Advertisement

ವರ್ಷದ ಶ್ರೇಷ್ಠ ಕ್ರಿಕೆಟಿಗರಾಗಿ ಕೊಹ್ಲಿ, ಸ್ಮತಿ ಮಂಧನಾ

03:37 AM May 15, 2019 | Team Udayavani |

ಹೊಸದಿಲ್ಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಮತ್ತೂಂದು ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

Advertisement

ಕಳೆದ ಹಲವು ವರ್ಷಗಳಿಂದ ಅಂತಾ ರಾಷ್ಟ್ರೀಯ ಕ್ರಿಕೆಟಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ವಿಶ್ವದ ನಂ. ವನ್‌ ಬ್ಯಾಟ್ಸ್‌ಮನ್‌ ಆಗಿರುವ ಕೊಹ್ಲಿ ಕಳೆದ ವರ್ಷ ಐಸಿಸಿ ಅಂತಾರಾಷ್ಟ್ರೀಯ ಟೆಸ್ಟ್‌ ಆಟಗಾರ ಸೇರಿದಂತೆ 3 ಪ್ರಶಸ್ತಿಗಳನ್ನು ಪಡೆದಿದ್ದರು. ಇದೀಗ ಸಿಯೆಟ್ ಟಯರ್ ‘ಸಿಯೆಟ್ ಕ್ರಿಕೆಟ್ ಅಂತಾರಾಷ್ಟ್ರೀಯ ಪ್ರಶಸ್ತಿ’ ಪ್ರಕಟಿಸಿದೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಎರಡು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸಿಯೆಟ್ ಟಯರ್ ಸಂಸ್ಥೆ ನೀಡುವ ವರ್ಷದ ಅಂತಾರಾಷ್ಟ್ರೀಯ ಆಟಗಾರ ಮತ್ತು ವರ್ಷದ ಶ್ರೇಷ್ಠ ಬ್ಯಾಟ್ಸ್‌ಮನ್‌ ಎಂಬ ಎರಡು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಉಳಿದಂತೆ ಜಸ್‌ಪ್ರೀತ್‌ ಬುಮ್ರಾ ವರ್ಷದ ಶ್ರೇಷ್ಠ ಅಂತಾರಾಷ್ಟ್ರೀಯ ಬೌಲರ್‌ ಪ್ರಶಸ್ತಿ, ಭಾರತದ ವನಿತಾ ಟಿ20 ತಂಡ ನಾಯಕಿ ಸ್ಮತಿ ಮಂಧನಾ ವರ್ಷದ ವನಿತಾ ಕ್ರಿಕೆಟರ್‌ ಪ್ರಶಸ್ತಿ ಪಡೆದಿದ್ದಾರೆ. ಭಾರತ ತಂಡದ ಮಾಜಿ ಆಲ್ರೌಂಡರ್‌ ಮೊಹಿಂದರ್‌ ಅಮರ್‌ನಾಥ್‌ ಜೀವಮಾನ ಶ್ರೇಷ್ಠ ಪ್ರಶಸ್ತಿ ಪಡೆದರು.

– ಅಂತಾರಾಷ್ಟ್ರೀಯ ಆಟಗಾರ ಮತ್ತು ವರ್ಷದ ಶ್ರೇಷ್ಠ ಬ್ಯಾಟ್ಸ್‌ಮನ್‌- ವಿರಾಟ್ ಕೊಹ್ಲಿ

– ವರ್ಷದ ಶ್ರೇಷ್ಠ ಅಂತಾರಾಷ್ಟ್ರೀಯ ಬೌಲರ್‌- ಜಸ್‌ಪ್ರೀತ್‌ ಬುಮ್ರಾ

Advertisement

– ವರ್ಷದ ಅಂತಾರಾಷ್ಟ್ರೀಯ ಟೆಸ್ಟ್‌ ಆಟಗಾರ- ಚೇತೇಶ್ವರ್‌ ಪೂಜಾರ

– ವರ್ಷದ ಅಂತಾರಾಷ್ಟ್ರೀಯ ಏಕದಿನ ಆಟಗಾರ- ರೋಹಿತ್‌ ಶರ್ಮ

– ವರ್ಷದ ಅಂತಾರಾಷ್ಟ್ರೀಯ ಟಿ20 ಆಟಗಾರ- ಆರನ್‌ ಪಿಂಚ್

– ವರ್ಷದ ಅಮೋಘ ನಿರ್ವಹಣಾ ಆಟಗಾರ- ಕುಲದೀಪ್‌ ಯಾದವ್‌

– ವರ್ಷದ ಅಂತಾರಾಷ್ಟೀಯ ಟಿ20 ಬೌಲರ್‌- ರಶೀದ್‌ ಖಾನ್‌

– ಜೀವಮಾನ ಶ್ರೇಷ್ಠ ಸಾಧಕ- ಮೊಹಿಂದರ್‌ ಅಮರ್‌ನಾಥ್‌

– ಸ್ಥಳೀಯ ಆಟಗಾರ- ಅಶತೋಷ್‌ ಅಮನ್‌

– ವರ್ಷದ ಅಂತಾರಾಷ್ಟ್ರೀಯ ಮಹಿಳಾ ಆಟಗಾರ್ತಿ- ಸ್ಮತಿ ಮಂಧ‌ನಾ

– ವರ್ಷದ ಕಿರಿಯ ಕ್ರಿಕೆಟಿಗ- ಯಶಸ್ವಿ ಜೈಸ್ವಾಲ್

Advertisement

Udayavani is now on Telegram. Click here to join our channel and stay updated with the latest news.

Next