Advertisement
ಆರು ತಿಂಗಳಿನಿಂದ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆಂಬ ಸುದ್ದಿ ರಾಜ್ಯ ಮತ್ತು ರಾಷ್ಟ್ರ ವ್ಯಾಪಿಯಾಗಿತ್ತು. ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ವರುಣಾ ಕ್ಷೇತ್ರವನ್ನು ನಿಗದಿಪಡಿಸಿದಾಗಲೂ ಕೋಲಾರದ ಆಸೆಯನ್ನು ಸಿದ್ದರಾಮಯ್ಯ ಬಿಟ್ಟಿರಲಿಲ್ಲ. ಹೈಕಮಾಂಡ್ ತಮಗೆ ಕೋಲಾರದಿಂದಲೂ ಸ್ಪರ್ಧಿಸಲು ಅವಕಾಶ ಕಲ್ಪಿಸುತ್ತದೆಯೆಂಬ ನಿರೀಕ್ಷೆಯಲ್ಲಿಯೇ ಇದ್ದ ಸಿದ್ದರಾಮಯ್ಯರನ್ನು ಪಕ್ಷದ ಆಂತರಿಕ ವಿರೋಧಿಗಳು ಒಂದೇ ಕ್ಷೇತ್ರಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಸಿದ್ದರಾಮಯ್ಯರನ್ನು ಕೋಲಾರದಿಂದಲೇ ಸ್ಪರ್ಧಿ ಸುವಂತೆ ಮಾಡುತ್ತೇವೆಂದು ಕೊಚ್ಚಿಕೊಳ್ಳುತ್ತಿದ್ದ ಕೋಲಾರದ ಆರ್‌ಕೆ ಬಣಕ್ಕೆ ತೀವ್ರ ಮುಖಭಂಗ ವಾಗಿದ್ದರೆ, ಕೆಎಚ್ ಬಣ ಮೇಲುಗೈ ಸಾಧಿಸಿದಂತಾಗಿದೆ.
Related Articles
Advertisement
ಟಿಕೆಟ್ ಘೋಷಣೆ ಸ್ವಾಗತಿಸುವ ಸ್ಥಿತಿಯಲ್ಲಿಲ್ಲ ಮಂಜುನಾಥ್: ಇದೀಗ ನಾಮಪತ್ರ ಸಲ್ಲಿಸಲು ನಾಲ್ಕುದಿನ ಬಾಕಿ ಉಳಿದಿದೆ ಎನ್ನುವಾಗ ಸಿದ್ದರಾಮಯ್ಯ ಸ್ಪರ್ಧಿಸುವುದಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಮುಖಂಡರಿಗೆ ಸಾಧ್ಯವಾಗುತ್ತಿಲ್ಲ. ಗುರುವಾರದಿಂದಲೇ ಸಿದ್ದರಾಮಯ್ಯ ಬದಲು ಯಾರಿಗೆ ಟಿಕೆಟ್ ಕೊಡಬೇಕು ಎಂಬ ಬಗ್ಗೆ ಪಕ್ಷದ ಆಂತರಿಕವಾಗಿ ಮುಖಂಡರ ವಲಯದಲ್ಲಿ ಚರ್ಚೆ ಗಳು ನಡೆದಿವೆ.
ಆದರೆ, ಬಹುತೇಕ ಆಕಾಂಕ್ಷಿಗಳು ಈ ಹೊತ್ತಿನಲ್ಲಿ ತಮಗೆ ಟಿಕೆಟ್ ಬೇಡ ಎಂದೇ ಹೇಳಿಬಿಟ್ಟಿದ್ದಾರೆ. ಬಹಳ ಬೇಡಿಕೆಯಲ್ಲಿದ್ದ ಕೋಲಾರ ಕಾಂಗ್ರೆಸ್ ಟಿಕೆಟ್ ಯಾರಿಗೂ ಬೇಡವಾದ ಪರಿಸ್ಥಿತಿಗೆ ಬಂದು ತಲುಪಿಬಿಟ್ಟಿತ್ತು. ಅಂತಿಮವಾಗಿ ಕೋಲಾರದಿಂದ ಕೊತ್ತೂರು ಮಂಜುನಾಥ್‌ರ ಹೆಸರನ್ನು ಘೋಷಿಸಲಾಗಿದೆ. ಆದರೆ, ಟಿಕೆಟ್ ಘೋಷಣೆಯಾದರೂ ಅದನ್ನು ಸ್ವಾಗತಿಸುವ ಸ್ಥಿತಿಯಲ್ಲಿ ಕೊತ್ತೂರು ಮಂಜುನಾಥ್ ಇಲ್ಲ. ಮೂರು ಬಾರಿ ಮುಂದೂಡಿ ಭಾನುವಾರಕ್ಕೆ ನಿಗದಿಯಾಗಿರುವ ರಾಹುಲ್ ಗಾಂಧಿ ಕಾರ್ಯಕ್ರಮವು ಇವೆಲ್ಲಾ ಬೆಳವಣಿಗಳಿಂದ ಕಳೆ ಕಳೆದುಕೊಳ್ಳುವಂತಾಗಿದೆ.
ಸದ್ಯಕ್ಕೆ ಕೋಲಾರ ಕಾಂಗ್ರೆಸ್ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಯಾವ ಮುಖಂಡರು ಬಹಿರಂಗವಾಗಿ ಏನನ್ನು ಹೇಳಿಕೊಳ್ಳುವ ಸ್ಥಿತಿಯಲ್ಲಿ ಇಲ್ಲವಾಗಿದ್ದಾರೆ. ಭಾನುವಾರ ಕೋಲಾರಕ್ಕೆ ಆಗಮಿಸಲಿ ರುವ ರಾಹುಲ್ ಗಾಂಧಿ ಸಮ್ಮುಖದಲ್ಲಿಯೇ ಕೋಲಾ ರದ ಕಾಂಗ್ರೆಸ್ ಮುಖಂಡರ ಕಗ್ಗಂಟು ಬಗೆಹರಿಯು ತ್ತದೆಯೋ ಇಲ್ಲವೋ ಕಾದು ನೋಡಬೇಕಿದೆ.
-ಕೆ.ಎಸ್.ಗಣೇಶ್