Advertisement
*ಚುನಾವಣೆಗೆ ಸ್ಪರ್ಧಿಸಿರುವ ಉದ್ದೇಶವೇನು?ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 28 ವರ್ಷಗಳಿಂದ ಅಭಿವೃದ್ಧಿ ಕುಂಠಿತಗೊಂಡಿದೆ. ಕೋಲಾರ ಜಿಲ್ಲೆ ಜನ ಕುಟುಂಬವಿದ್ದಂತೆ. ನನ್ನ
ಕುಟುಂಬದಲ್ಲಿರುವ ನೋವನ್ನು ಅರಿತಿರುವೆ. ಇದಕ್ಕೆ ಎಲ್ಲಾ ಪಕ್ಷದವರು ತಮ್ಮನ್ನು ಬೆಂಬಲಿಸುತ್ತಿದ್ದಾರೆ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಜಿಲ್ಲೆಯನ್ನುಸರ್ವಾಂಗೀಣವಾಗಿ ಅಭಿವೃದ್ಧಿ ಪಡಿಸಲು ಚುನಾವಣೆಗೆ ನಿಂತಿದ್ದೇನೆ.
ಕೋಲಾರ ಜಿಲ್ಲೆ ನನ್ನದು. ಇಲ್ಲಿನ ಜನ ನನ್ನವರು. ಮಾಲೂರು ತಾಲೂಕು ಟೇಕಲ್ ಹೋಬಳಿಯಲವಗುಳಿ ಗ್ರಾಮದವನು. ನಾನು ಈವರೆಗೂ ಜನಪ್ರತಿನಿಧಿಯಾಗಿ ಗ್ರಾಪಂ ಅಧ್ಯಕ್ಷರಾಗಿ, ಕಾರ್ಪೋರೇಟರ್, ಮೇಯರ್ ಪರಾಜಿತ ಅಭ್ಯರ್ಥಿಯಾಗಿದ್ದೆ. ಕೋಲಾರ ಮಣ್ಣಿನ ಮಕ್ಕಳು ಯಾವ ರೀತಿ ಕೆಲಸ ಮಾಡುತ್ತಾರೆನ್ನುವುದು ಎಲ್ಲರಿಗೂ ಗೊತ್ತಿದೆ. ಅದಕ್ಕೆ ತಮ್ಮನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿಕೊಂಡಿದೆ. ಯುವಕರಾಗಿರುವ ತಮಗೆ ಕೆಲಸ ಮಾಡುವ ಉತ್ಸಾಹವಿದೆ. 28 ವರ್ಷಗಳ ದುರಾಡಳಿತ ಕೊನೆಗಾಣಿಸಲು ಆಯ್ಕೆ ಮಾಡಿಕೊಳ್ಳಬೇಕು. *ನಿಮ್ಮ ಮೇಲಿರುವ ಆರೋಪಗಳನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ?
ನನ್ನ ಮೇಲೆ ವಿರೋಧಿಗಳು ಮಾಡುತ್ತಿರುವ ಆರೋಪ, ಅಪಪ್ರಚಾರ ನೋಡುತ್ತಲೇ ಇದ್ದೇನೆ. ಕೆ.ಎಚ್.ಮುನಿಯಪ್ಪ 28 ವರ್ಷಗಳಲ್ಲಿ ಏನಾದರೂ ಕೆಲಸ ಮಾಡಿದ್ದರೆ ಅದನ್ನು ಹೇಳಿ ವೋಟು ಕೇಳುತ್ತಿದ್ದರು. ಏನೂ ಇಲ್ಲದೇ ಇರುವುದರಿಂದ ತಮ್ಮ ವಿರುದ್ಧ ತಿರುಚಿದ ವಿಡಿಯೋ, ಹೇಳಿಕೆಗಳ ಮೂಲಕ ಅಪಪ್ರಚಾರ ಆರೋಪ ಮಾಡುತ್ತಿದ್ದಾರೆ. ನಾನು ಸಾರ್ವಜನಿಕ ಕೆಲಸ ಮಾಡಲು ಕೇಸು ಹಾಕಿಸಿ ಕೊಂಡಿದ್ದೇನೆಯೇ ಹೊರತು ಸ್ವಂತಕ್ಕಲ್ಲ. ನಾನು ಇದುವರೆಗೂ ಸ್ವಂತಕ್ಕಾಗಿ ಯಾರ ಮೇಲೂ ದೂರು ಕೊಟ್ಟಿಲ್ಲ.
