ಕೃಷಿ, ರೈತ ಚಳುವಳಿ ಕುರಿತಾಗಿ ಈಗಾಗಲೇ ಕೆಲವು ಸಿನಿಮಾಗಳಲ್ಲಿ ತೋರಿಸಲಾಗಿದೆ. ಈಗ ರೈತ ಚಳುವಳಿಯಕುರಿತಾಗಿಯೇ ಸಿನಿಮಾವೊಂದು ಬರುತ್ತಿದೆ. ಅದು “ಕೊಳಗ’. ಇತ್ತೀಚೆಗೆ ಈ ಚಿತ್ರಕ್ಕೆ ಮುಹೂರ್ತ ನಡೆಯಿತು.
1951ರಲ್ಲಿ
ಆರಂಭವಾದ ಕಾಗೋಡು ರೈತ ಚಳುವಳಿಯನ್ನಿಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. ಉಳುವವನೇ ಭೂಮಿಯೊಡೆಯಕಾನೂನಿಗೆ ಮೂಲ ಪ್ರೇರಣೆಯಾಗಿದ್ದ ಈ ಚಳುವಳಿಯನ್ನಿಟ್ಟುಕೊಂಡು ಪ್ರಸನ್ನ ಗೊರಲಕೆರೆ ಅವರು ಈ ಸಿನಿಮಾವನ್ನುನಿರ್ದೇಶನ ಮತ್ತು ನಿರ್ಮಾಣ ಮಾಡು ತ್ತಿದ್ದಾರೆ. ನಾ. ಡಿಸೋಜಾ ಅವರು ಬರೆದಿರುವ ‘ಕೊಳಗ’ಕಾದಂಬರಿಯನ್ನು ಆಧರಿಸಿರುವ ಚಿತ್ರ 50 ರ ದಶಕದಲ್ಲಿ ಶಿವಮೊಗ್ಗ ಭಾಗದಲ್ಲಿ ನಡೆದ ಭೂ ಮಾಲೀಕರು ಮತ್ತು ಗೇಣಿದಾರರನಡುವಿನ ಸಂಘರ್ಷವನ್ನು ದೃಶ್ಯರೂಪದಲ್ಲಿ ತೋರಿಸಲಿದೆಯಂತೆ. ಅಸ್ತ್ರ ಫಿಲಂ ಬ್ಯಾನರ್‌ನಲ್ಲಿ ಸಿನಿಮಾ ತಯಾರಾಗುತ್ತಿದೆ. ಪ್ರಸನ್ನ ಅವರು ಈ ಚಿತ್ರವನ್ನು ಎರಡು ಭಾಗಗಳಲ್ಲಿ ಮಾಡಲು ಮುಂದಾಗಿದ್ದಾರೆ.
ಇದನ್ನೂ ಓದಿ : ಅಲ್ಲಮ ಕುರಿತು ಮತ್ತೂಂದು ಚಿತ್ರ
ಮೊದಲಿಗೆ ಕಾಗೋಡು ಚಳುವಳಿ ಪ್ರಾರಂಭವಾಗಲು ಕಾರಣ ಹಾಗೂ , ಎರಡನೇ ಭಾಗದಲ್ಲಿ ಚಳುವಳಿಯ ನಂತರ ಏನಾಯಿತು ಎಂಬುದನ್ನು ಹೇಳುವ ಉದ್ದೇಶ ಅವರದು. ನಾನು50ರ ದಶಕದಲ್ಲಿ ನಡೆದ ದೊಡ್ಡ ರೈತ ಹೋರಾಟದ ಘಟನಾವಳಿಗಳಕಡೆಗೆ ಬೆಳಕುಚೆಲ್ಲುವ ಪ್ರಯತ್ನವನ್ನು ಸಿನಿಮಾ ಮೂಲಕ ಮಾಡಲು ಹೊರಟಿದ್ದೇನೆ’ಎನ್ನುವುದು ಪ್ರಸನ್ನ ಅವರ ಮಾತು. ಚಿತ್ರದಲ್ಲಿ ಆದಿ ಲೋಕೇಶ್, ನಿಶಿತಾ ಗೌಡ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜ.22ರಿಂದ ಸಾಗರ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ರಾಜ್‌ಗುರು ಸಂಗೀತವಿದೆ.