Advertisement

ಹೂಳಿನಿಂದ ಮುಕ್ತಿ ಕಾಣದ ಕೋಡಿಬೆಂಗ್ರೆ ಬಂದರು

10:12 PM Mar 13, 2020 | mahesh |

ಮಲ್ಪೆ: ಕೋಡಿಬೆಂಗ್ರೆ ಮೀನುಗಾರಿಕೆ ಬಂದರಿನಲ್ಲಿ ಹೂಳಿನ ಸಮಸ್ಯೆ ವಿಪರೀತವಾಗಿದ್ದು, ಕಳೆದ 5 ವರ್ಷಗಳಿಂದ ಮೀನುಗಾರರು ಬವಣೆ ಪಡುವಂತಾಗಿದೆ. ಬಂದರಿನಿಂದ ದೋಣಿಯನ್ನು ಸಮುದ್ರಕ್ಕೆ ತರಲು, ವಾಪಸ್‌ ತೆಗೆದುಕೊಂಡು ಹೋಗಲು ಸಮಸ್ಯೆಯಾಗಿದ್ದು ಭರತದ ಸಮಯವನ್ನೇ ನೋಡಿ ಕಾರ್ಯಾಚರಿಸುವಂತಾಗಿದೆ.

Advertisement

ಬೋಟುಗಳು ಮಲ್ಪೆಗೆ
ಸಮಸ್ಯೆಯಿಂದಾಗಿ ಈ ಭಾಗದ ಬೋಟ್‌ಗಳು ಮೀನುಗಾರಿಕೆ ಚಟುವಟಿಕೆ ಮತ್ತು ಲಂಗರು ಹಾಕಲು ಮಲ್ಪೆ ಬಂದರಿಗೆ ತೆರಳುತ್ತದೆ. ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಬೋಟ್‌ಗಳನ್ನು ಇಲ್ಲಿ ನಿಲ್ಲಿಸಲು ಸಾಧ್ಯವಾಗದ ಕಾರಣ ಮಲ್ಪೆ ಹಂಗಾರಕಟ್ಟೆಯಲ್ಲಿ ಲಂಗರು ಹಾಕಬೇಕಾಗುತ್ತದೆ. ಡ್ರೆಜ್ಜಿಂಗ್‌ ಕಾಮಗಾರಿಯನ್ನು ನಡೆಸುವ ಬಗ್ಗೆ ಇಲ್ಲಿನ ಮೀನುಗಾರರು ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ, ಇಲಾಖೆಗಳಿಗೆ ಮನವಿ ನೀಡಿದ್ದರೂ ಯಾರೂ ತಮ್ಮ ಬೇಡಿಕೆಗೆ ಸ್ಪಂದಿಸಿಲ್ಲ ಎಂದು ಆರೋಪಿಸುತ್ತಾರೆ.

ಬಂದರು ಮುಚ್ಚುವ ಪರಿಸ್ಥಿತಿ?
ತ್ರಿಸೆವೆಂಟಿ ಆಳಸಮುದ್ರ ಬೋಟುಗಳಿಗೆ ಒಳ ಪ್ರವೇಶಿಸಲು ಅಸಾಧ್ಯವಾದ್ದರಿಂದ ಮಲ್ಪೆ ಬಂದರನೇ° ಆಶ್ರಯಿಸಿಕೊಂಡಿದೆ. ಪ್ರಸ್ತುತ ಇಲ್ಲಿ ಸುಮಾರು 60ರಷ್ಟು ಸಣ್ಣಟ್ರಾಲ್‌ ದೋಣಿಗಳು ವ್ಯವಹಾರ ಚಟುವಟಿಕೆಗಳು ನಡೆಸು ತ್ತಿದ್ದು ಸದ್ಯದ ಸ್ಥಿತಿಯಲ್ಲಿ ಅದಕ್ಕೂ ಅಡ್ಡಿಯಾಗಿದೆ. ಇದೇ ಪರಿಸ್ಥಿತಿ ಮುಂದು ವರೆದರೆ ಬಂದರ ನ್ನು ಮುಚ್ಚುವ ಪರಿಸ್ಥಿತಿ ಎದುರಾಗಬಹುದೆಂಬ ಆತಂಕವೂ ಮೀನುಗಾರರನ್ನು ಕಾಡುತ್ತಿದೆ.

