Advertisement

ಐಸಿಸಿ ವಾರ್ಷಿಕ ಪ್ರಶಸ್ತಿ: ಕೊಹ್ಲಿಗೆ ಸಿಂಹಪಾಲು

12:23 PM Jan 19, 2018 | |

ದುಬಾೖ: 2017ರ ಐಸಿಸಿ ವಾರ್ಷಿಕ ಕ್ರಿಕೆಟ್‌ ಪ್ರಶಸ್ತಿಗಳಲ್ಲಿ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಸಿಂಹಪಾಲನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೊಹ್ಲಿ ವರ್ಷದ ಶ್ರೇಷ್ಠ ಆಟಗಾರ, ವರ್ಷದ ಏಕದಿನ ಕ್ರಿಕೆಟಿಗ, ವರ್ಷದ ಟೆಸ್ಟ್‌ ಹಾಗೂ ಏಕದಿನ ತಂಡಗಳ ನಾಯಕನ ಗೌರವಕ್ಕೆ ಪಾತ್ರರಾಗಿದ್ದಾರೆ. ವರ್ಷದ ಆಟಗಾರನಿಗೆ “ಸರ್‌ ಗ್ಯಾರ್‌ಫೀಲ್ಡ್‌ ಸೋಬರ್’ ಟ್ರೋಫಿ ನೀಡಿ ಗೌರವಿಸಲಾಗುವುದು.

Advertisement

ವಿಪರ್ಯಾಸವೆಂದರೆ, ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಟೆಸ್ಟ್‌ ಸರಣಿ ಕಳೆದುಕೊಂಡ ಸಂದರ್ಭದಲ್ಲೇ ನಾಯಕ ಕೊಹ್ಲಿ ಇಷ್ಟೆಲ್ಲ ಪ್ರಶಸ್ತಿಗಳನ್ನು ಬಾಚಿಕೊಂಡದ್ದು! ಇದು ಕೊಹ್ಲಿ ನಾಯಕತ್ವದಲ್ಲಿ ಭಾರತಕ್ಕೆ ಎದುರಾದ ಮೊದಲ ಟೆಸ್ಟ್‌ ಸರಣಿ ಸೋಲು.
2016ರ ಸೆ. 21ರಿಂದ 2017ರ ಅಂತ್ಯದ ವರೆಗಿನ ಕ್ರಿಕೆಟ್‌ ಸಾಧನೆಯನ್ನು ಮಾನದಂಡ ವಾಗಿರಿಸಿಕೊಂಡು ಈ ಪ್ರಶಸ್ತಿಗಳನ್ನು ಘೋಷಿಸ ಲಾಗಿದೆ. ಈ ಅವಧಿಯ ಟೆಸ್ಟ್‌ ಪಂದ್ಯಗಳಲ್ಲಿ ಕೊಹ್ಲಿ 77.80ರ ಸರಾಸರಿಯಲ್ಲಿ 2,203 ರನ್‌ ಪೇರಿಸಿದ್ದರು. ಇದರಲ್ಲಿ 8 ಶತಕಗಳು ಒಳಗೊಂಡಿವೆ. ಹಾಗೆಯೇ ಏಕದಿನದಲ್ಲಿ 7 ಶತಕ ಸಹಿತ 82.63ರ ಸರಾಸರಿಯೊಂದಿಗೆ 1,818 ರನ್‌ ರಾಶಿ ಹಾಕಿದ್ದರು. ಟಿ20 ಕ್ರಿಕೆಟ್‌ನಲ್ಲಿ ಕೊಹ್ಲಿ ಗಳಿಕೆ 299 ರನ್‌. ಇವರ ನಾಯಕತ್ವದ ಅವಧಿಯಲ್ಲಿ ಭಾರತ ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದು, ಈಗಲೂ ಇದೇ ಎತ್ತರದಲ್ಲಿದೆ. ಐಸಿಸಿ ವರ್ಷದ ಕ್ರಿಕೆಟಿಗ ಹಾಗೂ ವರ್ಷದ ಏಕದಿನ ಕ್ರಿಕೆಟಿಗನ ಆಯ್ಕೆಗೆ ವಿರಾಟ್‌ ಕೊಹ್ಲಿ ಅವರ ಈ ಸಾಧನೆಗಳು ಧಾರಾಳವಾಗಿವೆ ಎಂದು ಐಸಿಸಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. 

