Advertisement

ಗೆಲುವಿನಲ್ಲೂ ದಾಖಲೆ ಬರೆದ ಕಿಂಗ್‌ ಕೊಹ್ಲಿ

09:54 AM Aug 27, 2019 | Team Udayavani |

ಆಂಟಿಗುವಾ: ದಾಖಲೆಗಳ ಸರದಾರ ವಿರಾಟ್‌ ಕೊಹ್ಲಿ ವಿಂಡೀಸ್‌ ವಿರುದ್ದದ ಟೆಸ್ಟ್‌ ಗೆಲುವಿನ ನಂತರ ಹೊಸ ದಾಖಲೆ ಬರೆದಿದ್ದಾರೆ. ಆದರೆ ಈ ಬಾರಿ ರನ್‌, ಶತಕಗಳಲ್ಲಿ ಮಾತ್ರ ವಿರಾಟ್‌ ದಾಖಲೆ ಬರೆದಿಲ್ಲ, ನಾಯಕನಾಗಿ ವಿರಾಟ್‌ ಹೊಸ ಮೈಲಿಗಲ್ಲನ್ನು ನೆಟ್ಟಿದ್ದಾರೆ.

Advertisement

ಹೌದು, ಮಾಜಿ ನಾಯಕ ಸೌರವ್‌ ಗಂಗೂಲಿ ಹೆಸರಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ವಿದೇಶದಲ್ಲಿ ಅತೀ ಹೆಚ್ಚು ಟೆಸ್ಟ್‌ ಪಂದ್ಯ ಗೆದ್ದ ಭಾರತೀಯ ನಾಯಕ ಎಂಬ ಖ್ಯಾತಿಗೆ ಕೊಹ್ಲಿ ಸೇರಿದ್ದಾರೆ. ಕೊಹ್ಲಿ ವಿದೇಶದಲ್ಲಿ 26 ಟೆಸ್ಟ್‌ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದು, ಅದರಲ್ಲಿ 12 ಪಂದ್ಯವನ್ನು ಭಾರತ ಗೆದ್ದಿದೆ.  ಸೌರವ್‌ ಗಂಗೂಲಿ 11 ಪಂದ್ಯವನ್ನು ವಿದೇಶದಲ್ಲಿ ಗೆದ್ದುಕೊಂಡಿದ್ದು, ಒಟ್ಟು 28 ಪಂದ್ಯಗಳಲ್ಲಿ ವಿದೇಶದಲ್ಲಿ ಭಾರತವನ್ನು ದಾದ ಮುನ್ನೆಡೆಸಿದ್ದರು. ಮಹೇಂದ್ರ ಸಿಂಗ್ ಧೋನಿ 6 ಪಂದ್ಯ ಮತ್ತು ದ್ರಾವಿಡ್‌ ಐದು ಟೆಸ್ಟ್‌ ಪಂದ್ಯಗಳನ್ನು ವಿದೇಶದಲ್ಲಿ ಗೆದ್ದುಕೊಂಡಿದ್ದರು.

ಇದಲ್ಲದೆ ಕೊಹ್ಲಿ ಮತ್ತೊಂದು ದಾಖಲೆಯಲ್ಲಿ ಧೋನಿಯ ಜೊತೆಗೆ ಕಾಣಿಸಿ ಕೊಂಡಿದ್ದಾರೆ. ಒಟ್ಟಾರೆಯಾಗಿ ಅತೀ ಹೆಚ್ಚು ಟೆಸ್ಟ್‌ ಗೆದ್ದ ನಾಯಕ ಎಂಬ ದಾಖಲೆಯನ್ನು ಧೋನಿ ಜೊತೆ ಹಂಚಿಕೊಂಡಿದ್ದಾರೆ. ಉಭಯ ನಾಯಕರು ತಲಾ 27 ಟೆಸ್ಟ್‌ ಪಂದ್ಯ ಗೆದ್ದಿದ್ದಾರೆ. ಆದರೆ ಕೊಹ್ಲಿ 47 ಟೆಸ್ಟ್‌ ಪಂದ್ಯಗಳಲ್ಲಿ ಈ ಸಾಧನೆ ಮಾಡಿದರೆ, ಧೋನಿ ಇದಕ್ಕಾಗಿ 60 ಟೆಸ್ಟ್‌ ಗಳನ್ನು ತೆಗೆದುಕೊಂಡಿದ್ದರು.

ಆಂಟಿಗುವಾ ಟೆಸ್ಟ್‌ ಪಂದ್ಯವನ್ನು ಭಾರತ 318 ರನ್‌ ಗಳ ಬೃಹತ್‌ ಅಂತರದಿಂದ ಗೆದ್ದು ಬೀಗಿದೆ. ಇದು ವಿದೇಶದಲ್ಲಿ ಭಾರತದ ಅತೀ ದೊಡ್ಡ ಅಂತರದ ಗೆಲುವು. 2017ರಲ್ಲಿ ಲಂಕಾ ವಿರುದ್ಧ ಗಾಲೆ ಟೆಸ್ಟ್‌ ಪಂದ್ಯದಲ್ಲಿ 304 ರನ್‌ ಅಂತರದ ಜಯ ಗಳಿಸಿದ್ದೇ ಇದುವರೆಗಿನ ವಿದೇಶಿ ಅತೀ ದೊಡ್ಡ ಗೆಲುವಾಗಿತ್ತು. ಇದರಿಂದೊಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ನಲ್ಲಿ ಭಾರತ ಶುಭಾರಂಭ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next