ಕೆಜಿಎಫ್: ಧಾರ್ಮಿಕ ಭಾವನೆ ಕೆರಳಿಸಿ, ಪ್ರಚೋದನೆ ಮಾಡುವ ಉದ್ದೇ ಶ ದಿಂದ ಕಿಡಿಗೇಡಿಗಳು ದೇವಾಲಯದಲ್ಲಿ ವಿಗ್ರಹ ಭಿನ್ನ ಮಾಡಲು ಯತ್ನಿಸಿದ್ದಾರೆ. ಪೊಲೀಸರು ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂದು ಶಾಸಕಿ ಎಂ.ರೂಪಕಲಾ ಹೇಳಿದರು.
ಆಲಿಕಲ್ಲು ಕದಿರೇನಹಳ್ಳಿಯ ವೇಣುಗೋಪಾಲಸ್ವಾಮಿ ದೇವಾಲ ಯಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಮಾತನಾಡಿ, ಕಿಡಿಗೇಡಿಗಳು ವಿಗ್ರಹ ಭಿನ್ನ ಮಾಡಲೆಂದೇ ಬಂದಿದ್ದಾರೆ. ಆದರೆ, ದೇವರ ಭಿನ್ನ ಮಾಡಲು
ಮನಸ್ಸು ಬಾರದೆ, ಗೋಪುರದಿಂದ ಕೆಳಗೆ ಇಳಿಸಿದ್ದಾರೆ. ಇಂತಹ ಕಿಡಿಗೇಡಿಗಳನ್ನು ಪತ್ತೆ ಹಚ್ಚುವ ಶ್ವಾಸ ಇದೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ ಎಂದರು.
ದೇವಾಲಯದ ಜೀರ್ಣೋದ್ಧಾರಕ್ಕೆ ಮುಜರಾಯಿ ಇಲಾಖೆಯ ಹಣ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ವೈಯಕ್ತಿಕವಾಗಿ ಜೀರ್ಣೋದ್ಧಾರ ಮಾಡಲಾಗುವುದು. ವೇಣುಗೋಪಾಲಸ್ವಾಮಿ ದೇವಾಲಯದ ಗರುಡ, ಆಂಜನೇಯ ವಿಗ್ರಹಗಳ ಜೊತೆಗೆ ದ್ವೀಪಸ್ತಂಭದ ಮೇಲ್ಭಾಗವನ್ನು ದುಷ್ಕರ್ಮಿಗಳು ಹಾಳು ಮಾಡಿದ್ದಾರೆ ಎಂದರು. ಇಂದು ಸರ್ಕಲ್ ಇನ್ಸ್‌ಪೆಕ್ಟರ್ ವೆಂಕಟೇಶ್, ಬ್ರಾಹ್ಮಣ ಸಂಘದ ನಾರಾಯಣಮೂರ್ತಿ, ಗುರುದೀಕ್ಷಿತ್ ಮತ್ತಿತರರು ದೇವಾಲಯದ ಪಕ್ಕದ ಹಳ್ಳದಲ್ಲಿ ಬಿದ್ದಿದ್ದ ದೀಪದ ಕಲ್ಲನ್ನು ಪತ್ತೆ ಹಚ್ಚಿದ್ದಾರೆ.
ಇದನ್ನೂ ಓದಿ : ಬೀದಿ ಬದಿಯಲ್ಲಿ 15 ರಿಂದ 20 ಲಕ್ಷ ಮಕ್ಕಳು!:ಭಾರತದಾದ್ಯಂತ ಪುನರ್ವಸತಿ ಪ್ರಕ್ರಿಯೆ