Advertisement

ಕೊಳಲಗಿರಿ: ರಸ್ತೆ ರಿಪೇರಿಗೆ ಸ್ಥಳೀಯರ ಆಗ್ರಹ

10:47 PM Mar 04, 2020 | Sriram |

ಬ್ರಹ್ಮಾವರ: ಹಾವಂಜೆ ಗ್ರಾಮದ ಕೊಳಲಗಿರಿಯ ಕ್ಯಾಶ್ಯೂ ಫ್ಯಾಕ್ಟರಿಯ ಎದುರು ಮುಖ್ಯ ರಸ್ತೆ ಸಮೀಪದಲ್ಲಿ ಸುಮಾರು 25 ಮನೆಗಳಿರುವ ವಸತಿ ಪ್ರದೇಶವಿದೆ.ಇಲ್ಲಿಗೆ ಸಂಪರ್ಕ ಕಲ್ಪಿಸಲು ಮಣ್ಣಿನ ರಸ್ತೆ ಮಾತ್ರವೇ ಇದ್ದು, ಮಳೆಗಾಲದಲ್ಲಿ ನಡೆದಾಡಲೂ ಕಷ್ಟದ ಪರಿಸ್ಥಿತಿ ಇದೆ. ಈ ಭಾಗದಲ್ಲಿ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಕಿರು ಸೇತುವೆಯ ಅಗತ್ಯವಿದೆ.

Advertisement

ಎಸ್‌ಸಿ ಎಸ್‌ಟಿ ಹಾಗೂ ಇನ್ನಿತರ ವರ್ಗದವರು ಈ ಪ್ರದೇಶದಲ್ಲಿ ವಾಸ ಮಾಡುತ್ತಿದ್ದು, ಶಾಲಾ ಮಕ್ಕಳಿಗೂ ಈ ರಿಂಗ್‌ ರಸ್ತೆಯಿಂದ ಬಹಳಷ್ಟು ಪ್ರಯೋಜನವಿದೆ.

ಈ ಭಾಗದ ಸಾರ್ವಜನಿಕರು ಮಾರುಕಟ್ಟೆ, ಕೊಳಲಗಿರಿ ಜಂಕ್ಷನ್‌ಗೆ ಬರಲು ಸುಮಾರು ಒಂದು ಕಿಲೋಮೀಟರ್‌ ಹೆಚ್ಚುವರಿ ಸುತ್ತುಬಳಸಿ ಬರಬೇಕಾಗುತ್ತದೆ. ಜನಪ್ರತಿನಿಧಿಗಳು ಗಮನಹರಿಸಿ ಈ ಭಾಗದಲ್ಲಿ ರಿಂಗ್‌ ಕಾಂಕ್ರೀಟ್‌ ರಸ್ತೆಯ ವ್ಯವಸ್ಥೆ ಕಲ್ಪಿಸಿಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next