Advertisement
ಜಿಲ್ಲಾದ್ಯಂತ ದೇವಾಲಯ ಮತ್ತು ಇತರೆಧಾರ್ಮಿಕ ಕೇಂದ್ರಗಳನ್ನು ಸೋಮವಾರದಿಂದಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಲು ಅರ್ಚಕರುಹಾಗೂ ದೇವಾಲಯ ಆಡಳಿತ ಮಂಡಳಿಯುಸ್ವತ್ಛತಾಕಾರ್ಯಗಳ ಮೂಲಕ ಸಿದ್ಧತೆ ನಡೆಸಿವೆ.ದೇವಾಲಯಗಳ ಮಾದರಿಯಲ್ಲಿಯೇ ಚರ್ಚ್‌ಗಳಲ್ಲಿ ಆರಾಧನೆ ಹಾಗೂ ಸಾಮೂಹಿಕ ನಮಾಜ್‌ಗೂಧಾರ್ಮಿಕ ಮುಖಂಡರು ಸಿದ್ಧತೆ ನಡೆಸುತ್ತಿದ್ದಾರೆ.
Related Articles
Advertisement
ಇನ್ನುಳಿದವು ಗ್ರಾಮಾಂತರಪ್ರದೇಶದಲ್ಲಿ ವಾರಕ್ಕೊಮ್ಮೆ ಪೂಜೆ ಸ್ಪೀಕರಿಸುವಅಪರೂಪಕ್ಕೆ, ಹಬ್ಬ ಹರಿದಿನಗಳು ಮಾತ್ರವೇಭಕ್ತರು ಭೇಟಿ ಕೊಡುವ ಸಿ ದರ್ಜೆಯದೇವಾಲಯಗಳೆಂದು ಗುರುತಿಸಲಾಗಿದೆ.
ದೇವಾಲಯಗಳ ಸ್ವತ್ಛತಾ ಕಾರ್ಯ: ಎರಡೂವರೆತಿಂಗಳ ನಂತರ ಸರಕಾರವು ದೇವಾಲಯಗಳನ್ನುತೆರೆಯಲು ಅವಕಾಶ ಕಲ್ಪಿಸಿರುವುದರಿಂದ ಭಾನುವಾರ ಬಹುತೇಕ ದೇವಾಲಯಗಳಲ್ಲಿ ಸ್ವತ್ಛತಾಕಾರ್ಯ ಕೈಗೊಳ್ಳಲಾಯಿತು.
ಅಂತರಗಂಗೆ ಬೆಟ್ಟದಕಾಶೀ ವಿಶ್ವೇಶ್ವರಯ್ಯ, ಸೋಮೇಶ್ವರ ಹಾಗೂಕೋಲಾರಮ್ಮ ದೇವಾಲಯಗಳನ್ನು ಅರ್ಚಕರಮಾರ್ಗದರ್ಶನದಲ್ಲಿ ಸಿಬ್ಬಂದಿ ವಿವಿಧ ಸ್ವತ್ಛತಾಕಾರ್ಯ ನಡೆಸಿದರು. ಲಾಕ್‌ಡೌನ್ ಅವಧಿಯಲ್ಲಿದೇಗುಲಗಳನ್ನು ತೆರೆದು ಅರ್ಚಕರು ಮಾತ್ರವೇನಿತ್ಯ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿತ್ತಾದರೂ, ಭಕ್ತರ ಪ್ರವೇಶಕ್ಕೆ ಅವಕಾಶ ಇರಲಿಲ್ಲ.