Related Articles
ಡಿ.ಎಸ್.ವೀರಯ್ಯ ಎಸ್‌ಸಿ ಮೋರ್ಚಾ ಅಧ್ಯಕ್ಷರಾಗಿರುವುದರಿಂದ ರಾಜ್ಯದ ಮೂಲೆ ಮೂಲೆಗೂ ಓಡಾಡುತ್ತಿದ್ದಾರೆ. ಛಲವಾದಿ ನಾರಾಯಣಸ್ವಾಮಿ, ಚಿ.ನಾ.ರಾಮು ಹಾಗೂ ಎಸ್ .ಬಿ.ಮುನಿವೆಂಕಟಪ್ಪ ಆಕಾಂಕ್ಷಿಗಳಾಗಿದ್ದವರು. ತಮಗೆ ಟಿಕೆಟ್ ಘೋಷಣೆಯಾದ ಮೇಲೆ ಇವರೆಲ್ಲರೂ ತಮ್ಮ ಜೊತೆಯಲ್ಲಿದ್ದು ಪ್ರಚಾರ ಮಾಡುತ್ತಿದ್ದಾರೆ.
Advertisement
*ಜೆಡಿಎಸ್ ಮತ್ತು ಕಾಂಗ್ರೆಸ್ ನಂಬಿಕೊಂಡು ಚುನಾವಣೆ ನಡೆಸುತ್ತೀರಿ?1991 ರಲ್ಲಿ ರಾಜೀವ್‌ಗಾಂಧಿ ಹತ್ಯೆಯಾದ ಸಂದರ್ಭದಲ್ಲಿ ದೊಡ್ಡ ಅನುಕಂಪದ ಅಲೆ ಇದ್ದಾಗಲೂ ಬಿಜೆಪಿ ಅಭ್ಯರ್ಥಿಯಾಗಿದ್ದ ಹನುಮಪ್ಪ ವಿರುದ್ಧ ಕೆ.ಎಚ್.ಮುನಿಯಪ್ಪ ಗೆದ್ದಿದ್ದು 3 ಸಾವಿರಮತಗಳ ಅಂತರದಿಂದ ಮಾತ್ರ. ಹಿಂದಿನ 7 ಚುನಾವಣೆಯಲ್ಲಿಯೂ ಕೆ.ಎಚ್.ಮುನಿಯಪ್ಪಗೆಲುವು ಹತ್ತು ಸಾವಿರದೊಳಗೆ ಇದೆ. ಬಿಜೆಪಿಗೆಕಾರ್ಯಕರ್ತರು ಕಡಿಮೆ ಇದ್ದರೂ ಮತದಾರರ ಬಲ ಬಲಿಷ್ಠವಾಗಿದೆ. ಈಗ ಪ್ರಧಾನಿ ನರೇಂದೇರ ಮೋದಿ ಅವರ ಅಲೆಯ ಬಲವೂ ಸೇರಿಕೊಂಡಿದೆ. ಹಾಗೆಯೇ ನಂಬಿಕೆ ಮೇಲೆ ಪ್ರಪಂಚ
ನಡೆಯುತ್ತಿರುವುದು. ಕಾಂಗ್ರೆಸ್-ಜೆಡಿಎಸ್ ಮುಖಂಡರ ಮೇಲೆ ವಿಶ್ವಾಸವಿಟ್ಟು ಲೋಕಸಭೆ ಚುನಾವಣೆ ನಡೆಸುತ್ತಿದ್ದೇವೆ. ಪ್ರತಿ ಯೊಂದಕ್ಕೂ ಒಂದು ಅಂತ್ಯ ಇದೆ. ಈ ಬಾರಿ ಕೆ.ಎಚ್. ಮುನಿಯಪ್ಪ ಅವರ ಪಾಪದ ಕೊಡ ತುಂಬಿದೆ.
