ಕೋಲಾರ: ಜಿಲ್ಲೆಯಲ್ಲಿ ಭಾನುವಾರ 12 ಕೋವಿಡ್ 19 ಸೋಂಕಿನ ಪ್ರಕರಣಗಳು ವರದಿಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 116ಕ್ಕೆ ಏರಿದ್ದು, ಇನ್ನೂ ಮೂರು ಪ್ರಕರಣಗಳಲ್ಲಿ ಖಾಸಗಿ ಲ್ಯಾಬ್ ಪಾಸಿಟೀವ್ ಎಂದು ಹೇಳಿದ್ದರೂ, ಐಸಿಎಂಆರ್ ವರದಿಗೆ ಕಾಯಲಾಗುತ್ತಿದೆ. ಜಿಲ್ಲೆಯಲ್ಲಿ ಭಾನುವಾರ ಆರು ಮಂದಿ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 52 ಕ್ಕೇರಿದಂತಾಗಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 63 ಆಗಿದೆ. ತುರ್ತು ನಿಗಾ ಘಟಕದಲ್ಲಿ ಓರ್ವ ಸೋಂಕಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಭಾನುವಾರ ಪತ್ತೆಯಾದ 12 ರೋಗಿಗಳ ಪೈಕಿ ಕೋಲಾರ ತಾಲೂಕಿನ 6, ಮಾಲೂರು 2, ಬಂಗಾರಪೇಟೆ 2, ಮುಳಬಾಗಿಲು ಹಾಗೂ ಶ್ರೀನಿವಾಸಪುರ ತಲಾ ಒಂದು ಪ್ರಕರಣ ದಾಖಲಾಗಿದೆ. ಕೋಲಾರದಲ್ಲಿ ಅಂತಾರಾಜ್ಯ ಪ್ರವಾಸದ ಹಿನ್ನೆಲೆ ಹೊಂದಿರುವ 48 ವರ್ಷದ ಮಹಿಳೆ ,
28 ವರ್ಷದ ಪುರುಷ, 30 ವರ್ಷದ ಆರೋಗ್ಯ ಕಾರ್ಯಕರ್ತೆ, ಅಂತರ ಜಿಲ್ಲಾ ಪ್ರಯಾಣ ಹಿನ್ನೆಲೆಯ 30 ವರ್ಷದ ಪುರುಷ, ಉಸಿರಾಟದ ಸಮಸ್ಯೆ ಅನುಭವಿಸುತ್ತಿರುವ 74 ವರ್ಷದ ವೃದ್ಧ, ಅಂತರ ಜಿಲ್ಲಾ ಪ್ರಯಾಣದ ಹಿನ್ನೆಲೆಯ 20 ವರ್ಷದ ಪುರುಷ ಸೋಂಕಿತರಾಗಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆಯ ಹಾಗೂ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಳಬಾಗಿಲು ತಾಲೂಕಿನಲ್ಲಿ 21 ವರ್ಷದ ಮಹಿಳೆ,
ಶ್ರೀನಿವಾಸಪುರ ತಾಲೂಕಿನ ಅಂತಾರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿರುವ 34 ವರ್ಷದ ಮಹಿಳೆ ಸೋಂಕಿತರಾಗಿದ್ದಾರೆ. ಮಾಲೂರು ತಾಲೂಕಿನಲ್ಲಿ ಅಂತರ ಜಿಲ್ಲಾ ಪ್ರಯಾಣದ ಹಿನ್ನೆಲೆ ಹೊಂದಿರುವ 50 ವರ್ಷದ ಪುರುಷ ಹಾಗೂ ಮತ್ತೋರ್ವ ವ್ಯಕ್ತಿ ಸೋಂಕಿತರಾಗಿದ್ದಾರೆ. ಬಂಗಾರಪೇಟೆ ತಾಲೂಕಿನಲ್ಲಿ ಉಸಿರಾಟದ ತೊಂದರೆ ಹೊಂದಿರುವ 58 ವರ್ಷದ ಪುರುಷ ಮತ್ತು ಆರೋಗ್ಯ ಇಲಾಖೆಯ 30 ವರ್ಷದ ಪುರುಷ ಸಿಬ್ಬಂದಿ ಸೋಂಕಿತರಾಗಿದ್ದಾರೆ.
ಜಿಲ್ಲೆಯಲ್ಲಿ ಈಗ ಪ್ರಸ್ತುತ 1681 ಮಂದಿಯನ್ನು ನಿಗಾವಣೆಯಲ್ಲಿ ಇಡಲಾಗಿದೆ. ಈವರೆಗೂ ಜಿಲ್ಲೆಯಲ್ಲಿ 10757 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 10055 ಮಾದರಿಗಳು ನೆಗಟೀವ್ ಎಂದು ವರದಿಯಾಗಿದೆ. ಸೋಂಕಿತರು ಇದ್ದ ಪ್ರದೇಶವನ್ನು ಸ್ಥಳೀಯ ಸಂಸ್ಥೆ, ಪೊಲೀಸರು ಸೀಲ್ ಡೌನ್ ಮಾಡಿದ್ದು, ಜಿಲ್ಲೆಯಲ್ಲಿ ಕೋಲಾರದ ಪಿ.8061, ಪಿ.88809, ಪಿ.8814, ಬಂಗಾರಪೇಟೆ-ಪಿ.8062, ಮುಳಬಾಗಿಲು ಪಿ.9234, ಪಿ.6903 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
3 ಮಂದಿಗೆ ಸೋಂಕಿನ ಶಂಕೆ: ಕೋಲಾರದಲ್ಲಿ ಇನ್ನೂ ಮೂವರಿಗೆ ಪಾಸಿಟೀವ್ ಬಂದಿರುವ ಶಂಕೆ ಇದ್ದು, ಇವರಿಗೆ ಖಾಸಗಿ ಲ್ಯಾಬ್ ನೀಡುವ ವರದಿಯನ್ನು ಐಸಿಎಂಆರ್‌ಗೆ ಕಳುಹಿಸಿದ್ದು ವರದಿಗಾಗಿ ಕಾಯಲಾಗುತ್ತಿದೆ.