Advertisement
ಇದು ಮಕ್ಕಳಿಗೆ ಬೇಸಗೆ ರಜಾ ಸಮಯವಾಗಿದ್ದು, ಕೋಡಿಯ ಸೀವಾಕ್‌ನಲ್ಲಿ ದಟ್ಟನೆ ಹೆಚ್ಚಿದೆ.
ಇಲ್ಲಿಗೆ ದೂರ- ದೂರದ ಊರುಗಳಿಂದ ಆಗಮಿಸುವ ಪ್ರವಾಸಿಗರ ವಾಹನ ನಿಲುಗಡೆಗೆ ಸೂಕ್ತವಾದ ವ್ಯವಸ್ಥೆ ಆಗಬೇಕಾಗಿದೆ. ಅದಲ್ಲದೆ ಕುಂದಾಪುರದಿಂದ ಇಲ್ಲಿಗೆ ಸಂಪರ್ಕಿಸುವ ಸಂಪರ್ಕ ರಸ್ತೆಯೂ ಕಿರಿದಾಗಿರುವುದರ ಜತೆಗೆ, ಹದಗೆಟ್ಟಿದ್ದು, ಅದರ ದುರಸ್ತಿ ಮಾಡಲಿ. ಹೈ ಮಾಸ್ಟ್ ದೀಪ ಅಳವಡಿಕೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸಹಿತ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಬೇಕಾಗಿದೆ. ಇದಲ್ಲದೆ ಸಣ್ಣ ಪ್ರಮಾಣದ ಇನ್ನಷ್ಟು ಹೋಟೆಲ್‌ಗಳು, ಫಾಸ್ಟ್‌ಫುಡ್ ಮಳಿಗೆಗಳನ್ನು ತೆರೆದರೆ ಮತ್ತಷ್ಟು ಆಕರ್ಷಣೀಯವಾಗಬಹುದು ಎನ್ನುವುದು ಇಲ್ಲಿಗೆ ಬಂದಿದ್ದ ಪ್ರವಾಸಿಗರ ಬೇಡಿಕೆಯಾಗಿದೆ.
Related Articles
ಈಗಾಗಲೇ ಕೋಡಿ ಬೀಚ್‌ನ್ನು ಆಕರ್ಷಣೀಯವಾಗಿದಲು 1.5 ಕೋ.ರೂ. ವೆಚ್ಚದ ಯೋಜನೆ ಸಿದ್ಧಪಡಿಸಿ, ಪ್ರವಾಸೋದ್ಯಮ ಇಲಾಖೆಗೆ ಕಳುಹಿಸಿದ್ದೇವೆ. ಈ ವರ್ಷದಲ್ಲೇ ಇದನ್ನು ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕೂಡ ಪ್ರಯತ್ನಿಸಲಾಗುವುದು.
– ಅನಿತಾ ಭಾಸ್ಕರ್, ಸಹಾಯಕ ನಿರ್ದೇಶಕಿ,
ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ, ಉಡುಪಿ
Advertisement