Advertisement

ವಿರಾಟ್‌ ಕೊಹ್ಲಿ ದಿ ಗ್ರೇಟ್‌: ಜಹೀರ್‌ ಅಬ್ಟಾಸ್‌

07:11 AM Apr 15, 2020 | mahesh |

ಲಾಹೋರ್‌: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಪ್ರಸಕ್ತ ಕ್ರಿಕೆಟ್‌ ಜಗತ್ತಿನ “ದಿ ಗ್ರೇಟ್‌ ಕ್ರಿಕೆಟರ್‌’ ಎಂದು ಪಾಕಿಸ್ಥಾನದ ಮಾಜಿ ಆಟಗಾರ ಜಹೀರ್‌ ಅಬ್ಟಾಸ್‌ ಹೇಳಿದ್ದಾರೆ.

Advertisement

ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿ¨ªಾರೆ. ಆದರೆ ಬೆಸ್ಟ್‌ ಬ್ಯಾಟ್ಸ್‌ ಮನ್‌ ಆಗಬೇಕಾದರೆ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕು. ಈ ನಿಟ್ಟಿನಲ್ಲಿ ಕೊಹ್ಲಿ ಓರ್ವ ಪರಿಪೂರ್ಣ ಆಟಗಾರರಾಗಿದ್ದಾರೆ ಎಂದು ಅಬ್ಟಾಸ್‌
ಹೇಳಿದ್ದಾರೆ.

ಇದೇ ವೇಳೆ ವಿರಾಟ್‌ ಕೊಹ್ಲಿಗೆ ಸರಿ ಸಮಾನವಾಗಿ ನಿಲ್ಲಬಲ್ಲ ಬ್ಯಾಟ್ಸ್‌ ಮನ್‌ಗಳು ಮುಂದಿನ ದಿನಗಳಲ್ಲಿ ಮೂಡಿ ಬರಲಿದ್ದಾರೆ ಎಂದು ಅಬ್ಟಾಸ್‌ ಹೇಳಿದ್ದಾರೆ. ಒಂದು ದಶಕದಲ್ಲಿ ಸಚಿನ್‌ ದಾಖಲೆ ಮುರಿಯುವಂತ ಕ್ರಿಕೆಟಿಗ ಯಾರು ಇಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಅವರನ್ನು ಮೀರಿಸುವಂತೆ ಕೊಹ್ಲಿ ಇದೀಗ ಮಿಂಚುತ್ತಿದ್ದಾರೆ. ಅದರಂತೆ ಮುಂದಿನ ದಿನಗಳಲ್ಲಿ ಕೊಹ್ಲಿ ಅವರನ್ನು ಹಿಂದಿಕ್ಕುವ ಬ್ಯಾಟ್ಸ್‌ಮನ್‌ಗಳು ಖಂಡಿತಾ ಬರಲಿದ್ದಾರೆ ಎಂದು ಅಬ್ಟಾಸ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next