ಕೋಲಾರ: ಈವರೆಗೂ ಎಸಿ ಆಗಿ, ವರ್ಗಾವಣೆಆದ ಸೋಮಶೇಖರ್ ಅವರನ್ನು ಜಿಲ್ಲಾ ನೌಕರರಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ನೇತೃತ್ವದಲ್ಲಿಪದಾಧಿಕಾರಿಗಳು ಸನ್ಮಾನಿಸಿ ಬೀಳ್ಕೊಟ್ಟರು.ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದಸೋಮಶೇಖರ್, ರೈತರು, ಸಾರ್ವಜನಿಕರ ಸಮಸ್ಯೆಗಳಿಗೆ ಸದಾ ಸ್ಪಂದಿಸಿ ಕೆಲಸ ಮಾಡಿದ ತೃಪ್ತಿಇದೆ. ಜಿಲ್ಲೆಯ ಜನರ ಸಹಕಾರ ನನಗೆ ಸಿಕ್ಕಿದೆಎಂದು ತಿಳಿಸಿದರು.
ಸರ್ಕಾರಿ ನೌಕರಿಯಲ್ಲಿ ವರ್ಗಾವಣೆ ಸಾಮಾನ್ಯ.ಆದರೆ, ಸಿಕ್ಕ ಸಮಯದಲ್ಲಿ ಕಂದಾಯ ಇಲಾಖೆಗೆಸಂಬಂಧಿಸಿದಂತೆ ಜನರ ಕೆಲಸ ಮಾಡಿದ್ದಕ್ಕೆ ಖುಷಿಇದೆ ಎಂದು ತಿಳಿಸಿ, ಸಹಕಾರ ನೀಡಿದ ಜನತೆ,ಸಂಘ ಸಂಸ್ಥೆಗಳು, ಇಲಾಖೆ ಸಿಬ್ಬಂದಿಗೆ ಧನ್ಯವಾದಸಲ್ಲಿಸಿದರು.
ನೌಕರರ ಸಂಘಕ್ಕೆ ಜಮೀನು: ಎಸಿ ಅವರನ್ನುಸನ್ಮಾನಿಸಿದ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು, ಜಿಲ್ಲೆಯ ಕಂದಾಯ ಇಲಾಖೆಯಲ್ಲಿಅನೇಕ ಸಮಸ್ಯೆಗಳನ್ನು ಪರಿಹರಿಸಿದ್ದೀರಿ, ಇಲ್ಲಿನರೈತರ ಭೂ ವಿವಾದಗಳಿಗೆ ಕೊನೆಯಾಡಿದ್ದೀರಿ ಎಂದು ತಿಳಿಸಿ ಅಭಿನಂದಿಸಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ 5 ಎಕರೆಜಮೀನು ಮಂಜೂರು ಮಾಡುವ ಪ್ರಸ್ತಾವನೆಯನ್ನು ಒಂದೇ ದಿನದಲ್ಲಿ ಶಿಫಾರಸು ಮಾಡಿದ್ದು,ಇಡೀ ಜಿಲ್ಲೆಯ ನೌಕರರು ಅವರನ್ನು ಸ್ಮರಿಸುವ ಕೆಲಸ ಮಾಡಿದ್ದಾರೆ ಎಂದು ವಿವರಿಸಿದರು.
ನೂತನ ಎಸಿ ಆನಂದ್ ಪ್ರಕಾಶ್ ಮೀನಾ,ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಖಜಾಂಚಿ ವಿಜಯ್, ಗೌರವಾಧ್ಯಕ್ಷಶ್ರೀನಿವಾಸರೆಡ್ಡಿ, ರಾಜ್ಯ ಪರಿಷತ್ ಸದಸ್ಯ ಗೌತಮ್,ಉಪಾಧ್ಯಕ್ಷ ಪುರುಷೋತ್ತಮ್, ಜಿಲ್ಲಾ ಕಾರ್ಯದರ್ಶಿಶಿವಕುಮಾರ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರಸಂಘದ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್,ನೌಕರರ ಸಂಘದ ಜಂಟಿ ಕಾರ್ಯದರ್ಶಿಶ್ರೀನಿವಾಸಲು, ಮಂಜುನಾಥ್, ಸಂದೀಪ್, ಬಿ.ಮುನಿರಾಜು, ವೆಂಕಟರಮಣಪ್ಪ, ಕೆ.ಎಂ.ಮಂಜುನಾಥ್, ಎಂ. ಮುನಿಯಪ್ಪ,ನಾರಾಯಣಪ್ಪ, ನಟರಾಜ್ ಮತ್ತಿತರರಿದ್ದರು.