Advertisement
ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಸೋಲನ್ನು ಇನ್ನೂ ಮರೆತಿಲ್ಲ. ಆ ನಂತರ ವೆಸ್ಟ್ ಇಂಡೀಸ್ ಪ್ರವಾಸದಲ್ಲಿಯೂ ತಂಡದಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿಲ್ಲ. ಇದರ ನಡುವೆಯೇ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದು, ಟೆಸ್ಟ್ ಸರಣಿಯನ್ನು ಆರಂಭಿಸಿದೆ. ಲಂಕಾ ತಂಡ ಭಾರತಕ್ಕೆ ಸುಲಭ ಎದುರಾಳಿಯಂತೂ ಅಲ್ಲ. ಇತ್ತೀಚೆಗೆ ನಡೆದ ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯಗಳಲ್ಲಿ ಲಂಕಾ ಕಳಪೆ ಪ್ರದರ್ಶನ ನೀಡಿರಬಹುದು. ಆದರೆ ಅದು ಯಾವ ಸಂದರ್ಭದಲ್ಲಿ ಎದುರಾಳಿಗಳಿಗೆ ಹೇಗೆ ತಿರುಗೇಟು ನೀಡುತ್ತದೆ ಅನ್ನುವುದನ್ನು ಊಹಿಸಲಾಗದು. ಉತ್ತಮ ಬ್ಯಾಟಿಂಗ್, ಬೌಲಿಂಗ್ ಪಡೆಯನ್ನು ಹೊಂದಿರುವ ಲಂಕಾ ಸಮತೋಲಿತವಾಗಿದೆ. ಹೀಗಾಗಿ ಭಾರತಕ್ಕೆ ಅಷ್ಟು ಸುಲಭದಲ್ಲಿ ತುತ್ತಾಗದು.
Related Articles
ಚಾಂಪಿಯನ್ಸ್ ಟ್ರೋಫಿಯ ನಂತರ ಕೋಚ್ ಸ್ಥಾನಕ್ಕೆ ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕೊಹ್ಲಿ ಜತೆಗಿನ ಸಂಬಂಧ ಸರಿ ಇಲ್ಲದಿರುವುದು. ಕೋಚ್ ಆಯ್ಕೆಯ ಸಂದರ್ಭದಲ್ಲಿಯೂ ಅಷ್ಟೇ ರವಿಶಾಸ್ತ್ರಿ ಯೇ ಬೇಕು ಅಂತ ಕೊಹ್ಲಿ ಹಟಮಾರಿ ದೋರಣೆಯನ್ನು ಪ್ರದರ್ಶಿಸಿದ್ದಾರೆ. ಇದು
ಹಲವು ಮಾಜಿ ಆಟಗಾರರಲ್ಲಿ ಅಸಮಾಧಾನ ಹುಟ್ಟಿಸಿದೆ.
Advertisement
ಎಂ.ಎಸ್.ಕೆ.ಪ್ರಸಾದ್, ಸುನಿಲ್ ಗಾವಸ್ಕರ್ ಸೇರಿದಂತೆ ಹಲವರು ಬಹಿರಂಗವಾಗಿಯೇ ಕೊಹ್ಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂಬರುವ ಸರಣಿಗಳನ್ನು ಭಾರತ ಗೆಲ್ಲುತ್ತಾ ಸಾಗಿದರೆ ಎಲ್ಲವೂ ಸಲೀಸು. ಒಮ್ಮೆ ಸೋಲುತ್ತಾ ಸಾಗಿದರೆ ಕೊಹ್ಲಿ ನಾಯಕತ್ವಕ್ಕೆ ಕುತ್ತು ಖಚಿತ. ಸೋತಾಗ ಆಳಿಗೊಂದು ಕಲ್ಲು ಬೀಳುವುದು ಪಕ್ಕಾ, ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಅವರನ್ನೇ ಟೀಕಾಕಾರರು ಬಿಟ್ಟಿಲ್ಲ. ಇನ್ನು ಕೊಹ್ಲಿಯನ್ನು ಬಿಡು¤ತಾರ? ಒಮ್ಮೆ ಸೋಲಿನ ಸರಣಿ ಆರಂಭವಾದರೆ ನಾಯಕತ್ವದ ಬದಲಾವಣೆಯ ಕೂಗು ಏಳಲಿದೆ. ಅಂತಹ ಸಂದರ್ಭ ಎದುರಾದರೆ ನಾಯಕತ್ವದ ಜವಾಬ್ದಾರಿ ರೋಹಿತ್ ಶರ್ಮಾಗೆ ಹೋಗುವ ಸಾಧ್ಯತೆ. ಇಲ್ಲವೇ ಉಪನಾಯಕನಾಗಿರುವ ಅಜಿಂಕ್ಯ ರಹಾನೆಗೂ ಹೋಗಬಹುದು. ಹೀಗಾಗಿ ಕೊಹ್ಲಿ ವೈಯಕ್ತಿಕ ಪ್ರದರ್ಶನದ ಜೊತೆಗೆ ತಂಡದ ಪ್ರದರ್ಶನ ಕೂಡ ಅದ್ಭುತವಾಗಿ ಇರುವಂತೆ ನೋಡಿಕೊಳ್ಳಬೇಕು.
