Advertisement
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ, ಪದವೀಧರ ಶಿಕ್ಷಕರ ಸಮಸ್ಯೆ ಮತ್ತು ಶಿಕ್ಷಕರ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಮಂಗಳವಾರ ಶಾಲೆಗಳಿಗೆ ಸಾಮೂಹಿಕವಾಗಿ ರಜೆ ಹಾಕಿ ಜಿಲ್ಲಾ ಮಟ್ಟದಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
Related Articles
Advertisement
ನಾವು ಇಲಾಖೆ ಮತ್ತು ನಿಯಮದ ಮೂಲಕ ನೇಮಕಾತಿ ಹೊಂದಿದ್ದೇವೆ. ಈ ವೃಂದದ ಶಿಕ್ಷಕರ ಪದವೀಧರ ಪ್ರಾಥಮಿಕ ಶಿಕ್ಷಕರು ಎಂಬ ಪದನಾಮ ಇನ್ನೂ ವೇತನದ ತಂತ್ರಾಂಶದಲ್ಲಿ ಅಳವಡಿಕೆಯಾಗಿಲ್ಲ. ಈ ಬಗ್ಗೆ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಈ ವೃಂದದ ಶಿಕ್ಷಕರು ಡಿ.ಇ.ಡಿ./ಬಿ.ಇ.ಡಿ., ಪದವಿಯ ಜೊತೆ ಟಿ.ಇ.ಟಿ. ಅರ್ಹತೆ ಪಡೆದಿದ್ದರೂ ಮತ್ತು ಪ್ರಥಮ ದರ್ಜೆಯ ನೌಕರರ ಅರ್ಹತೆಗಿಂತ ಹೆಚ್ಚಿನ ಅರ್ಹತೆ ಹೊಂದಿದ್ದರೂ ಪ್ರಥಮ ದರ್ಜೆ ನೌಕರರ ವೇತನವನ್ನು ನಿಗದಿಪಡಿಸಿ ಈ ವೃಂದದ ಶಿಕ್ಷಕರಿಗೆ ವೇತನದ ವಿಷಯದಲ್ಲಿ ಆನ್ಯಾಯವಾಗಿದೆ. ಇನ್ನೂ ಈ ವೃಂದದ ಶಿಕ್ಷಕರಿಗೆ ಮುಂದೆ ಭಡ್ತಿ ಹೊಂದಲು ಇರುವ ಅವಕಾಶಗಳ ಬಗ್ಗೆ ಇಲಾಖೆಯಲ್ಲಿ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದರು.
ವರ್ಗಾವಣೆಯಲ್ಲಿ ಈ ವೃಂದದ ಶಿಕ್ಷಕರ ಪ್ರತ್ಯೇಕ ಜೇಷ್ಠತೆ ಪಟ್ಟಿಯನ್ನು ತಯಾರಿಸದೆ ಪ್ರಾಥಮಿಕ ಶಿಕ್ಷಕರ ಜೊತೆ ಸೇರಿಸಿರುವುದರಿಂದ ಇವರಿಗೆ ವರ್ಗಾವಣೆಯೂ ಕನಸಿನ ಮಾತಾಗಿಯೇ ಉಳಿದಿದೆ. ಈ ವೃಂದದ ಪ್ರತ್ಯೇಕ ಸಂಘವಿದೆ. ಆ ಮೂಲಕ ಯಾವುದೇ ಮನವಿ ಸಲ್ಲಿಸಿದ್ದಲ್ಲಿ ನಿಮ್ಮ ಸಂಘಕ್ಕೆ ಮಾನ್ಯತೆ ಇಲ್ಲ ಎಂಬ ಉತ್ತರ ಹೇಳಿ ಯಾವುದೇ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ. ಅಲ್ಲದೆ ಕಳೆದ ಡಿಸೆಂಬರ್ ನಲ್ಲಿ ನೇಮಕಾತಿಯಾದ ಪದವೀಧರ ಶಿಕ್ಷಕರಿಗೆ ಇನ್ನೂ ವೇತನ ಪಾವತಿಯಾಗಿಲ್ಲ . ಇದಕ್ಕೆ ಕ್ರಮಕೈಗೊಳ್ಳಬೇಕು. ಶಿಕ್ಷಕರ ಸಮಸ್ಯೆಗಳಿಗೆ ಸಂಬಂಧಪಟ್ಟವರು ಸ್ಪಂದಿಸಿ, ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸಹಕರಿಬೇಕೆಂದು ಆಗ್ರಹಿಸಿದ್ದಾರೆ.
