Advertisement

ಕೊಹ್ಲಿ ಭಾರತದ ಮೌಲ್ಯಯುತ ತಾರೆ; ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ಗೆ 2ನೇ ಸ್ಥಾನ

10:17 AM Feb 07, 2020 | Team Udayavani |

ನವದೆಹಲಿ: ವಿವಿಧ ಕ್ಷೇತ್ರದ ತಾರೆಯರನ್ನು ಮತ್ತೂಮ್ಮೆ ಹಿಂದಿಕ್ಕಿದ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಭಾರತದ ಬ್ರ್ಯಾಂಡ್‌ನ‌ ಮೌಲ್ಯಯುತ ತಾರೆ ಎನಿಸಿಕೊಂಡಿದ್ದಾರೆ.

Advertisement

ಸತತ 3ನೇ ಸಲ ವಿರಾಟ್‌ ಕೊಹ್ಲಿ ಈ ಸ್ಥಾನ ಪಡೆದಿದ್ದಾರೆ. 31 ವರ್ಷದ ಕೊಹ್ಲಿ 1692 ಕೋಟಿ ರೂ. ತಮ್ಮ ಬ್ರ್ಯಾಂಡ್‌ನಿಂದ ಪಡೆದಿದ್ದಾರೆ. ಅಂದರೆ 2019ರಲ್ಲಿ ಇವರು ಶೇ.39ರಷ್ಟು ಆದಾಯದ ಹೆಚ್ಚಳತೆ ಕಂಡಿದ್ದಾರೆ. ಬಾಲಿವುಡ್‌ ನಟರಾದ ಅಕ್ಷಯ್‌ ಕುಮಾರ್‌, ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌, ಶಾರೂಖ್‌ ಖಾನ್‌ರಂತಹ ದಿಗ್ಗಜರನ್ನು ಕೊಹ್ಲಿ ಹಿಂದಿಕ್ಕಿರುವುದು ವಿಶೇಷ. ಡಫ್ ಫೆಲ್ಪ್ ಸೆಲೆಬ್ರಿಟಿ ಬ್ರ್ಯಾಂಡ್‌ ವ್ಯಾಲ್ಯುವೇಷನ್‌ ಅಧ್ಯಯನ ವರದಿ ಪ್ರಕಾರ ಪಟ್ಟಿ ಬಿಡುಗಡೆಗೊಂಡಿದೆ. 744 ಕೋಟಿ ರೂ. ಪಡೆಯುತ್ತಿರುವ ಅಕ್ಷಯ್‌ ಕುಮಾರ್‌ 2ನೇ ಸ್ಥಾನ ಪಡೆದುಕೊಂಡಿದ್ದಾರೆ.

ರಣವೀರ್‌ ಸಿಂಗ್‌, ದೀಪಿಕಾ ಪಡುಕೋಣೆ ದಂಪತಿಗಳು ತಲಾ 666 ಕೋಟಿ ರೂ. ಪಡೆದಿದ್ದಾರೆ. 41.2 ಮಿಲಿಯನ್‌ ಬ್ರ್ಯಾಂಡ್‌ ಮೌಲ್ಯ ಹೊಂದಿರುವ ಎಂ.ಎಸ್‌.ಧೋನಿ 9ನೇ ಸ್ಥಾನದಲ್ಲಿದ್ದಾರೆ. ಒಟ್ಟಾರೆ ಭಾರತ 20 ಗಣ್ಯರು ಪಟ್ಟಿಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next