Advertisement
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರೈತರ ಹೆಸರಿನಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ರೈತರು ಮತ್ತು ಜನಸಾಮಾನ್ಯರ ಹಿತವನ್ನು ಕಡೆಗಣಿಸಿ ಉದ್ಯಮಿಗಳಾದ ಅದಾನಿ ಮತ್ತು ಅಂಬಾನಿ ಅವರ ಹಿತಾಸಕ್ತಿಗಾಗಿ ಕಾಯ್ದೆಗಳನ್ನು ಜಾರಿಗೊಳಿಸಿ ಸಾರ್ವಜನಿಕ ಉದ್ಯಮಗಳನ್ನು ಖಾಸಗೀರಣ ಮಾಡುವ ಮೂಲಕ ದೇಶವನ್ನು ಪರಕೀಯರ ಕೈಗೆ ನೀಡುವ ಹುನ್ನಾರವನ್ನು ನಡೆಸಿದ್ದು ಇದರ ವಿರುಧ್ಧ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮದ ಮಾದರಿಯ ದ್ವಿತೀಯ ಸ್ವಾತಂತ್ರ್ಯ ಹೋರಾಟವನ್ನು ಆರಂಭಿಸಲಾಗುವುದೆಂದು ಎಚ್ಚರಿಸಿದರು.
Related Articles
Advertisement
ಆರ್ಥಿಕವಾಗಿ ದಿವಾಳಿಯಾಗಿರುವ ಸರ್ಕಾರ: ದೇಶದಲ್ಲಿ ಕೋವಿಡ್, ಪಾಕಿಸ್ತಾನ ಮತ್ತು ಚೀನಾ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ ರೈತರು ಮತ್ತು ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಯಾವುದೇ ಯೋಜನೆಗಳನ್ನು ಜಾರಿಗೊಳಿಸುತ್ತಿಲ್ಲ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ ಕೇವಲ ಭಾಷಣ ಮತ್ತು ಪ್ರಚಾರಕ್ಕೆ ಸರ್ಕಾರದ ಸಾಧನೆ ಸೀಮಿತವಾಗಿದೆಯೆಂದು ಲೇವಡಿ ಮಾಡಿದ ಅವರು ದೇಶಾದ್ಯಂತ ಸುಮಾರು 100 ಕೋಟಿ ಜನರಿಗೆ ಕೋವಿಡ್ ಸೋಂಕು ಬಂದು ಹೋಗಿದೆ ಈ ದೇಶದ ಜನರು ಮತ್ತು ಮಣ್ಣಿಗೆ ರೋಗನಿರೋಧಕ ಶಕ್ತಿಯಿದೆ ಸೋಂಕು ಬಂದರು ಸಹ ಸಹಿಸಿಕೊಳ್ಳುವ ಶಕ್ತಿ ಭಾರತೀಯರ ರಕ್ತಕ್ಕಿದೆ ಎಂದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರ ಲಾಕ್‍ಡೌನ್ ಮಾಡಿ ಲಸಿಕೆ ತಂದು ಕೊಡದಿದ್ದರು ಸಹ ಏನು ಆಗುತ್ತಿರಲಿಲ್ಲ ಕೋವಿಡ್ ಸೋಂಕಿನ ಕುರಿತು ಭಾಷಣ ಮಾಡುವ ಪ್ರಧಾನಮಂತ್ರಿಗಳು ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಏಕೆ ಲಸಿಕೆಯನ್ನು ಪಡೆದುಕೊಂಡಿಲ್ಲ ಎಂದು ಪ್ರಶ್ನಿಸಿದ ಅವರು ಭಾರತ ಸರ್ಕಾರ ಲಸಿಕೆ ತಯಾರು ಕಂಪನಿಗಳಿಗೆ ಕೇವಲ ಲಾಭ ಮಾಡಿಕೊಡುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆಯೆಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ,ಕಾರ್ಯದರ್ಶಿ ವೀರಭದ್ರಸ್ವಾಮಿ,ರಾಜ್ಯ ಹಸಿರುಸೇನೆ ಸಂಚಾಲಕ ಲಕ್ಷ್ಮಣರೆಡ್ಡಿ, ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ರಾಮನಾಥ್, ಕಾರ್ಯದರ್ಶಿ ವೇಣುಗೋಪಾಲ್,ರೈತ ಸಂಘದ ಮಹಿಳಾ ನಾಯಕಿ ಉಮಾ, ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ರಾಮಾಂಜಿನಪ್ಪ, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್,ಚಿಂತಾಮಣಿ ಅಧ್ಯಕ್ಷ ರಮಣರೆಡ್ಡಿ,ಗೌರಿಬಿದನೂರು ಅಧ್ಯಕ್ಷ ಮಾಳಪ್ಪ ಮತ್ತಿತರರು ಉಪಸ್ಥಿತರಿದ್ದರು.