Advertisement

ಗೊಂದಲದ ಗೂಡಾದ ನಗರಸಭೆ ತುರ್ತು ಸಭೆ

07:28 PM Mar 05, 2021 | Team Udayavani |

ಕೋಲಾರ: ನಗರಸಭೆಯಲ್ಲಿ ನಡೆದ ತುರ್ತು ಸಾಮಾನ್ಯ ಸಭೆಯಲ್ಲಿ ಅಂಬೇಡ್ಕರ್‌ ಭವನ ಪುನಶ್ಚೇತನ ಕಾಮಗಾರಿಗೆ ಅನುದಾನ ಮಂಜೂರು ಮಾಡುವ ಸಂಬಂಧ ಸದಸ್ಯರಿಬ್ಬರ ನಡುವೆ ವಾಗ್ವಾದ, ಕೈ ಕೈಮಿಲಾ ಯಿಸುವ ಹಂತ ತಲುಪಿ ಇಡೀ ಸಭೆ ಗೊಂದಲದ ಗೂಡಾದ ಘಟನೆ ಗುರುವಾರ ನಡೆಯಿತು.

Advertisement

ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಶ್ವೇತಾ ಶಬರೀಷ್‌ ಅಧ್ಯಕ್ಷತೆಯಲ್ಲಿ ಗುರುವಾರ ಕರೆ ದಿದ್ದ ತುರ್ತು ಸಾಮಾನ್ಯ ಸಭೆಯಲ್ಲಿ ನಗರದ ಅಂಬೇಡ್ಕರ್‌ ಭವನಕ್ಕೆ ರಸ್ತೆ ಅಭಿವೃದ್ಧಿ, ಸುಣ್ಣ, ಬಣ್ಣ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವ ವಿಚಾರವಾಗಿ ಮಂಜೂರಾತಿ ನೀಡುವ ಸಂಬಂಧ ನಡೆದ ಚರ್ಚೆ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.

ಒತ್ತಡ ಹೇರಿದವರು ಯಾರು?: ಸದಸ್ಯ ಅಂಬರೀಶ್‌ ವಿಷಯ ಪ್ರಸ್ತಾಪಿಸಿ, ಅಂಬೇಡ್ಕರ್‌ ಭವನಕ್ಕೆ ಸುಣ್ಣಬಣ್ಣಕ್ಕೆ 6 ಲಕ್ಷ ರೂ. ನೀಡಲು ಹಿಂದಿನ ಸಭೆಯಲ್ಲಿ ಪ್ರಸ್ತಾಪಿಸಿದ್ದೆ. ಆದರೆ ಕ್ರಿಯಾ ಯೋಜನೆಯಲ್ಲಿ ಕೈಬಿಡಲು ಯಾರು ಒತ್ತಡ ಹೇರಿದ್ದಾರೆ ಎಂದು ಪ್ರಶ್ನಿಸಿದರು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಬಿ.ಎಂ.ಮುಬಾ ರಕ್‌, ಅಂಬೇಡ್ಕರ್‌ ಭವನ ಪುನಶ್ಚೇತನಕ್ಕೆ ಮೀಸಲಿರಿಸಿರುವ ಅನುದಾನ ವಾಪಸ್‌ ಪಡೆದು, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ವರ್ಗ ದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಅಥವಾ ಟ್ಯಾಬ್‌ ಕೊಡಿಸಲು ಕ್ರಮ ಕೈಗೊಳ್ಳ ಬೇಕು ಎಂದು ಸಲಹೆ ನೀಡಿದ್ದು, ಅಂಬರೀಶ್‌ ಮತ್ತಿತರ ಸದಸ್ಯರ ವಿರೋಧಕ್ಕೆ ಕಾರಣವಾಯಿತು.

ಸಭೆಯ ಬಾವಿಗಿಳಿದು ಪ್ರತಿಭಟನೆ: ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಸದಸ್ಯ ಅಂಬರೀಶ್‌, ನೀವು ಅಂಬೇ ಡ್ಕರ್‌ ಅವರನ್ನು ಹೊರಗೆ ಇಟ್ಟಿದ್ದೀರಿ, ಮುಬಾರಕ್‌ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು. ಧ್ವನಿಗೂಡಿಸಿದ ಅದೇ ವಾರ್ಡ್‌ ನ ಸದಸ್ಯ ಸುರೇಶ್‌ ಬಾಬು ತಮ್ಮ ವ್ಯಾಪ್ತಿಯಲ್ಲಿ ಭವನ ಬರುತ್ತದೆ. ನಗರಸಭೆಗೆ ಸೇರದಿದ್ದರೆ ಹೇಗೆ ಖಾತೆ ನೀಡಿದ್ದೀರಿ ಎಂದು ಸದಸ್ಯ ರಾಕೇಶ್‌ ಹಾಗೂ ಸೂರಿ ಪ್ರಶ್ನಿಸಿದರಲ್ಲದೆ ಸದಸ್ಯ ಅಂಬರೀಶ್‌ಜತೆಗೆ ಸಭೆಯ ಬಾವಿ ಗಿಳಿದು ಪ್ರತಿಭಟಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಮುಬಾರಕ್‌,ಅಂಬೇಡ್ಕರ್‌ ಭವನ ಅರಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುತ್ತದೆ. ನಾನೇನು ಅಂಬೇಡ್ಕರ್‌ ವಿರೋಧಿ ಯಲ್ಲ. ಭವನ ಅಭಿವೃದ್ಧಿಗೆ ಜಿಪಂ ಸಮಾಜ ಕಲ್ಯಾಣ ಇಲಾಖೆ ಹಾಗೂ ಅಂಬೇಡ್ಕರ್‌ ಅಭಿವೃದ್ಧಿ ನಿಗಮದಲ್ಲಿ ಅನುದಾನ ಪಡೆದು ಕೊಳ್ಳುವ ಅವಕಾಶ ಇದೆ ಎಂದರು.

