Advertisement

ಕೊಹ್ಲಿ  ಕೊಟ್ಟ ಬ್ಯಾಟ್‌ ಬೀಸಲು ವ್ಯಾಟ್‌ ಸಜ್ಜು

07:30 AM Mar 14, 2018 | Team Udayavani |

ಲಂಡನ್‌: ಇದೇ ತಿಂಗಳು ಭಾರತಕ್ಕೆ ಟಿ20 ಕ್ರಿಕೆಟ್‌ ಸರಣಿ ಆಡಲು ಇಂಗ್ಲೆಂಡ್‌ ಮಹಿಳಾ ತಂಡ ಆಗಮಿಸಲಿದೆ. ವಿರಾಟ್‌ ಕೊಹ್ಲಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದ ಡೇನಿಯಲ್‌ ವ್ಯಾಟ್‌ ಈ ತಂಡದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದಾರೆ. 2014ರಲ್ಲಿ ಇಂಗ್ಲೆಂಡ್‌ನ‌ಲ್ಲಿ ಭೇಟಿಯಾಗಿದ್ದಾಗ ವ್ಯಾಟ್‌ಗೆ ವಿರಾಟ್‌ ಕೊಹ್ಲಿ ಉಡುಗೊರೆಯೊಂದನ್ನು ನೀಡಿದ್ದರಂತೆ. ಅದನ್ನೇ ಅಸ್ತ್ರವಾಗಿ ಬಳಸಿಕೊಂಡು ಭಾರತದ ವಿರುದ್ಧ ಪಂದ್ಯವನ್ನಾಡಲು ವ್ಯಾಟ್‌ ತಯಾರಿ ನಡೆಸಿದ್ದಾರಂತೆ. ಹಾಗಾದರೆ ವ್ಯಾಟ್‌ಗೆ ನೀಡಿದ್ದೇನು? ಎನ್ನುವುದು ನಿಮ್ಮ ಕುತೂಹಲವಾಗಿರಬಹುದು. ಅದು ಬೇರೆನೂ ಅಲ್ಲ ಒಂದು ಕ್ರಿಕೆಟ್‌ ಬ್ಯಾಟ್‌ ಎನ್ನುವುದನ್ನು ಸ್ವತಃ ವ್ಯಾಟ್‌ ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ತಿಳಿಸಿದ್ದಾರೆ. ಇದೇ ಬ್ಯಾಟ್‌ ಉಪಯೋಗಿಸಿಕೊಂಡು ಭಾರತ ಮಹಿಳಾ ತಂಡದ ವಿರುದ್ಧ ಆಡುವುದಾಗಿ ಅವರು ಸಂದರ್ಶವೊಂದರಲ್ಲಿ ಹೇಳಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next