ಚೆನ್ನೈ: ಇಲ್ಲಿನ ಎಂ.ಚಿದಂಬರಂ ಸ್ಟೇಡಿಯಂ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಭರ್ಜರಿ ರನ್ ಅಂತರದಿಂದ ಗೆದ್ದಿದೆ. ಈ ಮೂಲಕ ಮೊದಲ ಪಂದ್ಯದ ಸೋಲಿಗೆ ವಿರಾಟ್ ಬಳಗ ಸೇಡು ತೀರಿಸಿಕೊಂಡಿದೆ.
ಈ ಪಂದ್ಯದ ಗೆಲುವಿನೊಂದಿಗೆ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದರು. ನಾಯಕನಾಗಿ ತವರಿನಲ್ಲಿ ಅತೀ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ ಧೋನಿ ದಾಖಲೆಯನ್ನು ಸರಿಗಟ್ಟಿದರು.
ಇದನ್ನೂ ಓದಿ:ಸೋತಲ್ಲೇ ಗೆದ್ದ ಟೀಂ ಇಂಡಿಯಾ: ಚೆಪಾಕ್ ನಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ
ಮಹೇಂದ್ರ ಸಿಂಗ್ ಧೋನಿ ನಾಯಕನಾಗಿ ತವರಿನಲ್ಲಿ 30 ಟೆಸ್ಟ್ ಪಂದ್ಯಗಳಲ್ಲಿ 21ಪಂದ್ಯಗಳನ್ನು ಗೆದ್ದುಕೊಂಡಿದ್ದರು. ಮೂರು ಪಂದ್ಯಗಳನ್ನು ಸೋತು, ಆರು ಪಂದ್ಯಗಳಲ್ಲಿ ಡ್ರಾ ಅನುಭವಿಸಿದ್ದರು. ಇದೀಗ ವಿರಾಟ್ ಕೊಹ್ಲಿ 28 ಪಂದ್ಯಗಳಲ್ಲಿ ಈ ದಾಖಲೆಯನ್ನು ಸಮಬಲ ಮಾಡಿಕೊಂಡಿದ್ದಾರೆ. ವಿರಾಟ್ ನಾಯಕತ್ವದಡಿಯಲ್ಲಿ ಭಾರತ 21 ಪಂದ್ಯ ಗೆದ್ದಿದ್ದು, ಎರಡು ಸೋತು ಐದು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.
ಚೆನ್ನೈನಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಭಾರತ ತಂಡ 317 ರನ್ ಗಳ ಭಾರೀ ಅಂತರದ ಗೆಲುವು ಕಂಡಿದೆ. ಇದರೊಂದಿಗೆ ನಾಲ್ಕು ಪಂದ್ಯಗಳ ಸರಣಿಯನ್ನು 1-1 ಅಂತರದಲ್ಲಿ ಸಮಬಲ ಮಾಡಿಕೊಂಡಿದೆ. ಮುಂದಿನೆರಡು ಪಂದ್ಯಗಳು ಅಹಮದಾಬಾದ್ ನಲ್ಲಿ ನಡೆಯಲಿದೆ.
ಇದನ್ನೂ ಓದಿ: ಓವರಿಗೆ 5 ಸಿಕ್ಸರ್ ಬಾರಿಸಿ ಮಿಂಚಿದ ಅರ್ಜುನ್ ತೆಂಡುಲ್ಕರ್