ಮಂಗಳೂರಿನ ಪ್ರತಿಭಟನೆಯನ್ನು ಕುಟ್ರಾಪ್ಪಾಡಿ ಪ್ರಾಥಮಿಕ ಶಾಲಾ ಶಿಕ್ಷಕ ತೀರ್ಥೇಶ್ ಪಡೆಜ್ಜಾರ್ ಅವರೂ ವಿರೋಧಿಸಿದ್ದಾರೆ. ಸರಕಾರ ಶಿಕ್ಷಕರಿಗೆ ಉತ್ತಮ ವೇತನ ನೀಡುತ್ತಿದೆ. ಶಿಕ್ಷಕಕರ ಸಂಘದವರು ಶಾಲೆಗಳನ್ನು ಮುಚ್ಚಿ ಅನಗತ್ಯ ಹೋರಾಟ ನಡೆಸಿ ಅಮೂಲ್ಯ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಸರಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುತ್ತಿವೆ. ಸರಕಾರಿ ಶಾಲೆಗಳಿದ್ದರೆ ಮಾತ್ರ ನಮಗೆ ಕೆಲಸ ಎನ್ನುವುದನ್ನು ಮನಗಂಡು ಶಾಲೆಗಳನ್ನು ಉಳಿಸಿಕೊಳ್ಳುವಲ್ಲಿ ಶಿಕ್ಷಕರು ಶ್ರಮಿಸಬೇಕೇ ಹೊರತು ಅನಗತ್ಯ ಹೋರಾಟ ನಡೆಸುವುದು ಸರಿಯಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಅನಗತ್ಯ ಹೋರಾಟ ಸಲ್ಲದುಮಂಗಳೂರಿನ ಪ್ರತಿಭಟನೆಯನ್ನು ಕುಟ್ರಾಪ್ಪಾಡಿ ಪ್ರಾಥಮಿಕ ಶಾಲಾ ಶಿಕ್ಷಕ ತೀರ್ಥೇಶ್ ಪಡೆಜ್ಜಾರ್ ಅವರೂ ವಿರೋಧಿಸಿದ್ದಾರೆ. ಸರಕಾರ ಶಿಕ್ಷಕರಿಗೆ ಉತ್ತಮ ವೇತನ ನೀಡುತ್ತಿದೆ. ಶಿಕ್ಷಕಕರ ಸಂಘದವರು ಶಾಲೆಗಳನ್ನು ಮುಚ್ಚಿ ಅನಗತ್ಯ ಹೋರಾಟ ನಡೆಸಿ ಅಮೂಲ್ಯ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಸರಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುತ್ತಿವೆ. ಸರಕಾರಿ ಶಾಲೆಗಳಿದ್ದರೆ ಮಾತ್ರ ನಮಗೆ ಕೆಲಸ ಎನ್ನುವುದನ್ನು ಮನಗಂಡು ಶಾಲೆಗಳನ್ನು ಉಳಿಸಿಕೊಳ್ಳುವಲ್ಲಿ ಶಿಕ್ಷಕರು ಶ್ರಮಿಸಬೇಕೇ ಹೊರತು ಅನಗತ್ಯ ಹೋರಾಟ ನಡೆಸುವುದು ಸರಿಯಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.