2 ವರ್ಷವೂ ಭಾರತದ ಪಾಲು
“2012ರಲ್ಲೂ ನನಗೆ ಐಸಿಸಿ ಪ್ರಶಸ್ತಿ ಒಲಿದಿತ್ತು, ಆದರೆ ಸರ್‌ ಗ್ಯಾರ್‌ಫೀಲ್ಡ್‌ ಟ್ರೋಫಿ ಲಭಿಸುತ್ತಿರುವುದು ಇದೇ ಮೊದಲು. ಇದು ವಿಶ್ವ ಕ್ರಿಕೆಟ್‌ ಪ್ರಶಸ್ತಿಗಳಲ್ಲೇ ಉನ್ನತ ಮಟ್ಟದ್ದಾಗಿದೆ. ಸತತ 2 ವರ್ಷ ಈ ಗೌರವ ಭಾರತೀಯರ ಪಾಲಾಗುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. ಕಳೆದ ಸಲ ಆರ್‌. ಅಶ್ವಿ‌ನ್‌ ವರ್ಷದ ಕ್ರಿಕೆಟಿಗನಾಗಿ ಮೂಡಿಬಂದಿದ್ದರು. ವರ್ಷದ ಏಕದಿನ ಕ್ರಿಕೆಟಿಗನ ಆಯ್ಕೆಗಾಗಿ ವಿರಾಟ್‌ ಕೊಹ್ಲಿ ಜತೆಗೆ ಪಾಕಿಸ್ಥಾನದ ಪೇಸರ್‌ ಹಸನ್‌ ಅಲಿ, ಅಫ್ಘಾನಿಸ್ಥಾನದ ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ ಮತ್ತು ರೋಹಿತ್‌ ಶರ್ಮ ಕೂಡ ಸ್ಪರ್ಧೆಯಲ್ಲಿದ್ದರು. 

ಚಾಹಲ್‌ ಟಿ20 ಸಾಧಕ
ವಿರಾಟ್‌ ಕೊಹ್ಲಿ ಹೊರತುಪಡಿಸಿ ಭಾರತದ ಇತರ ನಾಲ್ವರು ಐಸಿಸಿ ಟೆಸ್ಟ್‌ ಹಾಗೂ ಏಕದಿನ ತಂಡಗಳಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಟೆಸ್ಟ್‌ ತಂಡದಲ್ಲಿ ಪೂಜಾರ, ಅಶ್ವಿ‌ನ್‌; ಏಕದಿನ ತಂಡದಲ್ಲಿ ರೋಹಿತ್‌ ಶರ್ಮ ಮತ್ತು ಜಸ್‌ಪ್ರೀತ್‌ ಬುಮ್ರಾ ಕಾಣಿಸಿಕೊಂಡಿದ್ದಾರೆ.ಟೀಮ್‌ ಇಂಡಿಯಾದ ಮತ್ತೂಬ್ಬ ಪ್ರಶಸ್ತಿ ವಿಜೇತನೆಂದರೆ ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಾಹಲ್‌. ಅವರು ವರ್ಷದ ಟಿ20 ಸಾಧಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಇಂಗ್ಲೆಂಡ್‌ ಎದುರಿನ ಟಿ20 ಪಂದ್ಯದಲ್ಲಿ 25 ರನ್ನಿತ್ತು 6 ವಿಕೆಟ್‌ ಉಡಾಯಿಸಿದ ಸಾಧನೆಗಾಗಿ ಚಾಹಲ್‌ ಅವರನ್ನು ಈ ಪ್ರಶಸ್ತಿಗೆ ಆರಿಸಲಾಯಿತು. ಇದು ಟಿ20 ಕ್ರಿಕೆಟ್‌ನಲ್ಲಿ ಭಾರತೀಯನೊಬ್ಬನ ಅತ್ಯುತ್ತಮ ಸಾಧನೆಯಾಗಿದೆ. ಪ್ರಶಸ್ತಿ ರೇಸ್‌ನಲ್ಲಿ ಚಾಹಲ್‌ ಶ್ರೀಲಂಕಾದ ಅಜಂತ ಮೆಂಡಿಸ್‌ ಅವರನ್ನು ಹಿಂದಿಕ್ಕಿದರು.

