Advertisement
ವೇಗಿಗಳಿಗೆ ಮಾತ್ರ ವಿಶ್ರಾಂತಿ ನೀಡಿ ಎಂದು ಹೇಳಿ, ಬ್ಯಾಟ್ಸ್‌ಮನ್‌ಗಳ ಬಗ್ಗೆ ಸೊಲ್ಲೆತ್ತದಿರುವುದು ಕೊಹ್ಲಿ ಹೇಳಿಕೆಯ ತಾರ್ಕಿಕತೆಯ ಬಗ್ಗೆಯೇ ಪ್ರಶ್ನೆ ಮೂಡಿಸಿದೆ. ಮುಂದಿನ ವರ್ಷ ಮೇ 30ರಿಂದ ಜು. 4ರ ವರೆಗೆ ಇಂಗ್ಲೆಂಡ್‌ನಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಅದಕ್ಕೂ ಹತ್ತು ದಿನಗಳ ಮುನ್ನ ಐಪಿಎಲ್ ಮುಗಿಯುತ್ತದೆ. ಹೀಗಾದರೆ ಬೌಲರ್‌ಗಳ ಮೇಲೆ ಒತ್ತಡ ಬೀಳುತ್ತದೆ, ಅವರಿಗೆ ಅಗತ್ಯ ವಿಶ್ರಾಂತಿ ಸಿಗದಿದ್ದರೆ ಇಂಗ್ಲೆಂಡ್‌ನಲ್ಲಿ ಅವರ ಪ್ರದರ್ಶನದ ಮೇಲೆ ಹೊಡೆತ ಬೀಳುತ್ತದೆ ಎನ್ನುವ ಕಾರಣಕ್ಕೆ ಕೊಹ್ಲಿ ಹೀಗೆ ಹೇಳಿದ್ದಾರೆ. ಆದರೆ ಬ್ಯಾಟ್ಸ್‌ಮನ್‌ಗಳಿಗೂ ವಿಶ್ರಾಂತಿ ಸಿಗದಿದ್ದರೆ ಅವರ ಪ್ರದರ್ಶನದ ಮೇಲೆ ಒತ್ತಡ ಬೀಳುವುದಿಲ್ಲವೇ ಎಂಬ ಪ್ರಶ್ನೆಗಳು ಇಲ್ಲಿ ಮೂಡಿವೆ.
ಇತ್ತೀಚೆಗೆ, ಭಾರತ ತಂಡ, ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ತೋರಿದ್ದ ಕಳಪೆ ಪ್ರದರ್ಶನದ ಕಾರಣ ತಿಳಿಯಲು ಸಿಒಎ, ಗುರುವಾರ ಸಭೆ ಕರೆದಿದ್ದರು. ಸಿಒಎ ಸದಸ್ಯರಾದ ವಿನೋದ್ ರಾಯ್, ಡಯಾನಾ ಎಡುಲ್ಜಿ, ನಾಯಕ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ಕೋಚ್ ರವಿಶಾಸಿ ಹಾಗೂ ರಾಷ್ಟ್ರೀಯ ಆಯ್ಕೆ ಮಂಡಳಿ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್ ಸಭೆಯಲ್ಲಿ ಭಾಗವಹಿಸಿದ್ದರು. ತಂಡದ ಕಳಪೆ ಪ್ರದರ್ಶನದ ಬಗ್ಗೆ ಮಾಹಿತಿ ನೀಡುವಾಗ ಕೊಹ್ಲಿ ಮೇಲಿನಂತೆ ಸಲಹೆ ಇಟ್ಟಿದ್ದಾರೆ. ಆದರೆ ಹೀಗೆ ವಿಶ್ರಾಂತಿ ನೀಡಿದರೆ ಐಪಿಎಲ್ ತಂಡಗಳ ಮೇಲೆ ಹೊಡೆತ ಬೀಳುತ್ತದೆ. ಜತೆಗೆ ಬುಮ್ರಾ, ಭುವನೇಶ್ವರ್‌ಗೆ ಐಪಿಎಲ್‌ನಿಂದ ದೊರೆಯುವ ಹಣಕ್ಕೂ ಕತ್ತರಿ ಬೀಳುತ್ತದೆ. ಇದನ್ನು ಬಿಸಿಸಿಐ ತುಂಬಿಕೊಡಬೇಕು ಎಂದು ಸಭೆಯಲ್ಲಿ ವಿನಂತಿಸಲಾಗಿದೆ.