ಮಕ್ಕಳಿಗೆ ಬಳಸಿ: ಶೇ 22.75ರ ಅನುದಾನ ವನ್ನು ಎಸ್ಸಿ-ಎಸ್ಟಿ ಸಮುದಾಯಕ್ಕೆ ಬಳಸಬೇಕು, ನಗರದಲ್ಲಿ ಎಸ್ಸೆಸ್ಸೆಲ್ಸಿಓದುವ 137 ಹಾಗೂ ಪಿಯುಸಿ ಓದುವ 500ವಿದ್ಯಾರ್ಥಿ ಗಳಿದ್ದಾರೆ. ಎಸ್ಸೆ ಸ್ಸೆಲ್ಸಿ ಮಕ್ಕಳು ಚಂದನ ವಾಹಿನಿಯಲ್ಲಿ ಪಾಠ ಕೇಳುತ್ತಿದ್ದರೆ, ಹಣವನ್ನು ಮಕ್ಕಳಿಗೆ ಬಳಸಿಎಂದು ಸಲಹೆ ನೀಡಿದರು. ಇದರಿಂದ ಆಕ್ರೋಶಗೊಂಡ ಸದಸ್ಯರಾದ ಸುರೇಶ್‌, ರಾಕೇಶ್‌, ಅಂಬರೀಶ್‌ ನಗರಸಭೆ ವ್ಯಾಪ್ತಿಗೆಒಳಪಡುವುದಿಲ್ಲ ಎಂದರೆ ನಗರಸಭೆ ಯಿಂದ ಹೇಗೆಖಾತೆ ಮಾಡಿಕೊಟ್ಟಿದ್ದೀರಾ, ಅನುದಾನ ಬಿಡುಗಡೆಗೆಮಂಜೂರಾತಿ ಕೊಟ್ಟು ಹೇಗೆ ರದ್ದು ಮಾಡಿದಿರಿ, ಅದಕ್ಕೆಕೂಡಲೇ ಸ್ಪಷ್ಟೀಕರಣ ಕೊಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

Advertisement

ಕ್ರಿಮಿನಲ್‌ ಪ್ರಕರಣ ದಾಖಲಿಸಿ: ಉದ್ದೇಶ ಪೂರ್ವಕವಾಗಿಯೇ ಷಡ್ಯಂತರ ರೂಪಿಸಿ ಭವನ ಅಭಿ ವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ. ಪರಿಶಿಷ್ಟ ಸಮುದಾಯದ ಸದಸ್ಯನಿಗೆ ಬೆದರಿಕೆ ಹಾಕುತ್ತಿದ್ದಾರೆ. ಅವರ ವಿರದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಅನುಮೋದನೆ: ನಗರಸಭೆ ವ್ಯಾಪ್ತಿಯಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಪರಿಷ್ಕರಣೆಗೆ ಹಾಗೂ ನಗರಸಭೆಅಧ್ಯಕ್ಷರ ಚುನಾವಣೆ ಸಂಬಂಧ ಸುಪ್ರೀಂ ಕೋಟ್‌ìನಲ್ಲಿ ಹೂಡಿ ರುವ ದಾವೆಗೆ ಪೌರಾಯುಕ್ತ,ಪೌರಾಡಳಿತ ನಿರ್ದೇ ಶನಾಲಯದ ಅ ಧಿಕಾರಿಗಳನ್ನುಪಾರ್ಟಿ ಮಾಡಿರುವುದರಿಂದ ನಗರಸಭೆ ಪರವಾದಿಸಲು ವಕೀಲರ ನೇಮಕಕ್ಕೆ ಸಭೆ ಅನು ಮೋದನೆನೀಡಿತು. ಸಭೆಯಲ್ಲಿ ಸದಸ್ಯರಾದ ಎಸ್‌.ಆರ್‌.ಮುರಳಿಗೌಡ, ಮಂಜುನಾಥ್‌, ಪ್ರಸಾದ್‌ಬಾಬುಸೇರಿದಂತೆ ಎಲ್ಲಾ ಸದಸ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next