Advertisement

ಕೋಹಿನೂರ್‌ ಕೊಟ್ಟಿದ್ದ ರಾಜ

07:33 AM Oct 17, 2018 | |

ಲೂಧಿಯಾನಾ: ಬ್ರಿಟನ್‌ ಸರಕಾರದ ವಶದಲ್ಲಿರುವ ಕೋಹಿನೂರ್‌ ವಜ್ರವನ್ನು ಮರಳಿ ಭಾರತಕ್ಕೆ ತರಬೇಕು ಎಂಬ ವಾದ ಹಲವು ವರ್ಷಗಳಿಂದ ಕೇಳುತ್ತಾ ಇದೆ. 2016ರರ‌ ಏಪ್ರಿಲ್‌ನಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ಕೇಂದ್ರ ಸರಕಾರ “ಕೋಹಿನೂರ್‌ ವಜ್ರವನ್ನು ಬಲವಂತವಾಗಿಯೂ ತೆಗೆದುಕೊಂಡು ಹೋಗಲಾಗಿಲ್ಲ ಅಥವಾ ಕಳವು ಮಾಡಲಾಗಿಲ್ಲ’ ಎಂಬ ಹೇಳಿಕೆ ನೀಡಿತ್ತು. 

Advertisement

ಹೊಸದಾಗಿ ಬೆಳಕಿಗೆ ಬಂದಿರುವ ಮಾಹಿತಿ ಪ್ರಕಾರ ಪಂಜಾಬ್‌ ಅನ್ನು ಆಳುತ್ತಿದ್ದ ಮಹಾ ರಾಜ ರಂಜಿತ್‌ ಸಿಂಗ್‌ ವಂಶಸ್ಥರು ಅಂದಿನ ಬ್ರಿಟಿಷ್‌ ಆಡಳಿತದ ಈಸ್ಟ್‌ ಇಂಡಿಯಾ ಕಂಪೆನಿಗೆ ಉಡುಗೊರೆಯನ್ನಾಗಿ ನೀಡಿದ್ದರು. ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಮಾಹಿತಿ ಹಕ್ಕು ಕಾಯ್ದೆಯನ್ವಯ ಸಲ್ಲಿಸಲಾಗಿದ್ದ ಅರ್ಜಿಗೆ ಉತ್ತರ ನೀಡಿ ವಜ್ರವನ್ನು ಲಾಹೋರ್‌ನ ಅಂದಿನ ಮಹಾರಾಜ ಇಂಗ್ಲೆಂಡ್‌ನ‌ ರಾಣಿಯಾಗಿದ್ದ ವಿಕ್ಟೋರಿ ಯಾಗೆ ಹಸ್ತಾಂತರಿಸಿದ್ದರು ಎಂದು ಮಾಹಿತಿ ನೀಡಿದೆ. ಈ ಬಗ್ಗೆ ರೋಹಿತ್‌ ಸಿಂಗ್‌ ಎಂಬವರು ಮಾಹಿತಿ ಕೇಳಿದ್ದರು. ಎಎಸ್‌ಐ ನೀಡಿದ ಮಾಹಿತಿ ಪ್ರಕಾರ “ಮಹಾರಾಜ ದಿಲೀಪ್‌ ಸಿಂಗ್‌ ಮತ್ತು ಲಾರ್ಡ್‌ ಡಾಲ್‌ ಹೌಸಿ ನಡುವೆ 1849ರಲ್ಲಿ ಸಹಿ ಹಾಕಲಾದ ಲಾಹೋರ್‌ ಒಪ್ಪಂದದ ಅನ್ವಯ ಕೋಹಿನೂರ್‌ ವಜ್ರವನ್ನು ಲಾಹೋರ್‌ನ ಮಹಾರಾಜ ಇಂಗ್ಲೆಂಡ್‌ ರಾಣಿಗೆ ನೀಡಿದ್ದರು’ ಎಂದು ತಿಳಿಸಿದೆ. ಜತೆಗೆ ಒಪ್ಪಂದ ಪತ್ರದಲ್ಲಿನ ವಾಕ್ಯಗಳ ದಾಖಲೆಯನ್ನೂ ನೀಡಲಾಗಿದೆ. ಅದಕ್ಕೆ ಪೂರಕವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಉತ್ತರ ನೀಡಿದ ಕೇಂದ್ರ ಸರಕಾರ ಆಂಗ್ಲೋ- ಸಿಕ್ಖ್ ಯುದ್ಧದ ವೆಚ್ಚ ನೀಡುವ ನಿಟ್ಟಿನಲ್ಲಿ ರಂಜಿತ್‌ ಸಿಂಗ್‌ ವಂಶಸ್ಥರು “ಸ್ವಯಂ ಪ್ರೇರಿತ’ವಾಗಿ ಪರಿಹಾರ ನೀಡುವ ನಿಟ್ಟಿನಲ್ಲಿ ವಜ್ರವನ್ನು ನೀಡಿದ್ದರು ಎಂದು ಸರಕಾರ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next