Advertisement

ಕೋಟೇಶ್ವರ: ಕೊಡಿಹಬ್ಬ ಸಂಪನ್ನ

01:41 AM Nov 20, 2021 | Team Udayavani |

ಕೋಟೇಶ್ವರ: ಇಲ್ಲಿನ ಶ್ರೀ ಕೋಟಿಲಿಂಗೇಶ್ವರ ದೇಗುಲದ ರಥೋತ್ಸವ (ಕೊಡಿಹಬ್ಬ) ಶುಕ್ರವಾರ ಸಂಭ್ರಮದಿಂದ ಜರಗಿತು.

Advertisement

ಪ್ರಧಾನ ಅರ್ಚಕ ಪ್ರಸನ್ನ ಕುಮಾರ್‌ ಐತಾಳ ಅವರ ನೇತೃತ್ವದಲ್ಲಿ ಧಾರ್ಮಿಕ ವಿ ಧಿ-ವಿಧಾನ ನಡೆದವು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಗಣೇಶ ಗೌಡ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಿದರು.

ಗಣಪತಿ ಪೂಜೆ, ಮಹಾಪೂಜೆಯ ಅನಂತರ ರಥಾರೋಹಣ ಮತ್ತು ಸಂಜೆ ರಥಾವರೋಹಣ ನಡೆಯಿತು. 25 ಸಾವಿರಕ್ಕೂ ಮಿಕ್ಕಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು. ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ವಿಷ್ಣುವರ್ಧನ್‌, ಅಡಿಷನಲ್‌ ಎಸ್‌.ಪಿ. ಕುಮಾರಚಂದ್ರ ಮಾರ್ಗದರ್ಶನದಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು.ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕಿಷ್ಕಿಂದ ಸ್ವಾಮೀಜಿ ಭೇಟಿ
ಕಿಷ್ಕಿಂದ ಪುರಿಯ ಹನುಮದ್‌ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಅಧ್ಯಕ್ಷ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಅವರು ರಥೋತ್ಸವದಲ್ಲಿ ಪಾಲ್ಗೊಂಡರು.

ಇಂದು ಉಪ್ಪುಂದ ಕೊಡಿಹಬ್ಬ
ಉಪ್ಪುಂದ: ಬೈಂದೂರು ಭಾಗದ ಉಪ್ಪುಂದ ಕೊಡಿಹಬ್ಬವೆಂದೇ ಪ್ರಸಿದ್ಧಿ ಪಡೆದ ಶ್ರೀ ದುರ್ಗಾಪರಮೇಶ್ವರೀ ದೇವಿಯ ಜಾತ್ರೆಗೆ ಸಕಲ ಸಿದ್ಧತೆಗಳು ನಡೆದಿದ್ದು ಶನಿವಾರ ಶ್ರೀದೇವಿಯ ಮಹಾರಥೋತ್ಸವ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next