Advertisement

ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆ

08:48 PM Jul 03, 2021 | Team Udayavani |

ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನಕಾರ್ಯದರ್ಶಿಯಾಗಿ ನೇಮಕವಾಗಿರುವ ಎಸ್‌.ಚೌಡಪ್ಪ, ಜಂಟಿಕಾರ್ಯದರ್ಶಿ ಆಗಿ ನೇಮಕವಾಗಿರುವ ಸಿ.ಎಲ್‌.ಶ್ರೀನಿವಾಸಲು ಅವರನ್ನು ಜಿಲ್ಲಾ ಪ್ರೌಢಶಾಲಾ ವೃತ್ತಿ ಶಿಕ್ಷಕರ ಸಂಘದಿಂದಆತ್ಮೀಯವಾಗಿ ಸನ್ಮಾನಿಸಲಾಯಿತು.

Advertisement

ನಗರದ ಜಿಲ್ಲಾ ನೌಕರರ ಭವನದಲ್ಲಿ ನಡೆದಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದಪ್ರಧಾನ ಕಾರ್ಯದರ್ಶಿ ಚೌಡಪ್ಪ, ಜಿಲ್ಲೆಯಲ್ಲಿ ಎಲ್ಲಾಸರ್ಕಾರಿ ನೌಕರರನ್ನು ಸಂಘಟಿಸಿ ಒಂದಾಗಿಕರೆದೊಯ್ಯುವ ಕಾರ್ಯದಲ್ಲಿ ನಮ್ಮೊಂದಿಗೆವೃತ್ತಿ ಶಿಕ್ಷಕರು ಸಹಕಾರ ನೀಡಿ ಎಂದು ಮನವಿ ಮಾಡಿದರು.

ಪ್ರೌಢಶಾಲೆಗಳಲ್ಲಿ ದೈಹಿಕ ಹಾಗೂ ವೃತ್ತಿ ಶಿಕ್ಷಕರುಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದರ ನಿವಾರಣೆಗೆಸಂಘಟಿತ ಹೋರಾಟ ಅಗತ್ಯವಾಗಿದೆ. ಈ ಕಾರ್ಯದಲ್ಲಿ ಸಂಘದಅಧ್ಯಕ್ಷ ಜಿ.ಸುರೇಶ್‌ಬಾಬು ಅವರ ಕೈಬಲಪಡಿಸೋಣ, ನಾವೆಲ್ಲಾಸದಾ ನಿಮ್ಮೊಂದಿಗೆ ಇರುತ್ತೇವೆ ಎಂದು ಭರವಸೆ ನೀಡಿದರು.

ಜಂಟಿ ಕಾರ್ಯದರ್ಶಿ ಸಿ.ಎಲ್‌.ಶ್ರೀನಿವಾಸಲು ಮಾತನಾಡಿ,ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ನೇತೃತ್ವದಲ್ಲಿ ಎಲ್ಲಾಇಲಾಖೆಗಳ ನೌಕರರು, ಶಿಕ್ಷಕರು ಸೇರಿ ಎಲ್ಲರನ್ನು ಒಟ್ಟಾಗಿಕರೆದೊಯ್ಯುವ ಕೆಲಸವಾಗುತ್ತಿದೆ. ಜತೆಗೆ ರಾಜ್ಯದಲ್ಲೂ ನೌಕರರಸಂಘಕ್ಕೆಕ್ರಿಯಾಶೀಲಅಧ್ಯಕ್ಷರಾಗಿಷಡಕ್ಷರಿಅವರುಇರುವುದರಿಂದನಮ್ಮ ಸಮಸ್ಯೆಗಳು ಅತಿ ಶೀಘ್ರ ಕೊನೆಯಾಗುತ್ತವೆ ಎಂದುಹೇಳಿದರು.

ವೃತ್ತಿ ಶಿಕ್ಷಕರು ಸಂಘಟಿತವಾಗಿದ್ದು, ಎಲ್ಲಾ ಸಮಸ್ಯೆಗಳನಿವಾರಣೆಗೆ ಒಗ್ಗಟ್ಟಾಗಿ ಹೋರಾಡಲು ಸಂಕಲ್ಪ ಮಾಡಿದ್ದೇವೆ ಎಂದಅವರು, ವೇತನ ತಾರತಮ್ಯ, ಹಳೆ ಪಿಂಚಣಿ ವ್ಯವಸ್ಥೆ ಮತ್ತಿತರಸಮಸ್ಯೆಗಳಿಗೆ ಪರಿಹಾರ ಸಿಗುವ ವಿಶ್ವಾಸವಿದೆ ಎಂದರು.ಸಂಘದ ಚಟುವಟಿಕೆಗಳಿಗೆ ಸದಾ ನೆರವುನೀಡುತ್ತಾ ಬಂದಿರುವ ಚೌಡಪ್ಪ ಅವರನ್ನುಸ್ಮರಿಸಿದ ಅವರು, ಮುಂದಿನ ದಿನಗಳಲ್ಲಿ ವೃತ್ತಿಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ನಮ್ಮೊಂದಿಗೆನೌಕರರ ಸಂಘವೂ ನಿಲ್ಲಲಿದೆ ಎಂದುತಿಳಿಸಿದರು.

Advertisement

ಶಿಕ್ಷಣ ಇಲಾಖೆ ವೃತ್ತಿ ಶಿಕ್ಷಣ ಪರಿವೀಕ್ಷಕಬಿ.ವೆಂಕಟೇಶಪ್ಪ, ವೃತ್ತಿ ಶಿಕ್ಷಕರ ಸಂಘಕ್ಕೆ ಚೌಡಪ್ಪ ಮತ್ತುಶ್ರೀನಿವಾಸಲು ಸದಾ ಬೆನ್ನೆಲುಬಾಗಿ ನಿಂತಿದ್ದಾರೆ. ಅವರಿಗೆ ಮತ್ತಷ್ಟುಅವಕಾಶಗಳು ಸಿಗಲಿ ಮತ್ತು ವೃತ್ತಿಶಿಕ್ಷಕರೊಬ್ಬರಿಗೆ ನೌಕರರಸಂಘದಲ್ಲಿ ಪದಾಧಿಕಾರಿಯಾಗುವ ಅವಕಾಶ ಸಿಕ್ಕಿರುವುದುನಮಗೆಲ್ಲಾ ಖುಷಿ ತಂದಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷನಾಗರಾಜ್‌ ವಹಿಸಿದ್ದು, ಸಂಘದ ಪ್ರಧಾನ ಕಾರ್ಯದರ್ಶಿಮಾರ್ಕಂಡೇಶ್ವರ್‌, ಖಜಾಂಚಿ ಆಂಜಿನಪ್ಪ, ಪದಾಧಿಕಾರಿಗಳಾದನಾಗರಾಜ್‌, ಚಲಪತಿ, ತಿಪ್ಪೇಸ್ವಾಮಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next