Advertisement

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊಹ್ಲಿ ಅಭ್ಯಾಸ

07:00 AM Apr 01, 2018 | Team Udayavani |

ಬೆಂಗಳೂರು: ಆರ್‌ಸಿಬಿ ತಂಡದ ನಾಯಕ ವಿರಾಟ್‌ ಕೊಹ್ಲಿ ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

Advertisement

ಮಧ್ಯಾಹ್ನದ ಸಮಯದಲ್ಲಿ ಸಹ ಆಟಗಾರರ ಜತೆ ಕೊಹ್ಲಿ ಅಭ್ಯಾಸ ನಡೆಸಿದರು. ಈ ಸಂದರ್ಭದಲ್ಲಿ ಬೌಲಿಂಗ್‌ ಕೋಚ್‌ ಆಶೀಶ್‌ ನೆಹ್ರಾ ಜತೆಗಿದ್ದು ಬೌಲರ್‌ಗಳಿಗೆ ಸಲಹೆ ನೀಡಿದರು. ಸ್ವಲ್ಪ ಸಮಯ ರನ್ನಿಂಗ್‌ ಮಾಡಿದ ಕೊಹ್ಲಿ ಅನಂತರ ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸಿದರು. 

ಇನ್ನೂ ಪೂರ್ಣ ಪ್ರಮಾಣದಲ್ಲಿ ಆರ್‌ಸಿಬಿ ಆಟಗಾರರು ತಂಡವನ್ನು ಕೂಡಿಕೊಂಡಿಲ್ಲ. ಒಂದೆರೆಡು ದಿನಗಳಲ್ಲಿ ಎಲ್ಲ ಆಟಗಾರರು ತಂಡವನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ. ಎ. 7ರಿಂದ ಐಪಿಎಲ್‌ ಹಬ್ಬ ಆರಂಭವಾಗಲಿದ್ದು, ಆರ್‌ಸಿಬಿ ತಂಡ ಮೊದಲ ಪಂದ್ಯವನ್ನು ಎ. 8ರಂದು ಕೋಲ್ಕತಾದಲ್ಲಿ ಕೆಕೆಆರ್‌ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next