ದೇಗುಲ ಪ್ರವೇಶಕ್ಕೆ ಅಗತ್ಯ ಕ್ರಮ: ಸೋಮವಾರದಿಂದ ಭಕ್ತರು ದೇವಾಲಯಗಳಿಗೆ ಆಗಮಿಸಿದೇವರ ದರ್ಶನ ಪಡೆದುಕೊಳ್ಳಲು ಅವಕಾಶನೀಡಿರುವುದರಿಂದ ದೇವಾಲಯಗಳಲ್ಲಿ ಭಕ್ತರಿಗೆಕೋವಿಡ್ ಮಾರ್ಗಸೂಚಿ ಪ್ರಕಾರ ಸ್ಯಾನಿಟೈಸರ್‌ನೀಡಲು,ಸಾಮಾಜಿಕಅಂತರಕಾಪಾಡಿಕೊಳ್ಳುವಂತೆಮಾಡಲು ಮತ್ತು ಕಡ್ಡಾಯವಾಗಿ ಮಾಸ್ಕ್ಧರಿಸಿಯೇ ದೇವಾಲಯ ಪ್ರವೇಶಿಸುವಂತೆಮಾಡಲು ಅಗತ್ಯಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅಸಮಾಧಾನ: ಸರಕಾರ ಮೂರನೇ ಹಂತದ ಲಾಕ್‌ಡೌನ್ ಸಡಿಲಿಕೆಯಲ್ಲಿ ದೇವಾಲಯ ಮತ್ತು ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಿದೆಯಾದರೂ, ವಿಶೇಷ ಪೂಜೆ, ತೀರ್ಥ ಮತ್ತು ಪ್ರಸಾದ ವಿನಿಯೋಗಿಸಲು ಅವಕಾಶ ನೀಡದಿರುವುದು ಭಕ್ತರುಮತ್ತು ಅರ್ಚಕ ವಲಯದ ಅಸಮಾಧಾನಕ್ಕೆಕಾರಣವಾಗಿದೆ.
ಎರಡೂವರೆ ತಿಂಗಳ ನಂತರ ದೇವಾಲಯತೆರೆಯಲು ಅವಕಾಶ ಕಲ್ಪಿಸಿದರೂ ಭಕ್ತರುಕೋವಿಡ್ ಮಾರ್ಗಸೂಚಿ ಪ್ರಕಾರ ದೇವಾಲಯಕ್ಕೆಬಂದು ದೇವರ ದರ್ಶನ ಮಾಡಿಕೊಂಡು ಹೋಗಲಷ್ಟೇ ಅವಕಾಶವಿದೆ. ಆದರೂ, ಇದರಿಂದ ಭಕ್ತವಲಯಕ್ಕೆ ತೃಪ್ತಿ ಆಗುವುದಿಲ್ಲ. ದೇವಾಲಯತೆರೆಯುವ ಸಂದರ್ಭದಲ್ಲಿ ಮೊದಲ ಅಭಿಷೇಕಮತ್ತು ವಿಶೇಷ ಪೂಜೆ ತಮ್ಮದಾಗಲಿ ಎಂಬಭಾವದಲ್ಲಿ ಭಕ್ತರು ಅರ್ಚಕರಲ್ಲಿ ಬೇಡಿಕೆ ಇಟ್ಟುನಿರಾಸೆ ಅನುಭವಿಸುತ್ತಿರುವುದುಕಂಡು ಬರುತ್ತಿದೆ.
ಸರಕಾರವು ದೇವಾಲಯಗಳನ್ನು ತೆರೆಯಲುಅವಕಾಶ ಕಲ್ಪಿಸಿರುವುದನ್ನು ಸ್ವಾಗತಿಸಿರುವ ಭಕ್ತರುಮತ್ತು ಅರ್ಚಕರು ಕೋವಿಡ್ ನಿಯಮಪಾಲಿಸಿಕೊಂಡೇ ವಿಶೇಷ ಪೂಜೆ, ತೀರ್ಥ, ಪ್ರಸಾದವಿನಿಯೋಗಿಸಲು ಅವಕಾಶ ನೀಡಬೇಕಿತ್ತು ಎಂಬಬೇಡಿಕೆಯನ್ನು ಸರಕಾರ ಮುಂದಿಟ್ಟಿದ್ದಾರೆ. ಸದ್ಯಕ್ಕೆಇವೆಲ್ಲದಕ್ಕೆ ಅವಕಾಶ ಇಲ್ಲವಾದರೂ, ಶೀಘ್ರವೇದೇವಾಲಯಗಳು ಪೂರ್ಣ ಪ್ರಮಾಣದಲ್ಲಿಧಾರ್ಮಿಕ ಚಟುವಟಿಕೆಗಳಿಗೆ ತೆರೆಯಲ್ಪಡಲಿಎಂದು ಭಕ್ತರು ಆಶಿಸುತ್ತಿದ್ದಾರೆ.
ಕೆ.ಎಸ್.ಗಣೇಶ್