Advertisement

ಕೊಹ್ಲಿಗೆ ತುಸು ವಿಶ್ರಾಂತಿ ಬೇಕಿದೆ: ಮೈಕಲ್‌ ವಾನ್‌

09:45 PM Apr 07, 2019 | Sriram |

ಬೆಂಗಳೂರು: ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಅವರಿಗೆ ತುಸು ವಿಶ್ರಾಂತಿ ನೀಡುವ ಅಗತ್ಯವಿದೆ ಎಂಬುದಾಗಿ ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಮೈಕಲ್‌ ವಾನ್‌ ಸಲಹೆ ಮಾಡಿದ್ದಾರೆ.

Advertisement

ಐಪಿಎಲ್‌ನಲ್ಲಿ ಬೆಂಗಳೂರು ತಂಡ ಸತತ 6 ಸೋಲನುಭವಿಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

“ಮುಂಬರುವ ವಿಶ್ವಕಪ್‌ ದೃಷ್ಟಿಯಿಂದ ವಿರಾಟ್‌ ಕೊಹ್ಲಿ ಅವರಿಗೆ ಐಪಿಎಲ್‌ನಿಂದ ಸ್ವಲ್ಪ ಕಾಲ ವಿಶ್ರಾಂತಿ ನೀಡಬೇಕಿದೆ. ಇದರಿಂದ ಭಾರತಕ್ಕೆ ಹೆಚ್ಚಿನ ಅನುಕೂಲವಾಗಲಿದೆ’ ಎಂದು ವಾನ್‌ ಹೇಳಿದ್ದಾರೆ.

“ವಿರಾಟ್‌ ಕೊಹ್ಲಿ ವಿಶ್ರಾಂತಿ ಇಲ್ಲದೇ ಸತತವಾಗಿ ತಂಡಗಳನ್ನು ಮುನ್ನಡೆಸುತ್ತ ಬಂದಿದ್ದಾರೆ. ತನ್ನ ನಾಯಕತ್ವದ ತಂಡವೊಂದು ಸತತವಾಗಿ ಸೋತರೆ ಇದು ಅವರನ್ನು ಮಾನಸಿಕವಾಗಿ ಕುಗ್ಗಿಸಲಿದೆ. ಹೀಗಾಗಿ ಮುಂದಿನ ಕೆಲವು ಪಂದ್ಯಗಳ ಮಟ್ಟಿಗೆ ಆರ್‌ಸಿಬಿ ತಂಡದ ನೇತೃತ್ವವನ್ನು ಬೇರೆಯವರಿಗೆ ವಹಿಸುವುದು ಉತ್ತಮ ನಡೆಯಾಗಲಿದೆ’ ಎಂಬುದು ಮೈಕಲ್‌ ವಾನ್‌ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next