Advertisement
ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ 82 ರನ್ ಬಾರಿಸಿದ ಹೊರತಾಗಿಯೂ ಕೊಹ್ಲಿಗೆ 3 ರೇಟಿಂಗ್ ಅಂಕ ನಷ್ಟವಾಗಿದೆ. ಆದರೆ ದ್ವಿತೀಯ ಸ್ಥಾನಿ ಕೇನ್ ವಿಲಿಯಮ್ಸನ್‌ಗಿಂತ 34 ಅಂಕಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಸದ್ಯ 931 ಅಂಕ ಹೊಂದಿರುವ ಕೊಹ್ಲಿ, ಈ ವರ್ಷ ಜೀವನಶ್ರೇಷ್ಠ 937 ಅಂಕ ಸಂಪಾದಿಸಿದ್ದರು.
ಬೌಲಿಂಗ್ ವಿಭಾಗದಲ್ಲಿ ಕಾಗಿಸೊ ರಬಾಡ ಮತ್ತು ಜೇಮ್ಸ್ ಆ್ಯಂಡರ್ಸನ್ ನಡುವೆ ಸ್ಪರ್ಧೆಯೊಂದು ಏರ್ಪಟ್ಟಿದ್ದು, ಕೇವಲ 6 ಅಂಕಗಳ ವ್ಯತ್ಯಾಸವಷ್ಟೇ ಇದೆ. ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ನಂ.1 ಎನಿಸಿದ ವಿಶ್ವದ ಅತೀ ಕಿರಿಯ ಆಟಗಾರ ಎಂಬ ಹಿರಿಮೆ ಈ ಆಫ್ರಿಕನ್ ವೇಗಿಯದ್ದಾಗಿತ್ತು. ಈ ವರ್ಷ ಒಟ್ಟು 178 ದಿನಗಳ ಕಾಲ ರಬಾಡ ನಂಬರ್ ವನ್ ಆಗಿ ಉಳಿದಿದ್ದಾರೆ. ಅಗರ್ವಾಲ್ ನಂ. 67
ಮೆಲ್ಬರ್ನ್ನಲ್ಲಿ ಟೆಸ್ಟ್ ಕ್ಯಾಪ್ ಧರಿಸಿ ಕ್ರಮವಾಗಿ 76 ಹಾಗೂ 42 ರನ್ ಮಾಡಿದ ಮಾಯಾಂಕ್ ಅಗರ್ವಾಲ್ 67ನೇ ಸ್ಥಾನದೊಂದಿಗೆ ರ್‍ಯಾಂಕಿಂಗ್ ಅಭಿಯಾನ ಪ್ರಾರಂಭಿಸಿದ್ದಾರೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ ಚೇತೇಶ್ವರ್ ಪೂಜಾರ 4ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಕೀಪರ್ ರಿಷಬ್ ಪಂತ್ 10 ಸ್ಥಾನಗಳ ಪ್ರಗತಿ ಸಾಧಿಸಿ ಜೀವನಶ್ರೇಷ್ಠ 38ನೇ ರ್‍ಯಾಂಕಿಂಗ್ ಹೊಂದಿದ್ದಾರೆ.
Related Articles
ಮೆಲ್ಬರ್ನ್ ಟೆಸ್ಟ್‌ನ ಪಂದ್ಯಶ್ರೇಷ್ಠ ಆಟಗಾರ ಜಸ್‌ಪ್ರೀತ್ ಬುಮ್ರಾ ಅವರದು 12 ಸ್ಥಾನಗಳ ಭಡ್ತಿ. ಅವರೀಗ 16ನೇ ಸ್ಥಾನಕ್ಕೆ ನೆಗೆದಿದ್ದಾರೆ. ರವೀಂದ್ರ ಜಡೇಜ ಮತ್ತು ಆರ್. ಅಶ್ವಿನ್ ಅಗ್ರ ಹತ್ತರಲ್ಲಿರುವ ಭಾರತದ ಬೌಲರ್‌ಗಳಾಗಿದ್ದಾರೆ.