ರಶೀದ್‌ ಖಾನ್‌ ಸಾಧನೆ
ಐಸಿಸಿ ಅಸೋಸಿಯೇಟ್‌ ಕ್ರಿಕೆಟಿಗನಾಗಿ ಆಯ್ಕೆಯಾದ ಅಫ್ಘಾನಿಸ್ಥಾನದ ಸ್ಪಿನ್ನರ್‌ ರಶೀದ್‌ ಖಾನ್‌ 2017ರಲ್ಲಿ 60 ವಿಕೆಟ್‌ ಉರುಳಿಸಿದ ಸಾಧನೆ ಮಾಡಿದ್ದಾರೆ. ಇದು ಕ್ಯಾಲೆಂಡರ್‌ ವರ್ಷವೊಂದರಲ್ಲಿ ಅಸೋಸಿಯೇಟ್‌ ರಾಷ್ಟ್ರದ ಬೌಲರ್‌ ಓರ್ವನ ಅತ್ಯುತ್ತಮ ಸಾಧನೆ. 
ಐಸಿಸಿ ಟೆಸ್ಟ್‌ ಹಾಗೂ ಏಕದಿನ ತಂಡ ಗಳೆರಡರಲ್ಲೂ ಆಯ್ಕೆಯಾದದ್ದು ಇಂಗ್ಲೆಂಡ್‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಹೆಚ್ಚು ಗಾರಿಕೆ. ಇತ್ತೀಚೆಗೆ ವಿವಾದಗಳಿಂದಲೇ ಸುದ್ದಿ ಯಾಗುತ್ತಿರುವ ಸ್ಟೋಕ್ಸ್‌ಗೆ ಇದರಿಂದ ಹೆಚ್ಚಿನ ನೈತಿಕ ಶಕ್ತಿ ಲಭಿಸಿದಂತಾಗಿದೆ.

Advertisement

ಪಾಕಿಸ್ಥಾನದ ಬೌಲರ್‌ ಹಸನ್‌ ಅಲಿ ವರ್ಷದ ಉದಯೋನ್ಮುಖ ಆಟಗಾರ, ದಕ್ಷಿಣ ಆಫ್ರಿಕಾದ ಮರೈಸ್‌ ಎರಾಸ್ಮಸ್‌ ಸತತ 2ನೇ ವರ್ಷ ವರ್ಷದ ಅಂಪಾಯರ್‌ ಗೌರವಕ್ಕೆ ಭಾಜನರಾದರು. ಇಂಗ್ಲೆಂಡಿನ ಪೇಸರ್‌ ಅನ್ಯಾ ಶ್ರಬೊÕàಲ್‌ ಅವರಿಗೆ “ಸ್ಪಿರಿಟ್‌ ಆಫ್ ಕ್ರಿಕೆಟ್‌’ ಪ್ರಶಸ್ತಿ ಒಲಿಯಿತು. ಕಳೆದ ವನಿತಾ ವಿಶ್ವಕಪ್‌ ಸೆಮಿಫೈನಲ್‌ ಗೆಲುವಿನ ಬಳಿಕ ದಕ್ಷಿಣ ಆಫ್ರಿಕಾ ನಾಯಕಿ ಡೇನ್‌ ವಾನ್‌ ನೀಕರ್ಕ್‌ ಅವರನ್ನು ಸಮಾಧಾನಪಡಿಸಿದ ರೀತಿಗಾಗಿ ಅನ್ಯಾ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

“ಐಸಿಸಿ ಫ್ಯಾನ್ಸ್‌  ಮೊಮೆಂಟ್‌’
ಇದೇ ಮೊದಲ ಬಾರಿಗೆ “ಐಸಿಸಿ ಫ್ಯಾನ್ಸ್‌ ಮೊಮೆಂಟ್‌’ ಪ್ರಶಸ್ತಿಯೊಂದನ್ನು ನೀಡಲಾರಂಭಿಸಿದ್ದು, ವೀಕ್ಷಕರ ಆಯ್ಕೆಯ ಈ ಪ್ರಶಸ್ತಿ ಪಾಕಿಸ್ಥಾನದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆಲುವಿನ ಸಾಧನೆಗೆ ಒಲಿದಿದೆ. 