ಸಮಸ್ಯೆ ತೀವ್ರ
ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟ ಕೋಡಿಬೆಂಗ್ರೆ ಬಂದರಿನ ಒಳಭಾಗದಲ್ಲಿ ಜೆಟ್ಟಿ ವಿಸ್ತರಣೆ ಕಾಮಗಾರಿ ನಡೆಯುವ ಸ್ಥಳದಿಂದ ಅಳಿವೆಯವರೆಗೆ ಸಂಪೂರ್ಣ ಹೂಳು ತುಂಬಿದ್ದರಿಂದ ಮೀನುಗಾರರು ತೀವ್ರ ತೊಂದರೆಯನ್ನು ಅನುಭವಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಸಮಸ್ಯೆ ಮತ್ತಷ್ಟು ತೀವ್ರಗೊಂಡಿದೆ. ಇದು ಮೀನುಗಾರಿಕೆ ವ್ಯವಹಾರ, ಚಟುವಟಕೆಗಳಿಗೆ ಹಿನ್ನೆಡೆಯಾಗಿದೆ.

ಬೇಡಿಕೆ ಈಡೇರಿಲ್ಲ
ಬಂದರಿನ ಪೂರ್ವ ಬದಿ ಹೊಳೆಯಲ್ಲಿ ಹೂಳು ತುಂಬಿ ದಂಡೆ ಬಿದ್ದು ಬೋಟ್‌ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟವರಿಗೆ ಹಲವಾರು ಬಾರಿ ಮನವಿ ಮಾಡಲಾಗಿದೆ. ಮಲ್ಪೆ ಬಂದರಿನಲ್ಲಿ ಬೋಟುಗಳ ಒತ್ತಡ ಹೆಚ್ಚಾಗಿರುವುದರಿಂದ ಈ ಭಾಗದ ಬೋಟ್‌ ನಿಲುಗಡೆಗೆ ಸಮಸ್ಯೆಯಾಗುತ್ತಿದೆ. ಈ ಭಾಗದಲ್ಲಿ ಅಭಿವೃದ್ಧಿ ಕೆಲಸವಾದರೆ, ಮಲ್ಪೆ ಬಂದರಿನಲ್ಲಿ ಒತ್ತಡವನ್ನು ಕಡಿಮೆ ಮಾಡಬಹುದು.
-ಬಿ. ಬಿ. ಕಾಂಚನ್‌, ಅಧ್ಯಕ್ಷರು ಮೀನುಗಾರರ ಸಂಘ, ಹಂಗಾರಕಟ್ಟೆ-ಬೆಂಗ್ರೆ

Advertisement

1.78 ಕೋಟಿ ರೂ. ಅಂದಾಜು ಪಟ್ಟಿ
ಈಗಾಗಲೇ ಇಲ್ಲಿನ ಡ್ರೆಜ್ಜಿಂಗ್‌ ಕಾಮಗಾರಿಗಾಗಿ 1.78 ಕೋ. ರೂ. ಅಂದಾಜು ಪಟ್ಟಿ ಮಾಡಿ ನಿರ್ದೇಶಕರ ಕಚೇರಿಗೆ ಕಳುಹಿಸಲಾಗಿದೆ. ಮಂಜೂರಾಗಿ ದೊರೆತ ನಂತರ ಟೆಂಡರ್‌ ಕರೆದು ಕಾಮಗಾರಿಯನ್ನು ಆರಂಭಿಸಲಾಗುವುದು.
-ಕ್ಸೇವಿಯರ್‌ ಡಯಾಸ್‌, ಅಸಿಸ್ಟೆಂಟ್‌ ಎಂಜಿನಿಯರ್‌, ಮೀನುಗಾರಿಕೆ ಇಲಾಖೆ

- ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next