.ಜಿ.ವೃತ್ತದ ಬಳಿ ಹಳೇ ಬೈಕಿಗೆಬೆಂಕಿ ಇಟ್ಟು ಪ್ರತಿಭಟನೆ ವ್ಯಕ್ತಪಡಿಸಿದರು.

ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆಧಾವಿಸಿ ಬೆಂಕಿ ಆರಿಸಿದರು.ನಗರಸಭೆ ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ,ಉಪಾಧ್ಯಕ್ಷೆ ದೇವಿ, ಎಪಿಎಂಸಿ ಅಧ್ಯಕ್ಷವಿಜಯರಾಘವರೆಡ್ಡಿ, ಎನ್‌.ಆರ್‌.ವಿಜಯಶಂಕರ್‌, ಪದ್ಮನಾಭರೆಡ್ಡಿ, ರಮೇಶ್‌ಜೈನ್‌,ನಗರಸಭೆ ಸದಸ್ಯರಾದ ಇಂದಿರಾಗಾಂಧಿ,ರಮೇಶ್‌, ಜರ್ಮನ್‌, ಕರುಣಾಗರನ್‌, ವೇಣುಗೋಪಾಲ್‌, ಪ್ರಭು, ಸೇಂದಿಲ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next