Advertisement
ಕಮಿನ್ಸ್ ಶ್ರೇಷ್ಠ ಸಾಧನೆಆಸ್ಟ್ರೇಲಿಯದ ಬೌಲಿಂಗ್ ಸಾಧಕರಲ್ಲಿ ನಿರೀಕ್ಷೆಯಂತೆ ವೇಗಿ ಪ್ಯಾಟ್ ಕಮಿನ್ಸ್ ಭಾರೀ ಪ್ರಗತಿ ಕಂಡಿದ್ದಾರೆ. 5 ಸ್ಥಾನ ಮೇಲೇರಿದ ಕಮಿನ್ಸ್ ಈಗ 3ನೇ ಸ್ಥಾನಿಯಾಗಿದ್ದಾರೆ. ಇದು ಅವರ ಜೀವನಶ್ರೇಷ್ಠ ರ್‍ಯಾಂಕಿಂಗ್ ಆಗಿದೆ. ಬ್ಯಾಟಿಂಗಿನಲ್ಲೂ ಮಿಂಚಿದ ಕಮಿನ್ಸ್ 13 ಸ್ಥಾನ ಜಿಗಿದಿದ್ದು, 91ಕ್ಕೆ ಏರಿದ್ದಾರೆ. ಕಿವೀಸ್ ಕ್ರಿಕೆಟಿಗರ ಪ್ರಗತಿ
ಕ್ರೈಸ್ಟ್‌ಚರ್ಚ್ ಟೆಸ್ಟ್‌ನಲ್ಲಿ ಶ್ರೀಲಂಕಾವನ್ನು 423 ರನ್ನುಗಳ ದಾಖಲೆ ಅಂತರದಿಂದ ಮಣಿಸಿದ ನ್ಯೂಜಿಲ್ಯಾಂಡ್ ಕ್ರಿಕೆಟಿಗರ ರ್‍ಯಾಂಕಿಂಗ್‌ನಲ್ಲೂ ಗಮನರ್ಹಾ ಪ್ರಗತಿ ಕಂಡುಬಂದಿದೆ. 9 ವಿಕೆಟ್ ಕಿತ್ತ ಟ್ರೆಂಟ್ ಬೌಲ್ಟ್ 7ಕ್ಕೆ ಏರಿದರೆ, ಟಿಮ್ ಸೌಥಿ 2 ಸ್ಥಾನ ಮತ್ತು ನೀಲ್ ವ್ಯಾಗ್ನರ್ ಒಂದು ಸ್ಥಾನ ಮೇಲೇರಿದ್ದಾರೆ.ವಿರಾಟ್ ಕೊಹ್ಲಿ ಹೊರತುಪಡಿಸಿ 2018ರ ಟೆಸ್ಟ್ ಪಂದ್ಯಗಳಲ್ಲಿ ಸಾವಿರ ರನ್ ಪೇರಿಸಿದ ಏಕೈಕ ಆಟಗಾರನಾಗಿರುವ ಲಂಕೆಯ ಕುಸಲ್ ಮೆಂಡಿಸ್ ಅವರದು 2 ಸ್ಥಾನಗಳ ಜಿಗಿತ (16). ಟಾಪ್-10 ಬ್ಯಾಟ್ಸ್‌ಮನ್
1. ವಿರಾಟ್ ಕೊಹ್ಲಿ 931
2. ಕೇನ್ ವಿಲಿಯಮ್ಸನ್ 897
3. ಸ್ಟೀವನ್ ಸ್ಮಿತ್ 883
4. ಚೇತೇಶ್ವರ್ ಪೂಜಾರ 834
5. ಜೋ ರೂಟ್ 807
6. ಡೇವಿಡ್ ವಾರ್ನರ್ 780
7. ಹೆನ್ರಿ ನಿಕೋಲ್ಸ್ 763
8. ಡೀನ್ ಎಲ್ಗರ್ 728
9. ದಿಮುತ್ ಕರುಣರತ್ನೆ 715
10. ಅಜರ್ ಅಲಿ 697 ಟಾಪ್-10 ಬೌಲರ್
1. ಕಾಗಿಸೊ ರಬಾಡ 880
2. ಜೇಮ್ಸ್ ಆ್ಯಂಡರ್ಸನ್ 874
3. ಪ್ಯಾಟ್ ಕಮಿನ್ಸ್ 836
4. ವೆರ್ನನ್ ಫಿಲಾಂಡರ್ 817
5. ಮೊಹಮ್ಮದ್ ಅಬ್ಟಾಸ್ 813
6. ರವೀಂದ್ರ ಜಡೇಜ 796
7. ಟ್ರೆಂಟ್ ಬೌಲ್ಟ್ 771
8. ಆರ್. ಅಶ್ವಿನ್ 770
9. ಟಿಮ್ ಸೌಥಿ 767
10. ಜಾಸನ್ ಹೋಲ್ಡರ್ 751