ನವದೆಹಲಿ : ಇಂದು(ಮಾ.8) ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಕ್ರಿಕೆಟಿಗರು, ಸಿನಿಮಾ ತಾರೆಯರು, ರಾಜಕೀಯ ನಾಯಕರು ಮಹಿಳಾ ದಿನದ ಅಂಗವಾಗಿ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಕರೀನಾ ಕಪೂರ್ ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ.
ತನ್ನ ಮುದ್ದಾನ ಹೆಣ್ಣು ಮಗು ಹಾಗು ಮಡದಿಯ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಕೊಹ್ಲಿ, ಪ್ರತಿಯೊಬ್ಬ ಮಾನವನಿಗೂ ತನ್ನ ಮಗುವನ್ನು ಪಡೆಯುವುದು ಅದ್ಭುತ ಅನುಭವ. ಮಗುವನ್ನು ಹೆರುವ ಶಕ್ತಿಯನ್ನು ದೇವರು ಹೆಣ್ಣಿಗೆ ಕೊಟ್ಟಿದ್ದಾನೆ. ಇದನ್ನು ನೋಡಿದ ಮೇಲೆ ಗೊತ್ತಾಗುತ್ತದೆ ಮಹಿಳೆ ಎಷ್ಟು ಬಲಶಾಲಿ ಎಂದು. ಪ್ರಪಂಚದ ಎಲ್ಲಾ ಅದ್ಭುತ ಮಹಿಳೆಯರಿಗೆ ಮಹಿಳಾ ದಿನದ ಶುಭಾಶಯಗಳು. ಜೊತೆಗೆ ನನ್ನ ಜೀವನದಲ್ಲಿ ಬಹಳ ಮುಖ್ಯವಾಗಿರುವ ನನ್ನ ಹೆಂಡತಿಗೆ ಹಾಗೂ ನನ್ನ ಮಗುವಿನ ತಾಯಿಗೆ ಮಹಿಳಾ ದಿನದ ಶುಭಾಶಯ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅನುಷ್ಕಾ ಶರ್ಮಾ ತನ್ನ ಮುದ್ದಾದ ಮಗಳನ್ನು ಹಿಡಿದುಕೊಂಡು ನಗುತ್ತಿರುವ ಫೋಟೋವನ್ನುಶೇರ್ ಮಾಡಿದ್ದಾರೆ. ವಿರೂಷ್ಕಾ ದಂಪತಿಗೆ ಕಳೆದ ಜನವರಿ 11ರಂದು ಹೆಣ್ಣು ಮಗು ಜನಿಸಿದೆ.\
ಇತ್ತ ನಟಿ ಕರೀನಾ ಕಪೂರ್ ಕೂಡ ಮಹಿಳಾ ದಿನಕ್ಕೆ ಶುಭ ಕೋರಿದ್ದು, ತನ್ನ ಎರಡನೇ ಮಗನ ಜೊತೆಗಿನ ಮೊದಲ ಫೋಟೋವನ್ನು ಶೇರ್ ಮಾಡಿ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ನಟ ಸೈಫ್ ಅಲಿಖಾನ್ ಮತ್ತು ಕರೀನಾ ಕಪೂರ್ ಗೆ ಫೆ.21ರಂದು ಗಂಡು ಮಗು ಜನಸಿದೆ. ಈ ದಂಪತಿಗೆ ಈಗಾಗಲೇ ನಾಲ್ಕು ವರ್ಷದ ಮಗ ತೈಮೂರ್ ಇದ್ದಾನೆ.