ರವಿಶಾಸ್ತ್ರಿಗೂ ಸವಾಲುಅನಿಲ್ ಕುಂಬ್ಳೆ ರಾಜೀನಾಮೆಯ ನಂತರ ಕೋಚ್ ಸ್ಥಾನಕ್ಕೆ ರವಿಶಾಸ್ತ್ರಿ ಆಯ್ಕೆಯಾಗಿದ್ದಾರೆ. ರವಿಶಾಸ್ತ್ರಿಯ ಆಯ್ಕೆ ಉನ್ನತ ಸಲಹಾ ಸಮಿತಿಯಲ್ಲಿದ್ದ ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್, ವಿ.ವಿ.ಎಸ್.ಲಕ್ಷ್ಮಣ್ ಅವರದು. ಗಂಗೂಲಿಗೆ ರವಿಶಾಸ್ತ್ರಿಯ ಆಯ್ಕೆಗೆ ಮನಸ್ಸು ಇರಲಿಲ್ಲ. ಆದರೆ ಸಚಿನ್ ತೆಂಡುಲ್ಕರ್ ಒತ್ತಡದ ಹಿನ್ನೆಲೆಯಲ್ಲಿ ಒಲ್ಲದ ಮನಸ್ಸಿನಿಂದಲೇ ಒಪ್ಪಿದ್ದಾರೆ ಎನ್ನಲಾಗಿದೆ. ರವಿಶಾಸ್ತ್ರಿ ಗೆ ಸೌರವ್ ಗಂಗೂಲಿ ಸೇರಿದಂತೆ ಹಲವು ಮಾಜಿ ಆಟಗಾರರ ವಿರೋಧಿಯ ದಂಡೇ ಇದೆ. ಬೌಲಿಂಗ್ ಕೋಚ್ ಮತ್ತು ಬ್ಯಾಟಿಂಗ್ ಸಲಹೆಗಾರರ ಆಯ್ಕೆಯಲ್ಲಿ ರವಿಶಾಸ್ತ್ರಿ ಯೇ ಬಿಸಿಸಿಐ ಮೇಲೆ ಒತ್ತಡ ತಂದು ಮೇಲುಗೈ ಸಾಧಿಸಿದ್ದಾರೆ. ಇದು ಉನ್ನತ ಸಲಹಾ ಸಮಿತಿಯ ಸದಸ್ಯರ ಕಣ್ಣನ್ನು ಕೆಂಪಗಾಗಿಸಿದೆ. ಹೀಗಾಗಿ ರವಿಶಾಸ್ತ್ರಿ ಗೆ ವಿರೋಧಿಗಳ ಪಡೆಯೂ ಹುಟ್ಟಿಕೊಂಡಿದೆ. ಒಮ್ಮೆ ತಂಡ ಸೋಲುತ್ತಾ ಹೋದರೆ ಅದು ಕೋಚ್ ಸ್ಥಾನದ ಮೇಲೂ ಪರಿಣಾಮ ಬೀರಲಿದೆ.