Advertisement
ಪ್ರಮುಖವಾಗಿ ಮಾ.30 ರಿಂದ ಏ.6 ರವರೆಗೆ ನಡೆಯಲಿರುವ ಕೊಂಡ್ಲಿಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕುರಿತು ಇಲಾಖೆಗಳೊಂದಿಗೆ ಚರ್ಚಿಸಿ, ಜಾತ್ರೆ ಸಂದರ್ಭದಲ್ಲಿ ಯಾವುದೇತೊಂದರೆ ಆಗದಂತೆ ಮುನ್ನೆಚ್ಚರಿಕಾಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಹೆಸ್ಕಾಂ ಇಲಾಖೆಯಿಂದನಿರಂತರ ವಿದ್ಯುತ್ ಒದಗಿಸುವ ಬಗ್ಗೆ,ಪಪಂದಿಂದ ಕುಡಿಯುವ ನೀರಿನ ವ್ಯವಸ್ಥೆ,ಸ್ವಚ್ಛತೆ, ಸುವ್ಯವಸ್ಥಿತ ನೈರ್ಮಲೀಕರಣದ ವ್ಯವಸ್ಥೆ, ಆರೋಗ್ಯ ಇಲಾಖೆಯಿಂದ ಕೋವಿಡ್ ರೋಗ ನಿಯಂತ್ರಣ ಕುರಿತು ಜಾಗೃತಿ ಮತ್ತು ತುರ್ತು ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಬಗ್ಗೆ, ಪೊಲೀಸ್‌ಇಲಾಖೆಯಿಂದ ಜಾತ್ರೆ ಸಂದರ್ಭದಲ್ಲಿಅಹಿತಕರ ಘಟನೆಗಳು ಆಗದಂತೆ ಭಕ್ತಾದಿಗಳ ಸುರಕ್ಷತೆ, ಶಾಂತತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಮತ್ತು ವಾಹನ ಸಂಚಾರ ದಟ್ಟಣೆಯಾಗದಂತೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಪ್ರಸ್ತಾಪಿಸಿ, ಆಯಾ ಇಲಾಖೆಯವರು ಜವಾಬ್ದಾರಿಯಿಂದ ಯಾವುದೇ ರೀತಿಯ ಸಮಸ್ಯೆಗಳು ಆಗದಂತೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
Related Articles
Advertisement
ಜಿಪಂ ಸದಸ್ಯ ಎಂ.ಜಿ. ಹೆಗಡೆ ಗೆಜ್ಜೆ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರಹೆಗಡೆ, ಪಪಂ ಸದಸ್ಯರಾದ ಮಾರುತಿನಾಯ್ಕ, ಗುರುರಾಜ ಶಾನಭಾಗ, ನಂದನಬೋರ್ಕರ್, ತಹಶೀಲ್ದಾರ್ ಪ್ರಸಾದ, ತಾಪಂ ಇಒ ಪ್ರಶಾಂತರಾವ್, ಸಿಪಿಐ ಮಹೇಶ,ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ,ಎಇಇ ಮುದಕಣ್ಣನವರ, ಕೊಂಡ್ಲಿ ಶ್ರೀ ಮಾರಿಕಾಂಬಾ ದೇವಸ್ಥಾನದ ಮೊಕ್ತೇಸರರಮೇಶ ರಾಯ್ಕರ, ಇಲಾಖಾ ಅಧಿಕಾರಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.