ಕೋಲಾರ: ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿಜ್ಞಾನಿಗಳ ಭಾವಚಿತ್ರ ಪರಿಚಯದಜತೆಗೆ ವಿದ್ಯಾರ್ಥಿ ಯುವಜನ ಕಠಿಣ ಪರಿಶ್ರಮಿಗಳಾಗಬೇಕು ಎಂದು ಸಾರ್ವಜನಿಕಶಿಕ್ಷಣ ಇಲಾಖೆ ಜಿಲ್ಲಾ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಅಭಿಪ್ರಾಯಪಟ್ಟರು.
ನಗರದ ಬೆಂಗಳೂರು ಮಾಂಟೆಸರಿ ಸ್ಕೂಲ್‌ನಲ್ಲಿ ಬುಧವಾರ ಜಿಲ್ಲಾ ಜ್ಞಾನ ವಿಜ್ಞಾನ ಸಮಿತಿಏರ್ಪಡಿಸಿದ್ದ ಭಾರತರತ್ನ ಪ್ರೊ ಸಿಎನ್‌ಆರ್‌ರಾವ್ ಅವರ ಜನ್ಮದಿನದ ಅಂಗವಾಗಿ ಅವರಭಾವಚಿತ್ರ ನೀಡಿ ಮಾತನಾಡಿದರು.
ವಿಜ್ಞಾನ ಕ್ಷೇತ್ರದಲ್ಲಿ ಭಾರತ ಅಗ್ರ ಮಟ್ಟಕ್ಕೇರಬೇಕು. ಚೀನಾ, ದಕ್ಷಿಣ ಕೊರಿಯಾದಂತಹರಾಷ್ಟ್ರಗಳಿಗಿಂತ ಮುಂಚೂಣಿಯಲ್ಲಿ ನಮ್ಮದೇಶಕಾಣಿಸಿಕೊಳ್ಳಬೇಕು. ಇದಕ್ಕೆ ಪೂರಕವಾಗಿಯುವ ವಿಜ್ಞಾನಿಗಳು ತಯಾರಾಗಬೇಕುಎಂದು ತಿಳಿಸಿದರು.ವಿಜ್ಞಾನಿಗಳ ನೆನಪನ್ನು ಮಾಡಿಕೊಳ್ಳುವುದರಜತೆಗೆ ವಿದ್ಯಾರ್ಥಿ/ ಯುವ ಸಮುದಾಯದೇಶಕ್ಕಾಗಿ ದುಡಿದ ಮಹಾನ್ ವ್ಯಕ್ತಿಗಳಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ವಿಜ್ಞಾನವೇ ತಮ್ಮ ಉಸಿರೆಂದು ದುಡಿದಸಿಎನ್‌ಆರ್ ರಾವ್ ಅವರ ಆದರ್ಶಗಳುಇಂದಿನ ಯುವ ಜನಾಂಗಕ್ಕೆ ಅಗತ್ಯ ಎಂದರು.ಬಿಎಂಎಸ್ ಶಾಲೆ ಮುಖ್ಯೋಪಾಧ್ಯಾಯಎಂ.ಶ್ರೀನಿವಾಸ್ ಮಾತನಾಡಿ, ಪ್ರತಿ ಶಾಲೆಯಲ್ಲೂ ವಿಜ್ಞಾನಿಗಳ ಭಾವಚಿತ್ರಗಳನ್ನುಇರಿಸಿಕೊಳ್ಳುವುದು ಸೂಕ್ತ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಜ್ಞಾನ ವಿಜ್ಞಾನಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸ್ ಮಾತನಾಡಿ,ಪ್ರತಿ ವಿದ್ಯಾರ್ಥಿ ಪ್ರತಿ ಹಂತದಲ್ಲೂ ವಿಷಯದಬಗ್ಗೆಚಿಂತನಮಂಥನ ನಡೆಸಿದರೆ ಸಮಾಜದಲ್ಲಿಹೊಸಕ್ರಾಂತಿ ಉಂಟಾಗುತ್ತದೆ ಎಂದರು.ಜಿಲ್ಲಾ ಜ್ಞಾನ ವಿಜ್ಞಾನ ಸಮಿತಿ ಗೌರವಾಧ್ಯಕ್ಷಜೆ.ಶ್ರೀನಿವಾಸ್, ಮುಳಬಾಗಿಲು ತಾಲೂಕುಅಧ್ಯಕ್ಷಕೆ.ಎನ್.ತಾಯಲೂರಪ್ಪ, ಶಶಿಕುಮಾರ್‌ಮತ್ತಿತರರಿದ್ದರು.