Advertisement

ಕುಡಿವ ನೀರಿನಲ್ಲಿ ಕಾರು ತೊಳೆದ ಕೊಹ್ಲಿಗೆ 500 ರೂ. ದಂಡ!

12:59 AM Jun 08, 2019 | Sriram |

ಗುರುಗ್ರಾಮ (ಹರ್ಯಾಣ): ನಿಯಮಗಳು ಎಲ್ಲರಿಗೂ ಒಂದೇ. ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿಗಾದರೂ ಅಷ್ಟೇ, ಜನಸಾಮಾನ್ಯನಿಗಾದರೂ ಅಷ್ಟೇ! ಇಂತಹ ಕಠಿನ ಸಂದೇಶ ಕೊಟ್ಟಿರುವುದು ಗುರುಗ್ರಾಮ ನಗರಪಾಲಿಕೆ.

Advertisement

ಕೆಲಸದವರೊಬ್ಬರು ಕೊಹ್ಲಿಯ ಕಾರನ್ನು ಕುಡಿಯುವ ನೀರಿನಿಂದ ತೊಳೆದರು ಎನ್ನುವುದು ನಗರಪಾಲಿಕೆ ಗಮನಕ್ಕೆ ಬಂದಿದೆ. ಕೂಡಲೇ 500 ರೂ. ದಂಡ ಹಾಕಿ, ಹಾಗೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಗುರುಗ್ರಾಮದ ಡಿಎಲ್‌ಎಫ್ ಫೇಸ್‌-1ನಲ್ಲಿ ಕೊಹ್ಲಿಯ ನಿವಾಸವಿದೆ ಎನ್ನಲಾಗಿದ್ದು, ಅಲ್ಲಿ ಅವರ 2 ಎಸ್‌ಯುವಿ ಸೇರಿದಂತೆ 7 ಕಾರುಗಳಿವೆ ಎಂಬ ಮಾಹಿತಿಯಿದೆ. ದಂಡ ಹಾಕಿದ ಕೂಡಲೇ ಅವರ ಸಿಬಂದಿ ಕೂಡಲೇ ಅದನ್ನು ಪಾವತಿ ಮಾಡಿದ್ದಾರೆಂದು ಹೇಳಲಾಗಿದೆ.

500 ರೂ. ದಂಡ ಕೊಹ್ಲಿಗೆ ತೀರಾ ಅಲ್ಪವಾದರೂ, ಇದರ ಮೂಲಕ ದೇಶವಾಸಿಗಳಿಗೆ ಕುಡಿಯುವ ನೀರಿನ ಬಗ್ಗೆ ಮಹತ್ವದ ಸಂದೇಶ ರವಾನೆಯಾಗಲಿದೆ ಎನ್ನುವುದು ನಗರಪಾಲಿಕೆಯ ಲೆಕ್ಕಾಚಾರ.

Advertisement

Udayavani is now on Telegram. Click here to join our channel and stay updated with the latest news.

Next