Advertisement
ದೆಹಲಿಯಿಂದ ಕೆಜಿಎಫ್ಗೆ ಆಗಮಿಸಿರುವ 43 ವರ್ಷದ ಮಹಿಳೆಗೆ ಸೋಂಕು ಕಂಡು ಬಂದಿದ್ದು, ಆರ್.ಎಲ್.ಜಾಲಪ್ಪ ಕೋವಿಡ್-19 ಆಸ್ಪತ್ರೆಗೆ ಸೇರಿ ಸಲಾಗಿದೆ. ಕೋಲಾರದಲ್ಲಿ ಪಿ.8060 ಸಂಪರ್ಕ ದಿಂದ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿಯೇ 27 ಮತ್ತು 29ವರ್ಷದ ಪುರುಷರು ಹಾಗೂ 26 ವರ್ಷದ ಯುವತಿಗೆ ಕೋವಿಡ್ 19 ಸೋಂಕು ಪತ್ತೆ ಯಾಗಿದೆ. ಶನಿವಾರ ಸಂಜೆ ಬಿಡುಗಡೆಯಾದ ಆರೋಗ್ಯ ಬುಲೆಟಿನ್‌ನಲ್ಲಿ ಕೋಲಾರ ಜಿಲ್ಲೆಯ ಸೋಂಕಿತರ ಸಂಖ್ಯೆ 56 ಆಗಿದ್ದು, ಇದರ ಜೊತೆಗೆ ಕೋಲಾರ ಗಲ್‌ಪೇಟೆಯ 31 ವರ್ಷದ ಪುರುಷರಿಗೆ ಕೋವಿಡ್ 19 ಪತ್ತೆಯಾಗಿದೆ.
ಬಂಗಾರಪೇಟೆ: ಬೆಂಗಳೂರಿನ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಯುವಕ, ಯುವತಿಯಲ್ಲಿ ಕೋವಿಡ್ 19 ಪಾಸಿಟಿವ್ ಬಂದಿದ್ದು, ಪಟ್ಟಣದಲ್ಲಿ ಸದ್ಯಕ್ಕೆ ನಾಲ್ಕು ಕೇಸುಗಳು ಸಕ್ರಿಯವಾದಂತಾಗಿದೆ. ಪಟ್ಟಣದ ವಿವೇಕಾನಂದರ ನಗರದಲ್ಲಿ ಮೂರು ವಾರಗಳ ಹಿಂದೆ ಮಲೇಷ್ಯಾದಿಂದ ಬಂದ ವ್ಯಕ್ತಿಯೊಬ್ಬ ರಿಗೆ ಕೋವಿಡ್ 19 ಪಾಸಿ ಟಿವ್ ಬಂದಿತ್ತು. ಹೀಗಾಗಿ ನಗರವನ್ನು ಸೀಲ್ ಡೌನ್ ಮಾಡಲಾಗಿತ್ತು.
Related Articles
Advertisement
ಬೆಂಗಳೂರಿನ ಯಲ ಹಂಕದಲ್ಲಿ ವಾಸವಾಗಿ ರುವ ತಮ್ಮ ದೊಡ್ಡ ಪ್ಪನ ಮಗ ಎಲ್‌ಐಸಿ ಏಜೆಂಟ್ ಆಗಿರುವ 30 ವರ್ಷದ ಯುವಕನಿಗೆ ಶುಕ್ರವಾರ ಬೆಳಗ್ಗೆ ಕೋವಿಡ್ 19 ಪಾಸಿಟಿವ್ ಬಂದಿತ್ತು. ಇದರಿಂದ ಎಚ್ಚೆತ್ತ ಆರೋಗ್ಯ ಇಲಾಖೆಯು ಅಕ್ಕ, ತಮ್ಮನನ್ನು ಪತ್ತೆಹಚ್ಚಿ ಕೋವಿಡ್ 19 ಪರೀಕ್ಷೆಗೆ ಒಳಪಡಿಸಿತ್ತು. ವರದಿಯಲ್ಲಿ ಕೋವಿಡ್ 19 ಪಾಸಿಟಿವ್ ದೃಢಪಟ್ಟಿದೆ.
ಶುಕ್ರವಾರದಿಂದ ಹೋಮ್ ಕ್ವಾರಂಟೈನ್ ನಲ್ಲಿದ್ದ ಇವರಿಬ್ಬರನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಕೆ.ಬಿ.ಚಂದ್ರಮೌಳೇಶ್ವರ್, ತಾಲೂಕು ಆರೋಗ್ಯಾಧಿಕಾರಿ ಡಾ. ಸುನೀಲ್, ಆರೋಗ್ಯ ನಿರೀಕ್ಷಕ ಆರ್. ರವಿ, ಆದರ್ಶ, ಪುರಸಭೆ ಮುಖ್ಯಾಧಿಕಾರಿ ವಿ.ಶ್ರೀಧರ್, ಆರೋಗ್ಯಾಧಿಕಾರಿ ಗೋವಿಂದರಾಜ್ ಮುಂತಾದವರು ಉಪಸ್ಥಿತರಿದ್ದರು.