ಐಸಿಸಿ ಪ್ರಶಸ್ತಿ ವಿಜೇತ ಕ್ರಿಕೆಟಿಗರು
ವರ್ಷದ ಕ್ರಿಕೆಟಿಗ: ವಿರಾಟ್‌ ಕೊಹ್ಲಿ
ವರ್ಷದ ಟೆಸ್ಟ್‌ ಕ್ರಿಕೆಟಿಗ: ಸ್ಟೀವನ್‌ ಸ್ಮಿತ್‌
ವರ್ಷದ ಏಕದಿನ ಕ್ರಿಕೆಟಿಗ: ವಿರಾಟ್‌ ಕೊಹ್ಲಿ
ವರ್ಷದ ಉದಯೋನ್ಮುಖ ಕ್ರಿಕೆಟಿಗ: ಹಸನ್‌ ಅಲಿ
ವರ್ಷದ ಅಸೋಸಿಯೇಟ್‌ ಕ್ರಿಕೆಟಿಗ: ರಶೀದ್‌ ಖಾನ್‌
ವರ್ಷದ ಟಿ20 ಪ್ರದರ್ಶನ: ಯಜುವೇಂದ್ರ ಚಾಹಲ್‌
ವರ್ಷದ ಅಂಪಾಯರ್‌: ಮರೈಸ್‌ ಎರಾಸ್ಮಸ್‌
ಸ್ಪಿರಿಟ್‌ ಆಫ್ ಕ್ರಿಕೆಟ್‌: ಅನ್ಯಾ ಶ್ರಬೊಲ್‌ 

ಐಸಿಸಿ 2017ರ ಟೆಸ್ಟ್‌ ತಂಡ
ಡೀನ್‌ ಎಲ್ಗರ್‌, ಡೇವಿಡ್‌ ವಾರ್ನರ್‌, ವಿರಾಟ್‌ ಕೊಹ್ಲಿ (ನಾಯಕ), ಸ್ಟೀವನ್‌ ಸ್ಮಿತ್‌, ಚೇತೇಶ್ವರ್‌ ಪೂಜಾರ, ಬೆನ್‌ ಸ್ಟೋಕ್ಸ್‌, ಕ್ವಿಂಟನ್‌ ಡಿ ಕಾಕ್‌ (ವಿ.ಕೀ.), ಆರ್‌. ಅಶ್ವಿ‌ನ್‌, ಮಿಚೆಲ್‌ ಸ್ಟಾರ್ಕ್‌, ಕಾಗಿಸೊ ರಬಾಡ, ಜೇಮ್ಸ್‌ ಆ್ಯಂಡರ್ಸನ್‌.

ಐಸಿಸಿ 2017ರ ಏಕದಿನ ತಂಡ
ಡೇವಿಡ್‌ ವಾರ್ನರ್‌, ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ (ನಾಯಕ), ಬಾಬರ್‌ ಆಜಂ, ಎಬಿ ಡಿ ವಿಲಿಯರ್, ಕ್ವಿಂಟನ್‌ ಡಿ ಕಾಕ್‌ (ವಿ.ಕೀ.), ಬೆನ್‌ ಸ್ಟೋಕ್ಸ್‌, ಟ್ರೆಂಟ್‌ ಬೌಲ್ಟ್, ಹಸನ್‌ ಅಲಿ, ರಶೀದ್‌ ಖಾನ್‌, ಜಸ್‌ಪ್ರೀತ್‌ ಬುಮ್ರಾ.

ಸ್ಟೀವನ್‌ ಸ್ಮಿತ್‌ ಟೆಸ್ಟ್‌ ಕ್ರಿಕೆಟಿಗ
ಆಸ್ಟ್ರೇಲಿಯದ ನಾಯಕ ಸ್ಟೀವನ್‌ ಸ್ಮಿತ್‌ ವರ್ಷದ ಟೆಸ್ಟ್‌  ಕ್ರಿಕೆಟಿಗ ಪ್ರಶಸ್ತಿ ಒಲಿದಿದೆ. ನಿಗದಿತ ಅವಧಿಯಲ್ಲಿ ಸ್ಮಿತ್‌ 16 
ಟೆಸ್ಟ್‌ಗಳಿಂದ 78.12ರ ಸರಾಸರಿಯಲ್ಲಿ 1,875 ರನ್‌ ಪೇರಿಸಿದ್ದರು. ಇದರಲ್ಲಿ 8 ಶತಕ ಒಳಗೊಂಡಿದೆ. “ಇದೊಂದು ಮಹಾನ್‌ ಗೌರವ. ಇದು 2015ರಲ್ಲೂ ನನಗೆ ಒಲಿದಿತ್ತು’ ಎಂದು ಸ್ಮಿತ್‌ ಪ್ರತಿಕ್ರಿಯಿಸಿದ್ದಾರೆ. ಸ್ಮಿತ್‌ ಜತೆ ರೇಸ್‌ನಲ್ಲಿದ್ದ ಇತರರೆಂದರೆ ಅಶ್ವಿ‌ನ್‌, ಪೂಜಾರ, ಕೊಹ್ಲಿ ಮತ್ತು ಸ್ಟೋಕ್ಸ್‌. 

Advertisement

Udayavani is now on Telegram. Click here to join our channel and stay updated with the latest news.

Next