ಅದು ನ್ಪೋಟಗೊಂಡು ತಮಗೆ ಬೆಂಬಲವಾಗಿದೆ. ಹೀಗಾಗಿ ನನ್ನ ಗೆಲವು ನಿಶ್ಚಿತವಾಗಿದ್ದು ನಿರಾಯಾಸವಾಗಲಿದೆ. *ನಿಮ್ಮ ಪ್ರತಿಸ್ಪರ್ಧಿ ಕೆ.ಎಚ್.ಮುನಿಯಪ್ಪರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಅವರ ಬಗ್ಗೆ ಜನರೇ ಹೇಳುತ್ತಿದ್ದಾರೆ. ಹಿರಿಯರಿದ್ದಾರೆ. ಚುನಾವಣೆಯಲ್ಲಿ ಪಕ್ಷದ ಮುಖಂಡರನ್ನು ಒಗ್ಗೂಡಿಸುವುದರಲ್ಲೇ ಕಾಲ ತಳ್ಳುತ್ತಿದ್ದಾರೆ. ಅವರ ಬಳಿ ಹಣಬಲ ಇರಬಹುದು. ನಾನು ಜಿಲ್ಲೆಯ ಮನೆ ಮಗ ಎನ್ನುತ್ತಾ ಮತ ಕೇಳುತ್ತಿರುವೆ. ನಾಲ್ಕು ಎಕರೆ ಜಮೀನನ್ನು ಸರ್ಕಾರದಿಂದ ಪಡೆದವರು ಈಗ ಸಾವಿರ ಎಕರೆ ಒಡೆಯರಾಗಿದ್ದಾರೆ. ಜನ ಇವರ ಆಡಳಿತ ಕೊನೆಗಾಣಿಸಲು ಬಯಸಿದ್ದಾರೆ. *ಪ್ರಚಾರ ಕಾರ್ಯತಂತ್ರಗಳೇನು?
ಪ್ರತಿ ಹಳ್ಳಿಯ ಪ್ರತಿ ಮನೆಗೂ ಪ್ರಚಾರ ತಲುಪಿಸುವಂತೆ ವ್ಯವಸ್ಥೆ ಮಾಡಿರುವೆ. ಜನ ಹದಿನೆಂಟು ತಡವಾಯಿತು. ಈಗಲೇ ಚುನಾವಣೆ ಇದ್ದರೆ ನಿಮಗೆ ಮತ ಹಾಕುತ್ತಿದ್ದೆವು ಎನ್ನುತ್ತಿದ್ದಾರೆ. ಅಮಿತ್ ಶಾ ರ ಕಾರ್ಯಕ್ರಮ ರದ್ದಾಯಿತು. ಏ.16 ರಂದು ಕೋಲಾರಕ್ಕೆ ಆಗಮಿಸಲಿದ್ದಾರೆ. ಶ್ರೀರಾಮುಲು ಇತರರು ಪ್ರಚಾರಕ್ಕೆ ಬರಲಿದ್ದಾರೆ. *ಜನರ ಪ್ರತಿಕ್ರಿಯೆ ಹೇಗಿದೆ?
ಜನರ ಪ್ರತಿಕ್ರಿಯೆ ನೋಡಿ ತುಂಬ ಖುಷಿಯಾಗುತ್ತಿದೆ. ನನ್ನ ಮನೆಯಲ್ಲಿ ನನ್ನ ಮೇಲೆ ಎಷ್ಟೊಂದು ನಂಬಿಕೆ ಇಟ್ಟಿದ್ದಾರೆನ್ನುವುದು ತಿಳಿಯುತ್ತಿದೆ. ಕೋಲಾರ ಅಭಿವೃದ್ಧಿ ಕಾಣದಿರುವುದರಿಂದ ಅದನ್ನು ನನ್ನ ಮೂಲಕ ತುಂಬಿಸಿಕೊಳ್ಳಲು ಬಯಸಿದ್ದಾರೆ. ಎಲ್ಲಾ ಪಕ್ಷದ ಮುಖಂಡರು ತಮಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ಭರವಸೆಗಳೇನು?
* ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವುದು
* ಯುವಕರಿಗೆ ಉದ್ಯೋಗ ಸೃಷ್ಟಿಸುವುದು
* ಹಳ್ಳಿಯಂತಿರುವ ಕೋಲಾರ ಜಿಲ್ಲಾ ಕೇಂದ್ರವನ್ನು ನಗರವಾಗಿ ಅಭಿವೃದ್ಧಿ ಪಡಿಸುವುದು
* ಬೆಮೆಲ್ ಖಾಸಗೀಕರಣ ತಡೆದು ಕಾರ್ಮಿಕರಿಗೆ ಕಾಯಂ ಕೆಲಸ ಸಿಗುವಂತೆ ಮಾಡುವೆ.
* ರೈತಾಪಿ ವರ್ಗಕ್ಕೆ ಸುಸಜ್ಜಿತವಾದ ಕೃಷಿ ಮಾರುಕಟ್ಟೆ ಕಲ್ಪಿಸುವೆ.
* ಕೋಚ್ ಫ್ಯಾಕ್ಟರಿ ಪೂರ್ಣಗೊಳಿಸುವುದು.
* ರೈತರು ನೆಮ್ಮದಿಯಿಂದ ಇರುವಂತೆ ಕ್ರಮ ಹಾಗೂ ಸೌಲಭ್ಯ ಕಲ್ಪಿಸುವುದು.