Advertisement

ಕಲಬುರಗಿ, ತುಮಕೂರು, ಮೈಸೂರು,ಪಾಕಿಸ್ತಾನದಲ್ಲೂ ಕೊಹ್ಲಿ ಮಧುಚಂದ್ರ!

11:35 AM Dec 20, 2017 | |

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಬಾಲಿವುಡ್‌ ನಟಿ ಅನುಷ್ಕಾ ಶರ್ಮ ವಿವಾಹವಾಗಿ ಇಟಲಿಯಲ್ಲಿ ಮಧುಚಂದ್ರ ನಡೆಸುತ್ತಾ ಸಂಭ್ರಮಿಸುತ್ತಿದ್ದಾರೆ. ಇಂತಹ ಹೊತ್ತಿನಲ್ಲೇ ಅವರು ತಮ್ಮ ಬೆನ್ನ ಹಿಂದೆ ದಟ್ಟ ಹಿಮವಿರುವ ಸೆಲ್ಫಿ ಪ್ರಕಟಿಸಿದ್ದಾರೆ. ಅಭಿಮಾನಿಗಳು ಕೊಹ್ಲಿ ಈ ಚಿತ್ರ ಪ್ರಕಟಿಸಿದ್ದು ಎಲ್ಲಿ ಎಂದು ತಲೆ ಕೆರೆದು ಕೊಳ್ಳುತ್ತಿರುವಾಗ ಬೇರೆಯೇ ಬೆಳವಣಿಗೆಯಾಗಿದೆ. ಕರ್ನಾಟಕವೂ ಸೇರಿದಂತೆ ವಿಶ್ವದ ನಾನಾ ಕಡೆಯಿರುವ ಅಭಿಮಾನಿಗಳು ಕೊಹ್ಲಿ ತಮ್ಮೂರಿಗೆ ಬಂದಿದ್ದರು ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ಹಾಕುತ್ತಿದ್ದಾರೆ! 

Advertisement

ಆಗಿದ್ದಿಷ್ಟೇ: ಕೊಹ್ಲಿ ಪ್ರಕಟಿಸಿದ್ದ ಮಧುಚಂದ್ರದ ಹಿನ್ನೆಲೆಯನ್ನು ಫೋಟೋಶಾಪ್‌ ಮೂಲಕ ಅಳಿಸಿ ಹಾಕಿ ಅಲ್ಲಿ ತಮಗೆ ಬೇಕಾದ ಹಿನ್ನೆಲೆ ಚಿತ್ರಗಳನ್ನು ಅಭಿಮಾನಿಗಳು ಹಾಕುತ್ತಿದ್ದಾರೆ. ಅಭಿಮಾನಿಗಳ ಈ ಕೈಚಳಕಕ್ಕೆ ಸ್ವತಃ ಕೊಹ್ಲಿಯೂ ಅಚ್ಚರಿಗೊಂಡಿದ್ದಾರೆ. ಕೊಹ್ಲಿ ಗುಲ್ಬರ್ಗಾ, ತುಮಕೂರು, ಬೆಂಗಳೂರು, ಮೈಸೂರಿನಲ್ಲಿರುವಂತೆ ಕನ್ನಡಿಗರು ಚಿತ್ರ ಪ್ರಕಟಿಸಿದ್ದಾರೆ. ಪಾಕ್‌ ಅಭಿಮಾನಿಗಳು ಕರಾಚಿಯಲ್ಲಿರುವಂತೆ, ಲಾಹೋರ್‌ನ ರೆಸ್ಟೋರೆಂಟ್‌ನಲ್ಲಿ ಕಾಣಿಸಿಕೊಂಡಂತೆ, ಕಡೆಗೆ ಒಂದು ಪಾನೀಯ ಅಂಗಡಿಯೆದುರು ಪ್ರತ್ಯಕ್ಷವಾದಂತೆ ಕೈಚಳಕ ತೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next