Advertisement

ಕೆಜಿಎಫ್: ಭಾಷೆ ಹೆಸರಿನಲ್ಲಿ ಪ್ರಚೋದನೆ

07:15 PM Jul 21, 2021 | Team Udayavani |

ಕೆಜಿಎಫ್: ಭಾಷೆ ಹೆಸರಿನಲ್ಲಿ ಪ್ರಚೋದನೆ ನಡೆಸಿರುವವರನ್ನು ಪೊಲೀಸ್‌ಇಲಾಖೆಈಗಾಗಲೇ ಗುರ್ತಿಸಿದ್ದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್‌ ಹೇಳಿದ್ದಾರೆ.

Advertisement

ನಗರದ ರಾಬರ್ಟಸನ್‌ಪೇಟೆ ನಗರಸಭೆ ಬಸ್‌ನಿಲ್ದಾಣದಲ್ಲಿ ತಮಿಳು ನಾಮಫ‌ಲಕ ವಿಚಾರವಾಗಿಉದ್ಬವಿಸಿರುವ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮನ್ನುಭೇಟಿ ಮಾಡಿದ ಕನ್ನಡ ಪರ ಸಂಘಟನೆಗಳ ಮುಖಂಡರಿಂದ ಮನವಿ ಸ್ವೀಕರಿಸಿ ಮಾತನಾಡಿದರು.

ಯೂಟ್ಯೂಬ್‌ ವರದಿಗಾರರಿಗೆ ಸೂಚನೆ:ಈಗಾಗಲೇ ವಿವಾದ ಮುಗಿದಿದೆ. ಇನ್ನೂ ಪ್ರಚೋದನೆಕಾರಿಯಾಗಿ ಮಾತನಾಡುವವರ ವಿರುದ್ಧಕಾನೂನುಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆನೀಡಲಾಗಿದೆ. ಡಿವೈಎಸ್ಪಿ ಮುರಳೀಧರ್‌ ಅವರುನಗರದ ಯೂಟ್ಯೂಬ್‌ ವರದಿಗಾರರನ್ನು ಕರೆಯಿಸಿಎಚ್ಚರಿಕೆ ನೀಡಿದ್ದಾರೆ. ಪ್ರಚೋದಿತ ಹೇಳಿಕೆಗಳನ್ನುನೀಡದಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಭಾಷಾ ಸೌಹಾರ್ದತೆಗೆ ಧಕ್ಕೆ ಆಗದಿರಲಿ: ವಾಟಾಳ್‌ ನಾಗರಾಜ್‌ ನಗರಕ್ಕೆ 26 ರಂದು ಮುತ್ತಿಗೆಹಾಕುವುದಾಗಿ ಹೇಳಿದ್ದಾರೆ. ಹಿರಿಯ ಅಧಿಕಾರಿಗಳಸೂಚನೆಯಂತೆ ಅವರನ್ನು ಜಿಲ್ಲೆಯೊಳಗೆ ಬಿಡದಂತೆ ನಿರ್ಬಂಧ ಹೇರಲಾಗುವುದು. ಭಾಷಾ ಸೌಹಾರ್ದತೆ ಕುರಿತಂತೆ ಎಲ್ಲಾ ಭಾಷಿಕರ ಸಭೆ ಕರೆಯಬೇಕೆಂದು ಇಚ್ಛಿಸಲಾಗಿದೆ.ಯಾವುದೇಕಾರಣದಿಂದಲೂಭಾಷಾ ಸೌಹಾರ್ದತೆಗೆಧಕ್ಕೆ ಬರದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು.

ಕನ್ನಡ ಪರ ಸಂಘಟನೆಗಳ ಮುಖಂಡರಾದ ಎನ್‌.ಆರ್‌.ವಿಜಯಶಂಕರ್‌,ರಾಜಗೋಪಾಲಗೌಡ, ವಿ.ಎಸ್‌.ಪ್ರಕಾಶ್‌, ಅಶೋಕ್‌ಲೋಣಿ, ಬಾ.ಹಾ.ಶೇಖರಪ್ಪ ಕೆಜಿಎಫ್ ನಲ್ಲಿ ಕನ್ನಡಭಾಷೆ ನಡೆದು ಬಂದ ದಾರಿ ಬಗ್ಗೆ ವಿವರಿಸಿದರು.ವಾಟಾಳ್‌ ನಾಗರಾಜ್‌ ಅವರು ಇಲ್ಲಿನಕನ್ನಡ ಪರಸಂಘಟನೆಗಳ ಪ್ರತಿನಿಧಿಗಳಿಗೆ ಯಾವುದೇ ಸೂಚನೆ ನೀಡದೆ,

Advertisement

ಬಂದಿದ್ದಾರೆ. ಅವರಿಗೆ ನಾಮಫ‌ಲಕದಕುರಿತು ಯಾವುದೇ ರೀತಿಯ ಬೆಂಬಲ ಇಲ್ಲ. ಅದೇರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿಕನ್ನಡಿಗರನ್ನು ಹೀಯಾಳಿಸುವ ವ್ಯಕ್ತಿಗಳ ಮೇಲೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಮುಖಂಡರಾದ ಪ್ರಸನ್ನರೆಡ್ಡಿ, ಶ್ರೀನಿವಾಸ್‌,ಮದಿರಪ್ಪ, ನಂಜುಂಡಪ್ಪ, ಶಿವಪ್ರಕಾಶ್‌,ವೀರವೆಂಕಟಪ್ಪ, ವಿ.ಬಿ.ದೇಶಪಾಂಡೆಮತ್ತಿತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next