Advertisement

ಶಾಸಕ ನಾರಾಯಣ ಸ್ವಾಮಿಗೆ ಸಂಸದ ಸೆಡ್ಡು

06:28 PM Jun 12, 2021 | Team Udayavani |

ಬಂಗಾರಪೇಟೆ: ಕ್ಷೇತ್ರದ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಅವರ ಗಾಲ್ಫ್ ರೆಸಾರ್ಟ್‌ನಲ್ಲಿಜಿಲ್ಲೆಯ ಕಾಂಗ್ರೆಸ್‌ ಶಾಸಕರು ನಡೆಸಿದ ಸಭೆ ನಂತರಸ್ಥಳೀಯ ಶಾಸಕ ಹಾಗೂಸಂಸದ ಮುನಿಸ್ವಾಮಿ ನಡುವೆಉಂಟಾದ ರಾಜಕೀಯಮುಸುಕಿನ ಗುದ್ದಾಟ ಇದೀಗಗ್ರಾಪಂ ಮಟ್ಟಕ್ಕೂ ಹಬ್ಬಿದೆ.

Advertisement

ತಮ್ಮ ವಿರುದ್ಧವೇ ತಿರುಗಿಬಿದ್ದಿರುವ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಅವರನ್ನುಮಣಿಸಲು ಸಂಸದಮುನಿಸ್ವಾಮಿ ಈಗಲೇತಯಾರಿ ನಡೆಸುತ್ತಿದ್ದು, ಇದಕ್ಕೆಬೆಂಬಲವೆಂಬಂತೆ ಬಿಜೆಪಿಬೆಂಬಲಿತ ಡಿ.ಕೆ.ಹಳ್ಳಿ ಗ್ರಾಪಂಅಧ್ಯಕ್ಷರು, ಸದಸ್ಯರು ಹಾಗೂಶಾಸಕರ ವಿರುದ್ಧ ಆಕ್ರೋಶಗೊಂಡಿರುವ ಕಾಂಗ್ರೆಸ್‌ಬೆಂಬಲಿತ ದೊಡ್ಡವಲಗಮಾದಿ ಗ್ರಾಪಂ ಅಧ್ಯಕ್ಷರು,ಸದಸ್ಯರು ಶಾಸಕರು ಕರೆದಿದ್ದ ಕುಂದುಕೊರತೆ ಸಭೆಗೆಗೈರಾಗುವ ಮೂಲಕ ಸಡ್ಡು ಹೊಡೆದಿದ್ದಾರೆ.ಸಂಸದ ಮುನಿಸ್ವಾಮಿ ಹಾಗೂ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಎರಡು ವರ್ಷಗಳಿಂದ ಸಹೋದರರಂತೆ ಇದ್ದರು.

ಸರ್ಕಾರಿ ಕಾರ್ಯಕ್ರಮಗಳಲ್ಲಿಇಬ್ಬರೂ ಒಟ್ಟಿಗೆ ಭಾಗವಹಿಸಿ, ಅಭಿವೃದ್ಧಿಗೆ ಪಕ್ಷಾತೀತವಾಗಿ ಕೈಜೋಡಿಸುವ ಮೂಲಕ ಜನರಿಗೆ ಉತ್ತಮಸಂದೇಶ ರವಾನೆ ಮಾಡಿದ್ದರು. ಯಾವಾಗ ತಮ್ಮರೆಸಾರ್ಟ್‌ನಲ್ಲಿ ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ಸೇರಿದಂತೆ ಜಿಲ್ಲೆಯ ಕಾಂಗ್ರೆಸ್‌ ಶಾಸಕರೊಂದಿಗೆ ಸಭೆನಡೆಸಿದರೋ ಅಂದಿನಿಂದ ಒಬ್ಬರನ್ನೊಬ್ಬರು ಪರೋಕ್ಷವಾಗಿ ಟೀಕೆ ಮಾಡುತ್ತ, ಹಾವು-ಮುಂಗುಸಿಯಂತೆವರ್ತಿಸುತ್ತಿದ್ದಾರೆ.

