Advertisement

ಪಾಂಟಿಂಗ್‌ ಸೆಂಚುರಿ ದಾಖಲೆ ಮುರಿಯುವತ್ತ ವಿರಾಟ್‌ ಕೊಹ್ಲಿ

10:40 AM Dec 16, 2020 | keerthan |

ಅಡಿಲೇಡ್‌ : ಟೀಮ್‌ ಇಂಡಿಯಾ ಕಪ್ತಾನ ವಿರಾಟ್‌ ಕೊಹ್ಲಿಗೆ ಶತಕಗಳು ಬಹಳ ಸಲೀಸು. ಅವರು ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ ನಲ್ಲಿ 70 ಶತಕ ಸಿಡಿಸಿದ್ದಾರೆ. ಟೆಸ್ಟ್‌ ನಲ್ಲಿ 27, ಏಕದಿನದಲ್ಲಿ 43 ಸೆಂಚುರಿ ಬಾರಿಸಿದ್ದಾರೆ. ಮುಂದೊಂದು ದಿನ ಸಚಿನ್‌ ತೆಂಡುಲ್ಕರ್‌ ಅವರ ಶತಕದ ದಾಖಲೆಗೆ ಗಂಡಾಂತರ ತರುವ ಎಲ್ಲ ಸಾಧ್ಯತೆ ಇದೆ.

Advertisement

ವಿಪರ್ಯಾಸವೆಂದರೆ, ಈ ವರ್ಷ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೂ ಶತಕ ಬಾರಿಸಿಲ್ಲ. 2008ರ ಕ್ಯಾಲೆಂಡರ್‌ ವರ್ಷದ ಬಳಿಕ ಕೊಹ್ಲಿ ಶತಕವೊಂದನ್ನು ಮಿಸ್‌ ಮಾಡಿಕೊಳ್ಳುತ್ತಿರುವುದು ಇದೇ ಮೊದಲು. ಆದರೆ ಕಾಲವಿನ್ನೂ ಮಿಂಚಿಲ್ಲ. ಗುರುವಾರದಿಂದ ಆರಂಭವಾಗಲಿರುವ ಅಡಿಲೇಡ್‌ ಟೆಸ್ಟ್‌ ಪಂದ್ಯದಲ್ಲಿ ಇದಕ್ಕೊಂದು ಅವಕಾಶ ಇದ್ದೇ ಇದೆ. ಆಗ ಕೊಹ್ಲಿ ಇನ್ನೊಂದು ಅಮೋಘ ವಿಶ್ವದಾಖಲೆಗೂ ಪಾತ್ರರಾಗಲಿದ್ದಾರೆ

ಇಬ್ಬರಿಂದಲೂ 41 ಸೆಂಚುರಿ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಶತಕ ಬಾರಿಸಿದ ನಾಯಕರ ಯಾದಿಯಲ್ಲಿ ಪಾಂಟಿಂಗ್‌ ಮತ್ತು ಕೊಹ್ಲಿ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಇಬ್ಬರಿಂದಲೂ 41 ಸೆಂಚುರಿ ದಾಖಲಾಗಿದೆ. ಇನ್ನೊಂದು ಮೂರಂಕೆಯ ಸ್ಕೋರ್‌ ದಾಖಲಿಸಿದರೆ ಕೊಹ್ಲಿ ನೂತನ ವಿಶ್ವದಾಖಲೆ ಬರೆಯಲಿದ್ದಾರೆ. ಇದಕ್ಕೆ “ಅಡಿಲೇಡ್‌ ಓವಲ್‌’ ವೇದಿಕೆಯಾದೀತೇ ಎಂಬ ಕುತೂಹಲ ಅಭಿಮಾನಿಗಳದ್ದು. ಇಲ್ಲಿ ಇನ್ನೂ ಒಂದು ಸ್ವಾರಸ್ಯವಿದೆ. ನಾಯಕನಾಗಿ 41 ಶತಕಗಳನ್ನು ಪೂರೈಸಲು ರಿಕಿ ಪಾಂಟಿಂಗ್‌ 324 ಪಂದ್ಯಗಳನ್ನಾಡಿದ್ದಾರೆ. ಆದರೆ ಕೊಹ್ಲಿ ಕೇವಲ 187 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸುವುದರೊಳಗೆ ಪಾಂಟಿಂಗ್‌ ಅವರಿಗೆ ಸರಿಸಮನಾಗಿ ಕಾಣಿಸಿಕೊಂಡಿದ್ದಾರೆ!

Advertisement

Udayavani is now on Telegram. Click here to join our channel and stay updated with the latest news.

Next