Advertisement

ಮನೆ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ

07:55 PM Jun 20, 2021 | Team Udayavani |

ಬಂಗಾರಪೇಟೆ: ಮಳೆ ಆರಂಭವಾಗಿದ್ದು,ಮನೆಯ ಸುತ್ತಮುತ್ತ ನೀರು ನಿಂತುಸೊಳ್ಳೆಗಳು ಉತ್ಪತ್ತಿ ಆಗದಂತೆ ಮುಂಜಾಗ್ರತೆ ವಹಿಸಬೇಕು. ಇದರಿಂದ ಮಲೇರಿಯಾ ರೋಗದಿಂದ ಮುಕ್ತರಾಗಬಹು ದು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿ ಕಾರಿಆರ್‌.ಪ್ರೇಮಾ ಹೇಳಿದರು.

Advertisement

ತಾಲೂಕಿನ ಬೂದಿಕೋಟೆಹೋಬಳಿಯ ಬಲಮಂದೆ ಗ್ರಾಪಂವ್ಯಾಪ್ತಿಯ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದಮಲೇರಿಯಾ ವಿರೋಧಿ ಮಾಸಾಚರಣೆಅರಿವು ಕಾರ್ಯಕ್ರಮದಲ್ಲಿ ಮಾತನಾಡಿದಅವರು, ಸಾಂಕ್ರಾಮಿಕ ರೋಗಗಳ ಪೈಕಿಮಲೇರಿಯಾವೂ ಅತ್ಯಂತ ಮಾರಕವಾಗಿದೆ. ಈ ಕಾಯಿಲೆ ಹೆಚ್ಚಾಗಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಕಾರಣಜನರು ಎಚ್ಚರಿಕೆಯಿಂದ ಇರಲುಆರೋಗ್ಯ ಇಲಾಖೆಯಿಂದ ಜಾಗೃತಿಮೂಡಿಸಲಾಗುತ್ತಿದೆ ಎಂದರು.

ಮಕ್ಕಳು, ಗರ್ಭಿಣಿ, ಬಾಣಂತಿಯರುಹಗಲಿನಲ್ಲಿ ನಿದ್ದೆ ಮಾಡುವಾಗ ಸೊಳ್ಳೆಪರದೆ ಬಳಸಬೇಕು. ಸಂಜೆ ವೇಳೆ ಚೆಂಡುಹೂವು,ಬೇವಿನ ಸೊಪ್ಪಿನಹೊಗೆಹಾಕಿದ್ರೆಸೊಳ್ಳೆ ನಿಯಂತ್ರಿಸಬಹುದು. ನೀರಿನತೊಟ್ಟಿಗಳಲ್ಲಿ ಮೀನು ಬಿಟ್ಟರೆ ಲಾರ್ವತಿಂದು, ಸೊಳ್ಳೆಗಳ ಉತ್ಪತ್ತಿ ತಡೆಯುತ್ತದೆ.

ಜ್ವರ ಬಂದರೆ ತಪ್ಪದೇ ರಕ್ತ ಪರೀಕ್ಷೆಮಾಡಿಸಿಕೊಂಡು ಸೂಕ್ತ ಚಿಕಿತ್ಸೆಪಡೆಯಬೇಕು ಎಂದು ಹೇಳಿದರು.ಬಲಮಂದೆ ಗ್ರಾಪಂ ಅಧ್ಯಕ್ಷಕೆ.ರಾಮಪ್ಪ, ಉಪಾಧ್ಯಕ್ಷೆ ಗೀತಾ, ಪಿಡಿಒಮಧುಚಂದ್ರ, ಕ್ಷೇತ್ರ ಆರೋಗ್ಯಶಿಕ್ಷಣಾಧಿಕಾರಿಗಳಾದ ಸಿ.ಗೀತಾ,ಅನಿತಾ,ರೇಣುಕಾದೇವಿ, ಹಿರಿಯ ಪ್ರಾಥಮಿಕಆರೋಗ್ಯಾಧಿಕಾರಿ ಭಾಗ್ಯಮ್ಮ, ತಾಲೂಕುಆಶಾಕಾರ್ಯಕರ್ತರ ಮೇಲ್ವಿಚಾರಕಿಕವಿತ,ಗ್ರಾಪಂ ಸದಸ್ಯ ವರದರಾಜು,ಮುಖಂಡರಾದ ಕಾಶಿನಾಥರಾವ್‌,ಶ್ರೀನಿವಾಸ್‌, ನಾಗೇಶ್‌ರಾವ್‌,ಪಂಚಾಯ್ತಿ ಸಿಬ್ಬಂದಿ ಕೇದಾರ್‌ರಾವ್‌,ತ್ಯಾಗರಾಜ್‌ಪ್ರಸಾದ್‌, ಅಂಬರೀಶ್‌ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next