Advertisement

ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ಇನ್ನಿಲ್ಲ

12:42 AM Feb 23, 2019 | Team Udayavani |

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ತೆಲುಗಿನ ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ಶುಕ್ರವಾರ ಮಧ್ಯಾಹ್ನ ಹೈದರಾಬಾದ್‌ನ ಎಐಜಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Advertisement

ಉಸಿರಾಟದ ತೊಂದರೆಅನುಭವಿಸುತ್ತಿದ್ದ ಅವರು, ಕೆಲ ದಿನಗಳ ಹಿಂದಷ್ಟೇ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 1982ರಲ್ಲಿ “ಇಂಟುಲೋ ರಾಮಯ್ಯ ವಿದೀಲೋ ಕೃಷ್ಣಯ್ಯ’ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ರಾಮಕೃಷ್ಣ, ಸುಮಾರು 30 ವರ್ಷಗಳಲ್ಲಿ ತೆಲುಗು, ಕನ್ನಡ, ಮಲಯಾಳಂ, ತಮಿಳು, ಹಿಂದಿ ಭಾಷೆಗಳಲ್ಲಿ ಸುಮಾರು ನೂರಕ್ಕೂ ಅಧಿಕ ಚಿತ್ರಗಳನ್ನು ನಿರ್ದೇಶಿಸಿದ್ದರು.

ತೆಲುಗಿನಲ್ಲಿ “ಅರುಂಧತಿ’, “ದೇವಿ ಪುತ್ರುಡು’, “ಅಮ್ಮವರು’, “ಅಂಜಿ’,”ಗೂಢಚಾರಿ ನಂ.1′, “ಮುದ್ದುಲ ಕೃಷ್ಣಯ್ಯ’, “ಮುರಳಿ ಕೃಷ್ಣುಡು’, “ಸ್ಟೇಷನ್‌ ಮಾಸ್ಟರ್‌’, ಕನ್ನಡದಲ್ಲಿ ರಮ್ಯಾ ಮತ್ತು ದಿಗಂತ್‌ ಅಭಿನಯಿಸಿದ್ದ “ನಾಗರಹಾವು’ ಸೇರಿ ಹಲವು ಸೂಪರ್‌ ಹಿಟ್‌ ಚಿತ್ರಗಳನ್ನು ಕೊಟ್ಟ ಹೆಗ್ಗಳಿಕೆ ಕೋಡಿ ರಾಮಕೃಷ್ಣ ಅವರಿಗೆ ಸಲ್ಲುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next