ಕೋಲಾರ: ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಅಪೌಷ್ಟಿಕತೆ ಕೊರತೆ ಉಂಟಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ಆಹಾರ ಉತ್ಪಾದಿಸಲು ಶೀಘ್ರವಾಗಿ ಎರಡನೇ ಹಸಿರುಕ್ರಾಂತಿ ನಡೆಯಬೇಕಾಗಿದೆ ಎಂದು ತೋಟಗಾರಿಕೆ ವಿವಿಯ ಡೀನ್ ಡಾ. ಬಿ.ಜಿ. ಪ್ರಕಾಶ್ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಟಮಕದಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಐಸಿಎಆರ್ -ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಮಹಾವಿದ್ಯಾಲಯ ಹಾಗೂ ಆರೋಗ್ಯ ಇಲಾಖೆ, ಕೋಲಾರ ಆಶ್ರಯದಲ್ಲಿ ನಡೆದ ವಿಶ್ವ ಆಹಾರ ದಿನಾಚರಣೆ ಹಾಗೂ ರೈತ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
2019ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ 117 ದೇಶಗಳ ಪೈಕಿ ಭಾರತ 102ನೇ ಸ್ಥಾನದಲ್ಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶದ ಆಹಾರ ಉತ್ಪಾದನೆ 55 ಮಿಲಿಯನ್ ಟನ್‌ಗಳಿತ್ತು. ಆದರೆ ಈಗ 275 ಮಿಲಿಯನ್ ಟನ್‌ಗಳಿಗೂ ಅಧಿಕಾರ ಆಹಾರ ಉತ್ಪಾದನೆ ಮಾಡುತ್ತಿದ್ದೇವೆ. ಆದರೂ ಶೇ. 48 ರಷ್ಟು ಜನ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.
ವಿಶ್ವದಾದ್ಯಂತ 85 ಲಕ್ಷ ಮಂದಿಗೆ ಸಾಕಷ್ಟು ಆಹಾರ ಲಭ್ಯತೆ ಇಲ್ಲ. ಜಗತ್ತಿನಲ್ಲಿ 8 ಜನರಲ್ಲಿ ಒಬ್ಬ ಹಸಿವಿನಿಂದ ಬಳಲುತ್ತಿದ್ದಾನೆ ಎಂದು ಹೇಳಿದರು. ತೋಟಗಾರಿಕೆ ವಿಜ್ಞಾನಗಳ ವಿವಿಯ ಸಹ ವಿಸ್ತರಣೆ ನಿರ್ದೇಶಕ ಡಾ. ಟಿ.ಬಿ. ಬಸವರಾಜು ಮಾತನಾಡಿ, ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ಸಂಸ್ಥಾಪನೆ ದಿನಾಚರಣೆ ಅಂಗವಾಗಿ ಪ್ರತಿ ವರ್ಷ ಅ.16ರಂದು ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತದೆ.
ಅದರ ಪ್ರಮುಖ ಉದ್ದೇಶವೆಂದರೆ, ಪ್ರಪಂಚದಲ್ಲಿ 2030 ರೊಳಗೆ ಶೂನ್ಯ ಹಸಿವು ಮತ್ತು ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆ ಮಾಡುವುದು ಮುಖ್ಯವಾಗಿದೆ ಎಂದು ತಿಳಿಸಿದರು.
ಬೆಂಗಳೂರು, ಕರ್ನಾಟಕ ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್ ಗೌತಮ್ ಮಾತನಾಡಿದರು. ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನದ ವಿಜ್ಞಾನಿಗಳಾದ ಡಾ. ಚಿಕ್ಕಣ್ಣ ಜಿ.ಎಸ್ ಮಾತನಾಡಿ, ಪೌಷ್ಟಿಕ ಆಹಾರ ಬರಿ ಆರೋಗ್ಯವಲ್ಲ. ಜ್ಞಾನ ಮತ್ತು ಶಕ್ತಿಯು ಆಗಿದೆ. ನಮ್ಮ ಕ್ರಿಯೆಗಳೇ ನಮ್ಮ ಭವಿಷ್ಯ- ವಿಶ್ವದ ಹಸಿವಿನ ನಿವಾರಣೆಗೆ ಪೋಷಣೆ ಆಹಾರ ಎಂಬ ವಿಷಯದ ಬಗ್ಗೆ ತಾಂತ್ರಿಕ ಅ ವೇಶನದಲ್ಲಿ ಸವಿಸ್ತಾರವಾಗಿ ತಿಳಿಸಿದರು. ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷ ಣೆಯ ವಿಜ್ಞಾನಿ ಡಾ.ಅಂಬಿಕಾ ಡಿ.ಎಸ್, ಆಶಾ ಕಾರ್ಯಕರ್ತೆಯರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.