Advertisement

ಕೊಹಿನೂರ್‌ ವಜ್ರ ವಿವಾದಿತ ಆಸ್ತಿ: ಬ್ರಿಟನ್‌ ಸಂಸದನ ಹೇಳಿಕೆ

09:05 AM Aug 04, 2017 | Team Udayavani |

ಲಂಡನ್‌: ಜಗದ್ವಿಖ್ಯಾತ, ಕೋಟ್ಯಂತರ ರೂ. ಬೆಲೆಯ ಕೊಹಿನೂರ್‌ ವಜ್ರದ ಮಾಲಕತ್ವ ಬಗ್ಗೆ ಬ್ರಿಟನ್‌ ಮತ್ತು ಭಾರತದ ಮಧ್ಯೆ ಜಗ್ಗಾಟ ಇರುವಂತೆಯೇ, ಅದು ಯಾರದ್ದು ಎಂದು ಹೇಳಲು ಸಾಧ್ಯವಿಲ್ಲ. ಕೊಹಿನೂರ್‌ ವಜ್ರದ ಮಾಲಕತ್ವ ವಿಚಾರ ಅತ್ಯಂತ ವಿವಾದಿತವಾದದ್ದು ಎಂದು ಬ್ರಿಟನ್‌ನ ಮೊದಲ ಸಿಕ್ಖ್ ಸಂಸದ ತನ್ಮನ್‌ಜೀತ್‌ ಸಿಂಗ್‌ ಧೇಸಿ ಅವರು ಹೇಳಿದ್ದಾರೆ. ಈ ವಿವಾದ ಅತ್ಯಂತ ಸಂಕೀರ್ಣ ಮತ್ತು ಗಹನವಾದದ್ದು. ವಜ್ರದ ಮಾಲಕರು ಯಾರು ಎನ್ನುವುದು ಚರ್ಚೆಯ ವಿಷಯ. ಜತಗೆ ಯಾವುದೇ ವ್ಯಕ್ತಿಗೆ ಇದರ ಮಾಲಕತ್ವ ಇದೇ ದೇಶದ್ದು ಎನ್ನುವಂತೆಯೂ ಇಲ್ಲ. ಇತಿಹಾಸದ ಭಾಗವಾಗಿರುವ ಇದನ್ನು ಪರಿಶೀಲಿಸಬೇಕಿದೆ ಎಂದಿದ್ದಾರೆ.

Advertisement

ಲೂಧಿಯಾನಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸ್ಲಾಗ್‌ನ ಸಂಸದ ಧೇಸಿ, ಯಾರು ಇದರ ಮಾಲಕತ್ವ ಹೊಂದಬೇಕು ಎಂದು ಹೇಳುವುದೂ ಸಾಧ್ಯವಿಲ್ಲ. ವಿವಾದ ಬಹು ಹಿಂದಿನಿಂದಲೇ ಇದ್ದು, ಇನ್ನೂ ಮುಂದುವರಿದಿದೆ ಎಂದಿದ್ದಾರೆ. ಮಹಾರಾಜ ದುಲೀಪ್‌ ಸಿಂಗ್‌ ಅವರ ಬಳಿ ಇದ್ದ ವಜ್ರ ಕದಿಯಲಾಗಿದೆ ಎಂದು ಭಾರತೀಯರು ಹೇಳುತ್ತಿದ್ದರೆ, ರಾಣಿ ವಿಕ್ಟೋರಿಯಾ ಅವರು ಉಡುಗೊರೆಯಾಗಿ ಸ್ವೀಕರಿಸಿದ್ದಾರೆ ಎಂದು ಬ್ರಿಟಿಷರು ಹೇಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next