ಕೆಲ ಗ್ರಾಪಂ ಸದಸ್ಯರಿಂದಲೂ ಸಡ್ಡು: ತಾಲೂಕಿನಹುನುRಂದ, ಡಿ.ಕೆ.ಹಳ್ಳಿ, ಚಿನ್ನಕೋಟೆ ಹಾಗೂ ದೊಡ್ಡವಲಗಮಾದಿ ಗ್ರಾಪಂಗಳಲ್ಲಿ ಕೊರೊನಾ ಬಗ್ಗೆ ಜಾಗೃತಿಹಾಗೂ ಕುಂದುಕೊರತೆ ಬಗ್ಗೆ ಚರ್ಚೆ ಮಾಡಲುಶುಕ್ರವಾರ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿಸಭೆ ಕರೆದಿದ್ದರು. ಈ ಸಭೆಗೆ ಡಿ.ಕೆ.ಹಳ್ಳಿ, ದೊಡ್ಡ ವಲಗಮಾದಿ ಗ್ರಾಪಂನ ಅಧ್ಯಕ್ಷ, ಕೆಲ ಸದಸ್ಯರು ಗೈರಾಗುವಮೂಲಕ ಶಾಸಕರಿಗೆ ಸಡ್ಡು ಹೊಡೆದಿದ್ದಾರೆ.

ಗೈರಾದ ಗ್ರಾಪಂ ಅಧ್ಯಕ್ಷೆ, ಸದಸ್ಯರು: ಡಿ.ಕೆ.ಹಳ್ಳಿಗ್ರಾಪಂನ ಅಧ್ಯಕ್ಷ ಕಲಾವತಿ ರಮೇಶ್‌, ಉಪಾಧ್ಯಕ್ಷೆರಾಧಮ್ಮ ಸೇರಿ ಒಟ್ಟು 17 ಸದಸ್ಯರು ಶಾಸಕರ ಸಭೆಗೆಗೈರಾಗಿದ್ದರು. ಗ್ರಾಪಂ ಅಧ್ಯಕ್ಷೆ ಕಲಾವತಿ ಬಿಜೆಪಿಬೆಂಬಲಿಗರು, ರಾಧಮ್ಮ ಕಾಂಗ್ರೆಸ್‌ನಲ್ಲಿದ್ದರೂಇತ್ತೀಚಿನ ರಾಜಕೀಯ ಬೆಳವಣಿಗೆಯಿಂದ ಬಿಜೆಪಿಬೆಂಬಲಿಸಿದ್ದಾರೆ. ಇವರುಗಳು ಶಾಸಕರ ಸಭೆಗೆಗೈರಾಗಿ, ಬಿಜೆಪಿ ಜಿಪಂ ಸದಸ್ಯ ಬಿ.ವಿ.ಮಹೇಶ್‌ಆಲದಮರ ಬಳಿ ಜನರಿಗೆ ದಿನಸಿ ಕಿಟ್‌ ವಿತರಿಸುವಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

ವೈಮನಸ್ಯದಿಂದ ಭಿನ್ನಮತ ಸೃಷ್ಟಿ: ಕಾಂಗ್ರೆಸ್‌ನಹಿರಿಯ ಮುಖಂಡ ವಿ.ಶೇಷು ಅವರ ಪತ್ನಿದೊಡ್ಡವಲಗಮಾದಿ ಗ್ರಾಪಂನ ಅಧ್ಯಕ್ಷೆ ನಂದಿನಿಕಾಂಗ್ರೆಸ್‌ ಬೆಂಬಲದಿಂದಲೇ ಅಧ್ಯಕ್ಷರಾಗಿದ್ದಾರೆ. ಈಗ್ರಾಪಂನಲ್ಲಿ ಅಧ್ಯಕ್ಷರ ಬಣದ 10 ಮಂದಿ ಸದಸ್ಯರುಹಾಗೂ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿಬೆಂಬಲಿತ 6 ಸದಸ್ಯರ ನಡುವೆ ವೈಮನಸ್ಯ ಉಂಟಾಗಿಬೆಂಬಲಿತ ಪಕ್ಷದ ಶಾಸಕರ ಸಭೆ ಗೈರಾಗಿ ತಿರುಗಿಬಿದ್ದಿದ್ದಾರೆ. ಈ ಎರಡು ಗ್ರಾಪಂಗಳ ಅಧ್ಯಕ್ಷರು,ಸದಸ್ಯರು ಶಾಸಕರ ಸಭೆಗೆ ಗೈರಾಗುವುದರ ಮೂಲಕಸಂಸದರ ಹಾಗೂ ಶಾಸಕ ನಡುವಿನ ರಾಜಕೀಯಗುದ್ದಾಟಕ್ಕೆ ತುಪ್ಪ ಸುರಿದಿದ್ದಾರೆ.

ಎಂ.ಸಿ.ಮಂಜುನಾಥ್

Advertisement

Udayavani is now on Telegram. Click here to join our channel and stay updated with the latest news.

Next